ಅಯೋಧ್ಯಾ ರಾಮನ ಅಪೂರ್ವ ಸೇವೆ ನಡೆಸಿದ ಅರ್ಚಕ ತಿವಾರಿಯವರಿಗೆ ಪೇಜಾವರ ಶ್ರೀ ಸಂಮಾನ

Upayuktha
0


ಅಯೋಧ್ಯೆ: ಅಯೋಧ್ಯಾ ರಾಮ ಮಂದಿರದ ಅರ್ಚಕರಲ್ಲಿ ಓರ್ವರಾದ ಸಂತೋಷ್ ತಿವಾರಿಯವರು ಶ್ರೀ ಪೇಜಾವರ ಶ್ರೀಪಾದರನ್ನು ಸೋಮವಾರ ಭೇಟಿಯಾಗಿದ್ದರು.‌

1992 ರಲ್ಲಿ ವಿವಾದಿತ ಕಟ್ಟಡ ಉರುಳಿದ ಬಳಿಕ ಪೂಜ್ಯ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಂದ ತಾತ್ಕಾಲಿಕ ಕುಟೀರದಲ್ಲಿ ರಾತೋರಾತ್ರಿ ರಾಮಲಲ್ಲಾನ ಪ್ರತಿಷ್ಠಾಪನೆಯಾದ ಬಳಿಕ 42 ವರ್ಷಗಳ ಕಾಲ ರಾಮನ ನಿತ್ಯ ಪೂಜೆ ನಡೆಸಿದ್ದ ಮತ್ತು ನೂತನ ಮಂದಿರದಲ್ಲಿ ಶ್ರೀ ಬಾಲರಾಮನ ಪ್ರತಿಷ್ಠಾಪನೆಯಾದ ಬಳಿಕವೂ ಅರ್ಚಕರಲ್ಲಿ ಒಬ್ಬರಾಗಿ ಸೇವೆ ಸಲ್ಲಿಸುವ ಅವಕಾಶ ಪಡೆದ ಮಹಾಭಾಗ್ಯಶಾಲಿ ತಿವಾರಿಯವರು.‌

ಇಂದು ಶ್ರೀಗಳ ಭೇಟಿಯ ಸಂದರ್ಭದಲ್ಲಿ ಆ ಎಲ್ಲಾ ಅವಧಿಯ ಸೇವೆಯನ್ನು ಸ್ಮರಿಸಿಕೊಂಡು ಭಾವುಕರಾದರು ತಿವಾರಿಯವರು. ಶ್ರೀಗಳೂ ಅವರನ್ನು ಯಥೋಚಿತವಾಗಿ ಸಂಮಾನಿಸಿ ಆಶೀರ್ವದಿಸಿದರು.


ಚಿತ್ರ, ಮಾಹಿತಿ: ಜಿ. ವಾಸುದೇವ ಭಟ್ ಪೆರಂಪಳ್ಳಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top