ಮಂಗಳೂರು: ಜಪ್ಪಿನಮೊಗರು ರಾಷ್ಟ್ರೀಯ ಹೆದ್ದಾರಿಯ ಕಡೆಕಾರು ಎಂಬಲ್ಲಿ ನೇತ್ರಾವತಿ ಸೇತುವೆಯ ಕೆಳಭಾಗದಿಂದ ಮಂಗಳಾದೇವಿ ಮತ್ತು ಪಂಪ್ವೆಲ್ ರಸ್ತೆಯನ್ನು ಸಂಪರ್ಕಿಸಲು ನಿರ್ಮಿಸಲಾದ ಕೂಡುರಸ್ತೆಗೆ ಚಾಲನೆ ನೀಡಲಾಯಿತು.
ಈ ಹಿಂದೆ ಜಪ್ಪಿನಮೊಗರು, ಕಡೆಕಾರು ಪ್ರದೇಶಗಳಿಂದ ನಗರಕ್ಕೆ ಬರಲು ಜನರು, ಕಲ್ಲಾಪುವರೆಗೆ ಹೋಗಿ ತಿರುಗಿ ಬರುವ ಅನಿವಾರ್ಯತೆ ಇತ್ತು. ಅಲ್ಲದೇ ಈ ಭಾಗದ ಮಕ್ಕಳು ಹಾಗೂ ಹಿರಿಯರಿಗೆ ಇಲ್ಲಿನ ಹೆದ್ದಾರಿಯನ್ನು ದಾಟುವುದೇ ಸಾಹಸಮಯವಾಗಿತ್ತು. ಈಗ ಪಾಲಿಕೆ ವತಿಯಿಂದ ಒಂದು ಕೋಟಿ ರೂಪಾಯಿ ಅನುದಾನದಲ್ಲಿ ಕೂಡುರಸ್ತೆ ನಿರ್ಮಿಸಲಾಗಿದ್ದು ಈ ಭಾಗದ ಜನರಿಗೆ ಅತ್ಯಂತ ಪ್ರಯೋಜನಕಾರಿಯಾಗಲಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಹೇಳಿದರು.
ಈ ನಿಟ್ಟಿನಲ್ಲಿ ಸಹಕರಿಸಿದ ಜಿಲ್ಲೆಯ ಸಂಸದರಾದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮಾಜಿ ಸಚಿವರಾದ ಕೃಷ್ಣ ಜೆ ಪಾಲೆಮಾರ್, ಮ.ನ.ಪಾ ಸದಸ್ಯೆ ವೀಣಾ ಮಂಗಳ ಅವರಿಗೆ ಸ್ಥಳೀಯರು ಧನ್ಯವಾದಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ನಿತಿನ್ ಕುಮಾರ್, ಹರೀಶ್, ಪ್ರಶಾಂತ್, ಪುಷ್ಪರಾಜ್, ಹರಿಪ್ರಸಾದ್, ಕೊರಗಪ್ಪ, ಸೂರಜ್, ನವೀನ್ ಚಂದ್ರ, ಶ್ಯಾಮ್ ಪ್ರಸಾದ್, ಮನೋಜ್, ಮಣಿಶ್, ಉಮಾ ಪ್ರಸಾದ್, ನಂದರಾಜ್, ರಿಲೇರಿಯನ್ ಡಿಸೋಜ, ಐವನ್ ಡಿಸೋಜ, ಜೆ.ಕೆ ರಾವ್, ರಾಮಪ್ರಸಾದ್, ಯೋಗೇಶ್ ಕುಮಾರ್ ಜೆಪ್ಪು, ಸಂತೋಷ್, ಮನೋಜ್ ಕುಮಾರ್, ವಾರಿಜಾ, ಜಿ.ಕೆ ರಾವ್, ವಿಲಿಯಂ, ಕೃಷ್ಣರಾವ್, ಪ್ರವೀಣ್ ಕುಮಾರ್, ಉದಯ್, ದಿನೇಶ್ ಕರ್ಕೇರ, ಶೈಲೇಶ್ ಶೆಟ್ಟಿ, ಫ್ಲಾವಿಯ, ಶಿವಾನಂದ, ಯೋಗೀಶ್ ರಾವ್, ಮುಂತಾದವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ