ಯಕ್ಷಗಾನವು ಎಲ್ಲಾ ವರ್ಗದವರನ್ನೂ ಆಕರ್ಷಿಸಬಲ್ಲ ಕಲೆ: ಕಲ್ಕೂರ

Upayuktha
0

ಮಂಗಳೂರು: ಯಕ್ಷಗಾನದಂತಹ ರಂಗಭೂಮಿಗೆ ಈ ಕಾಲಘಟ್ಟದಲ್ಲಿ ಎಲ್ಲಾ ಸ್ತರದ ವ್ಯಕ್ತಿಗಳೂ ವಯೋಮಾನದವರೂ ಆಕರ್ಷಿಸಲ್ಪಡುತ್ತಾರೆ. ಯಕ್ಷಕಲೆಗೆ ಆ ರೀತಿಯ ಮಾನ - ಸಮ್ಮಾನಗಳು ವಿಶ್ವದೆಲ್ಲೆಡೆ ದೊರೆಯುತ್ತಿವೆ. ಪೂರ್ವಸೂರಿಗರ ಕೈಯ್ಯಿಂದ ಪಂಡಿತ-ಪಾಮರರ ಬಳಿಗೂ ಅದು ವ್ಯಾಪಿಸಿದೆ. ಇಂತಹ ಶ್ರೀಮಂತ ಕಲೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಶಾರದಾ ವಿದ್ಯಾಲಯದ ನಾಲ್ಕನೇ ತರಗತಿಯ ಯಕ್ಷ ವಿದ್ಯಾರ್ಥಿ ಅದ್ವಿತ್ ನನ್ನು ಅಲೆವೂರಾಯ ಪ್ರತಿಷ್ಠಾನದ ವತಿಯಿಂದ ಪುರಸ್ಕರಿಸುವುದು ಸ್ತುತ್ಯರ್ಹ ಕಾರ್ಯ. ಇದು ಎಲ್ಲೆಡೆ ನಡೆಯಲಿ. ಕಲ್ಕೂರ ಪ್ರತಿಷ್ಠಾನದ ಬೆಂಬಲ ಸದಾ ಈ ಸಂಘಟನೆಗಿದೆ ಎಂದು ಕ.ಸಾ.ಪ. ದ ಮಾಜಿ ಅಧ್ಯಕ್ಷ  ಪ್ರದೀಪ ಕುಮಾರ ಕಲ್ಕೂರ ಶ್ರೀಕ್ಷೇತ್ರ ಶರವಿನಲ್ಲಿ ನಡೆಯುತ್ತಿರುವ ಯಕ್ಷ ತ್ರಿವೇಣಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.


ಡಾ. ಹರಿಕೃಷ್ಣ ಪುನರೂರು, ರಾಘವೇಂದ್ರ ಶಾಸ್ತ್ರೀಗಳು, ವರ್ಕಾಡಿ ಮಾಧವ ನಾವಡ ಅತಿಥಿಗಳಾಗಿ ಭಾಗವಹಿಸಿ ಮಾ. ಅದ್ವಿತ್ ಪಿ ಗೌಡನಿಗೆ ಶುಭ ಕೋರಿದರು.


ಸಂಘಟಕ ಸುಧಾಕರ ರಾವ್ ಪ್ರಸ್ತಾವನೆ ಮಾಡಿ ಬಾಲಕನನ್ನು ಅಭಿನಂದನಾ ಮಾತುಗಳಿಂದ ಪ್ರೋತ್ಸಾಹಿಸಿದರು. ಮಧುಸೂದನ ಅಲೆವೂರಾಯರು ಧನ್ಯವಾದವಿತ್ತರು. ಬಳಿಕ ವೀರ ಮಾತೆ ಭದ್ರಕಾಳಿ ಎಂಬ ಪೌರಾಣಿಕ ಪ್ರಸಂಗ ಪ್ರದರ್ಶನಗೊಂಡಿತು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top