ಸಚಿವ ಈಶ್ವರ ಖಂಡ್ರೆಯವರಿಂದ ದ.ಕ.ಜಿಲ್ಲಾ ಪತ್ರಕರ್ತರ ಗ್ರಾಮ ವಾಸ್ತವ್ಯದ ಆಮಂತ್ರಣ ಪತ್ರಿಕೆ ಬಿಡುಗಡೆ

Upayuktha
0

 


ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ,ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ,ದ.ಕ ಜಿಲ್ಲಾ ಪಂಚಾಯತ್,ಸುಳ್ಯ ತಾಲೂಕು ಪಂಚಾಯತ್ ,ದ.ಕ ಜಿಲ್ಲಾ ಪೊಲೀಸ್ ಇಲಾಖೆ. ಹರಿಹರ,ಕೊಲ್ಲಮೊಗರು ಗ್ರಾಮ ಪಂಚಾಯತ್ ಮತ್ತು ಸ್ಥಳೀಯಾಡಳಿತ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ  ಕೊಲ್ಲಮೊಗ್ರ ಬಂಗ್ಲೆಗುಡ್ಡೆ ಸರಕಾರಿ ಶಾಲಾ ವಠಾರದಲ್ಲಿ ಫೆ.10ರಂದು  ನಡೆಯಲಿರುವ ಪತ್ರಕರ್ತರ 5ನೇ ಗ್ರಾಮ ವಾಸ್ತವ್ಯದ ಆಮಂತ್ರಣ ಪತ್ರವನ್ನು ಅರಣ್ಯ ಹಾಗೂ ಪರಿಸರ ಸಚಿವ ಈಶ್ವರ ಖಂಡ್ರೆ ಹಾಗೂ ರಾಜ್ಯ ಸಭಾ ಸದಸ್ಯರು ಹಾಗೂ ಶ್ರೀ ಧರ್ಮಸ್ಥಳ ಕ್ಷೇತ್ರಧರ್ಮಾಧಿಕಾರಿ ಡಾ.ಶ್ರೀ ವೀರೇಂದ್ರ ಹೆಗ್ಗಡೆ  ಧರ್ಮಸ್ಥಳದಲ್ಲಿ ಏಕಬಳಕೆ ಪ್ಲಾಸ್ಟಿಕ್ ನಿಷೇಧ ಘೋಷಣೆ ಕಾರ್ಯಕ್ರಮ ದಲ್ಲಿಂದು  ಬಿಡುಗಡೆ ಮಾಡಿದರು.  


ಶುಭ ಹಾರೈಸಿದ ಡಾ.ಡಿ.ವೀರೇಂದ್ರ ಹೆಗ್ಗಡೆ:-

ಈ ಸಂದರ್ಭದಲ್ಲಿ ಡಾ.ಶ್ರೀ ವೀರೇಂದ್ರ ಹೆಗ್ಗಡೆ ಯವರು ಮಾತನಾಡುತ್ತಾ, ಮಹಾತ್ಮಗಾಂಧಿಯವರು ಸಮಸ್ಯೆ ತಿಳಿಯಲು  ದೇಶಾದ್ಯಂತ ಜನ ಸಾಮಾನ್ಯರು ಸಂಚರಿಸುತ್ತಿದ್ದ ತೃತೀಯ ದರ್ಜೆಯ ರೈಲು ಬೋಗಿಯಲ್ಲಿ ಜನರ ಬಳಿ ತೆರಳು ತ್ತಿದ್ದರು.ಅವರು ಜನರೊಂದಿಗೆ ಇದ್ದಾಗ ಜನ ಜೀವನ ಸಮಸ್ಯೆ ಅರ್ಥ ಮಾಡಿಕೊಳ್ಳಲು ಸಾಧ್ಯ. ಪತ್ರಕರ್ತರು ಗ್ರಾಮದ ಜನರ ಸಮಸ್ಯೆ ಬಗ್ಗೆ ಅರಿತು ಕೊಳ್ಳಲು ಗ್ರಾಮಕ್ಕೆ ತೆರಳಲು ಚಿಂತನೆ ಮಾಡಿರುವ  ಪತ್ರಕರ್ತರ ಗ್ರಾಮ ವಾಸ್ತವ್ಯ ಶ್ಲಾಘನೀಯ ಎಂದು ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಹಾ ರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ, ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ,ಕೋಶಾಧಿಕಾರಿ ಭಾಸ್ಕರ ರೈ ಕಟ್ಟ, ಕಾರ್ಯ ಕಾರಿ ಸಮಿತಿ ಸದಸ್ಯ ರಾಜೇಶ್ ದಡ್ಡಂಗಡಿ ಬೆಳ್ತಂಗಡಿ ತಾಲೂಕು ಕಾರ್ಯ ನಿರತ ಪತ್ರ ಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ ,ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಮಲ,ಉಪಾಧ್ಯಕ್ಷ ಶ್ರೀನಿವಾಸ ರಾವ್  ಪಂಚಾಯತ್ ಕಾರ್ಯ ದರ್ಶಿ ಡಾ.ರಘು ಮೊದಲಾದವರು  ಉಪಸ್ಥಿತರಿದ್ದರು.


   ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   .

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top