ಅಯೋಧ್ಯೆ: ಮಂಗಳೂರಿನ ಕೆನರಾ ಹೈಸ್ಕೂಲಿನ ಹತ್ತನೇ ತರಗತಿಯ ವಿದ್ಯಾರ್ಥಿನಿ ನಿಮಿಷಾ ಶೆಣೈ ಅವರು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಫೆಬ್ರವರಿ 7 ರಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಪಾದಂಗಳವರ ನೇತೃತ್ವದಲ್ಲಿ ನಡೆದ ಮಂಡಲೋತ್ಸವದ ಅಷ್ಟಾವಧಾನ ಸೇವೆಯಲ್ಲಿ ಭರತನಾಟ್ಯವನ್ನು ಪ್ರದರ್ಶಿಸಿದರು.
ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದ ಸುತ್ತು ಉತ್ಸವದ ಬಳಿಕ ದೇವಳದ ಆವರಣದಲ್ಲಿಯೇ ನಿಮಿಷಾ ಶೆಣೈ ಭರತನಾಟ್ಯ ಸೇವೆಯನ್ನು ದೇವರಿಗೆ ಸಮರ್ಪಿಸಿದರು.
ನಿಮಿಷಾ ಶೆಣೈ ಅವರು ಮಂಗಲ್ಪಾಡಿ ನರೇಶ್ ಶೆಣೈ ಹಾಗೂ ಸುಮನಾ ಶೆಣೈ ಅವರ ಪುತ್ರಿ. ಗಾನನೃತ್ಯ ಅಕಾಡೆಮಿಯಲ್ಲಿ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಅವರ ಬಳಿ ನೃತ್ಯ ಅಧ್ಯಯನದಲ್ಲಿ ತೊಡಗಿದ್ದು ಸೀನಿಯರ್ ಮುಗಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ







