ಪ್ರೇಮಿಗಳ ದಿನಕ್ಕೆ ಫಾರೆವರ್ ಮಾರ್ಕ್ ಐಕಾನ್ ಸಂಗ್ರಹ

Upayuktha
0


ಮಂಗಳೂರು: ಪ್ರೇಮಿಗಳ ದಿನದ ಅಂಗವಾಗಿ ಅರ್ಥಪೂರ್ಣ ಸಂಬಂಧ ಹಾಗೂ ಶಾಶ್ವತ ಪ್ರೀತಿಯನ್ನು ಆಚರಿಸುವವರಿಗಾಗಿ ಡಿ ಬೀರ್ಸ್ ಫಾರೆವರ್ ಮಾರ್ಕ್, ಕ್ಲಾಸಿಕ್ ಫಾರೆವರ್‍ಮಾರ್ಕ್ ಐಕಾನ್ ಸಂಗ್ರಹವನ್ನು ಪ್ರಸ್ತುತಪಡಿಸಿದೆ. ಇದು ನೈಸರ್ಗಿಕ, ಸುಂದರ ವಜ್ರಗಳೊಂದಿಗೆ ಪ್ರೇಮಿಗಳ ದಿನವನ್ನು ಶಾಶ್ವತ ಕ್ಷಣವಾಗಿಸಲಿದೆ.


ಜ್ಯೋತಿ ಸರ್ಕಲ್ ಬಳಿಯ ಮಳಿಗೆಯಲ್ಲಿ ಇರುವ ಈ ಅಪೂರ್ವ ಸಂಗ್ರಹದಲ್ಲಿ ಸೊಗಸಾದ ಕಿವಿಯೋಲೆಗಳು, ವಿಭಿನ್ನ ಬಳೆಗಳು, ಉಂಗುರ ಮತ್ತು ಸಮಕಾಲೀನ ಪೆಂಡೆಂಟ್‍ಗಳನ್ನು 18 ಕ್ಯಾರೆಟ್ ಹಳದಿ, ಬಿಳಿ ಮತ್ತು ಗುಲಾಬಿ ಚಿನ್ನದಿಂದ ರಚಿಸಲಾಗಿದೆ. ಜತೆಗೆ ಓಪನ್ ವರ್ಕ್, ವರ್ಣರಂಜಿತ ಎನಾಮೆಲ್, ಪೇವ್ ಸೆಟ್ ವಜ್ರಗಳು ಮತ್ತು ವಿವಿಧ ವಜ್ರದ ಆಕಾರಗಳನ್ನು ಒಳಗೊಂಡ ವಿಶಿಷ್ಟ ವಿನ್ಯಾಸಗಳು ಪ್ರದರ್ಶನಕ್ಕಿವೆ ಎಂದು ಡಿಬೀರ್ಸ್ ಫಾರೆವರ್ ಮಾರ್ಕ್ ಉಪಾಧ್ಯಕ್ಷ ಅಮಿತ್ ಪ್ರತಿಹಾರಿ ತಿಳಿಸಿದ್ದಾರೆ.


ಫಾರೆವರ್ ಐಕಾನ್ ಸಂಗ್ರಹವು ತಮ್ಮ ಪ್ರೀತಿಯ ಅನನ್ಯ ಪ್ರಯಾಣವನ್ನು ಸಂಭ್ರಮಿಸಲು ಬಯಸುವವರಿಗೆ ಅತ್ಯಂತ ಸೂಕ್ತ ಅಥವಾ ಅವರೊಂದಿಗೆ ಮಹತ್ವದ ಕ್ಷಣಗಳನ್ನು ಸೆರೆ ಹಿಡಿಯಲು ಬಯಸುವವರಿಗೆ ಅತ್ಯುತ್ತಮ ಆಯ್ಕೆ ಎಂದು ಪ್ರಕಟಣೆ ಹೇಳಿದೆ.


ಫಾರೆವರ್ ಮಾರ್ಕ್ ಐಕಾನ್ ಸಂಗ್ರಹ, ಜಾಗರೂಕತೆಯಿಂದ ಆರಿಸಿದ ತುಣುಕುಗಳನ್ನು ಸಂಗ್ರಹಿಸಿ ಅದನ್ನು ಪ್ರಣಯ ಮತ್ತು ಅತ್ಯಾಧುನಿಕತೆಯ ಸಾರವನ್ನು ಸೆರೆ ಹಿಡಿಯುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Advt Slider:
To Top