ಕಲ್ಲಡ್ಕ ಶ್ರೀ ರಾಮ ಮಂದಿರದ ಶತಾಬ್ದಿ: 13 ಕೋಟಿ ರಾಮನಾಮ ಜಪ ಯಜ್ಞ

Upayuktha
0

30 ಮಂದಿ ಸಾಧಕರಿಗೆ ಸಮ್ಮಾನ



ಬಂಟ್ವಾಳ: ಕಲ್ಲಡ್ಕ ಶ್ರೀ ರಾಮ ಮಂದಿರದ ಶತಾಬ್ದಿ ಸಂಭ್ರಮದಲ್ಲಿ ಹಿನ್ನಲೆಯಲ್ಲಿ 13 ಕೋಟಿ ರಾಮನಾಮ ಜಪ ಯಜ್ಞವು ಕಲ್ಲಡ್ಕ ಶ್ರೀ ರಾಮ ಮಂದಿರದಲ್ಲಿ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರ ಪೌರೋಹಿತ್ಯದಲ್ಲಿ ಶನಿವಾರ ನಡೆಯಿತು. ಈ ಸಂದರ್ಭದಲ್ಲಿ ಭಜನಾ ಮಂದಿರದ ಸೇವೆಯೊಂದಿಗೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಕಲ್ಲಡ್ಕ ಪರಿಸರದ 30 ಮಂದಿ ಸಾಧಕರನ್ನು ಗ್ರಾಮ ಸಮ್ಮಾನವನ್ನಿತ್ತು ಗೌರವಿಸಲಾಯಿತು.


ಸನ್ಮಾನಿತರು: ಮಾಜಿ ಶಾಸಕ ರುಕ್ಮಯ ಪೂಜಾರಿ, ರಶ್ಮಿತಾ ಯುವರಾಜ ಜೈನ್, ಚಂದ್ರಶೇಖರ ಆಚಾರ್ಯ ರಾಮನಗರ, ನಾಗೇಶ್ ಕಲ್ಲಡ್ಕ, ವಸಂತ ಮಾಧವ, ರಮೇಶ ಎನ್, ಚಿ.ರಮೇಶ ಕಲ್ಲಡ್ಕ,ಎನ್. ರಾಜೇಂದ್ರ ಹೊಳ್ಳ, ರುಕ್ಮಯ ನಲಿಕೆ ಕೊಳಕೀರು, ಶಾರದಾ ಜಿ., ಎಂ.ವಸಂತ ರಾವ್ ಕಲ್ಲಡ್ಕ, ಕೊರಗಪ್ಪ ಬೊಂಡಾಲ, ನಳಿನಿ ಪ್ರದೀಪ್ ರಾವ್, ಚಿದಾನಂದ ಆಚಾರ್ಯ ಕಲ್ಲಡ್ಕ, ಕೊರಗಪ್ಪ ಕೊಟ್ಟಾರಿ ಕೋಳಕೀರು, ರಮೇಶ್ ಆಚಾರ್ ಕಲ್ಲಡ್ಕ, ಡೊಂಬಯ್ಯ ಟೈಲರ್ ಕಲ್ಲಡ್ಕ, ತಾರಾನಾಥ ಬಂಗೇರ ಕಲ್ಲಡ್ಕ, ವಿಠಲ ಪ್ರಭು ಮಕ್ಕಾರು, ಸತೀಶ ಆಚಾರ್ಯ ಕಲ್ಲಡ್ಕ, ಶಿವರಾಮ ಹೊಳ್ಳ ಕಲ್ಲಡ್ಕ, ವೀರಪ್ಪ ಮೂಲ್ಯ ಕಲ್ಲಡ್ಕ, ಶ್ರೀಧರ ಶೆಟ್ಟಿ ಬೊಂಡಾಲ, ಶಂಕರ ಐತಾಳ್ ಓಣಿಬೈಲು, ಶ್ರೀನಿಧಿ ಆರ್.ಎಸ್. ಕೊಳಕೀರು, ಸರಸ್ವತೀ ನಾಗೇಶ್ ನಿಟಿಲಾಪುರ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಜಗನ್ನಾಥ ಬಂಗೇರ‌, ಮೋಹನ ರಾವ್ ಅವರು ಗ್ರಾಮ ಸಮ್ಮಾನ ಸ್ವೀಕರಿಸಿದರು.



ಶಿವಕುಮಾರ್, ಯತಿರಾಜ ಪಿ., ಸೌಮ್ಯ‌ ಮಾತಾಜಿ, ನಾರಾಯಣ ಗೌಡ, ಗೋಪಾಲ್ ಅವರು ಸಮ್ಮಾನಿತರನ್ನು ಪರಿಚಯಿಸಿದರು.


ಬೆಳಿಗ್ಗೆ ಶ್ರೀ ರಾಮ ವಿದ್ಯಾಕೇಂದ್ರದ ವಿದ್ಯಾರ್ಥಿ ಗಳಿಂದ ಭಜನೆ, ರಾಮನಾಮ ತಾರಕ ಪೂರ್ಣಾಹುತಿ ಬಳಿಕ ಮಂಗಳರಾತಿ, ಸಾರ್ವಜನಿಕ ಅನ್ನಸಂತರ್ಪಣೆ, ಮಧ್ಯಾಹ್ನದ ನಂತರ ಶ್ರೀ ಕೋದಂಡರಾಮ ಯಕ್ಷಗಾನ ಮಂಡಳಿ ಹನುಮಗಿರಿ ಮೇಳದಿಂದ "ಶ್ರೀ ರಾಮ ಪಟ್ಟಾಭಿಷೇಕ" ಯಕ್ಷಗಾನ ಬಯಲಾಟ ಪ್ರದರ್ಶನ ಗೊಂಡಿತು. ಸಂಜೆ ಧ್ವಜಾವತರಣದ ಬಳಿಕ ವಾರದ ಭಜನಾ ಸಂಕೀರ್ತನೆ ನಡೆಯಿತು.


ಸಂಸದ, ಶಾಸಕರ ಭೇಟಿ:

ಸಂಸದ ನಳಿನ್ ಕುಮಾರ್ ಕಟೀಲ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ, ಹೈಕೋಟ್೯ ನ್ಯಾಯವಾದಿ ಅರುಣ ಶ್ಯಾಮ, ಎಸ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಜಿ. ರಾಜಾರಾಮ ಭಟ್, ಉದ್ಯಮಿ ರಘುನಾಥ ಸೋಮಯಾಜಿ, ಹರಿಪ್ರಸಾದ ಪೆರಿಯಾಪು, ಡಾ.ಕಮಲಾ ಪ್ರಭಾಕರ ಭಟ್ ಹಾಗೂ ವಿವಿಧ ಸಮಿತಿ ಪದಾಧಿಕಾರಿಗಳು ಇದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top