ಶಿಕ್ಷಾ ಸಾರಥಿ ವಿದ್ಯಾರ್ಥಿ ವೇತನ

Upayuktha
0


ಮಂಗಳೂರು: ಶಿಕ್ಷಣವನ್ನು ಉತ್ತೇಜಿಸುವ ಮತ್ತು ಸಮುದಾಯಗಳ ಸಬಲೀಕರಣದ ಹೆಜ್ಜೆಯಾಗಿ ಜೆ.ಕೆ.ಟೈರ್ಸ್, ಟಾಟಾ ಇನ್‍ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಮತ್ತು ಪ್ರೊಟೀನ್ ವಿದ್ಯಾದರ್ಶಾರ್ಥಿ ಸಹಯೋಗದಲ್ಲಿ ಭಾರೀ ವಾಹನ ಚಾಲಕರ ಹೆಣ್ಣುಮಕ್ಕಳಿಗಾಗಿ 'ಜೆ.ಕೆ.ಟೈರ್ಸ್ ಶಿಕ್ಷಾ ಸಾರಥಿ ವಿದ್ಯಾರ್ಥಿವೇತನ ಯೋಜನೆಯನ್ನು ಆರಂಭಿಸಿದೆ.


ಬಡ ಚಾಲಕರ ಹೆಣ್ಣುಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ಆರಂಭಿಸಲಾಗಿದೆ. ವಿವಿಧ ಪದವಿಪೂರ್ವ ಕೋರ್ಸ್‍ಗಳಿಗೆ ಅನುಗುಣವಾಗಿ ವಾರ್ಷಿಕ 15 ರಿಂದ 25 ಸಾವಿರ ರೂಪಾಯಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಇದು ಸಾರಿಗೆ ವಲಯದ ಕುಟುಂಬಗಳ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಗುರಿ ಹೊಂದಿದ್ದು, ಅರ್ಹ ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಆಕಾಂಕ್ಷೆಗಳನ್ನು ಯಾವುದೇ ತಡೆ ಇಲ್ಲದೇ ಮುಂದುವರಿಸಲು ಅನುವು ಮಾಡಿಕೊಡುತ್ತದೆ ಎಂದು ಜೆಕೆ ಟೈರ್ ಅಂಡ್ ಇಂಡಸ್ಟ್ರೀಸ್ ಲಿಮಿಟೆಡ್‍ನ ಅಧ್ಯಕ್ಷ ಮತ್ತು ಎಂಡಿ ಡಾ.ರಘುಪತಿ ಸಿಂಘಾನಿಯಾ ಪ್ರಕಟಣೆಯಲ್ಲಿ ಹೇಳಿದ್ದಾರೆ.


ಆನ್‍ಲೈನ್ ಅರ್ಜಿ ಪ್ರಕ್ರಿಯೆಯನ್ನು www.vidyasaarthi.co.in ನಲ್ಲಿ ನೋಂದಾಯಿಸಬಹುದಾಗಿದೆ. ಸಾರಿಗೆ ಉದ್ಯಮಕ್ಕೆ ವಾಣಿಜ್ಯ ವಾಹನಗಳ ಚಾಲಕರ ಕೊಡುಗೆ ಅಮೂಲ್ಯವಾಗಿದ್ದು, ಅವರ ಕುಟುಂಬಗಳ ಯೋಗಕ್ಷೇಮಕ್ಕೆ ನಮ್ಮ ಬದ್ಧತೆಯು ವ್ಯಾಪಾರಾಸಕ್ತಿಯನ್ನು ಮೀರಿದೆ. ಶಿಕ್ಷಣದ ಪರಿವರ್ತಕ ಶಕ್ತಿಯ ಮೇಲೆ ನಮಗೆ ನಂಬಿಕೆ ಇದ್ದು, ಪ್ರತಿ ಮಗುವಿಗೆ ಉತ್ಕøಷ್ಟತೆಯ ಅವಕಾಶವಿರುವ ವಾತಾವರಣವನ್ನು ಬೆಳೆಸಲು ಬದ್ಧ ಎಂದು ವಿವರಿಸಿದ್ದಾರೆ.


ಇದು ಕೇವಲ ಆರ್ಥಿಕ ನೆರವು ಮಾತ್ರವಾಗಿರದೇ ಮುಂದಿನ ಪೀಳಿಗೆಯ ಸಬಲೀಕರಣದ ಬಗೆಗಿನ ಉಪಕ್ರಮವಾಗಿದೆ. ಇದಕ್ಕೆ ಟಿಐಎಸ್‍ಎಸ್ ಮತ್ತು ಪ್ರೊಟೀನ್ ವಿದ್ಯಾದರ್ಶಾರ್ಥಿ ಪಾಲುದಾರರಾಗಿದ್ದಾರೆ ಎಂದು ತಿಳಿಸಿದ್ದಾರೆ.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Advt Slider:
To Top