ಮುತ್ತೂರು ಪಬ್ಲಿಕ್ ಶಾಲೆಯಲ್ಲಿ ಪಿಎಂ ಶ್ರೀ ಯೋಜನೆಯ ಸೌಲಭ್ಯಗಳ ಉದ್ಘಾಟನೆ

Upayuktha
0


ಕೊಳವೂರು: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕೊಳವೂರಿನ ಮುತ್ತೂರು ಪಬ್ಲಿಕ್ ಶಾಲೆಯಲ್ಲಿ ಪಿಎಂ ಶ್ರೀ ಯೋಜನೆಯ ಸೌಲಭ್ಯಗಳನ್ನು ಶನಿವಾರ ಶಾಸಕ ಡಾ.ಭರತ್ ಶೆಟ್ಟಿ ವೈ ಉದ್ಘಾಟಿಸಿದರು.


ಈ ಸಂದರ್ಭ ಮಾತನಾಡಿದ ಅವರು, ಪಿಎಂ ಶ್ರೀ ಯೋಜನೆಯ ಫಲಾನುಭವಿ ಶಾಲೆಗಳು ಮುಖ್ಯವಾಗಿ ಲ್ಯಾಬ್‌ಗಳು, ಸ್ಮಾರ್ಟ್ ಕ್ಲಾಸ್‌ರೂಮ್‌ಗಳು, ಲೈಬ್ರರಿಗಳು, ಕ್ರೀಡಾ ಉಪಕರಣಗಳು, ಕಲಾ ಕೊಠಡಿ ಇತ್ಯಾದಿಗಳನ್ನು ಒಳಗೊಂಡಂತೆ ಆಧುನಿಕ ಮೂಲಸೌಕರ್ಯಗಳೊಂದಿಗೆ ಸುಸಜ್ಜಿತವಾಗಿರುತ್ತವೆ. ನೀರಿನ ಸಂರಕ್ಷಣೆ, ತ್ಯಾಜ್ಯ ಮರುಬಳಕೆ, ಇಂಧನ-ಸಮರ್ಥ ಮೂಲಸೌಕರ್ಯ ಮತ್ತು ಪಠ್ಯಕ್ರಮದಲ್ಲಿ ಸಾವಯವ ಜೀವನಶೈಲಿಯ ಏಕೀಕರಣದೊಂದಿಗೆ ಹಸಿರು ಶಾಲೆಗಳಾಗಿ ಅಭಿವೃದ್ಧಿಗೊಳ್ಳುತ್ತವೆ. ವಿದ್ಯಾರ್ಥಿಗಳು ಶಾಲೆಯಿಂದ ಹೊರಬಂದು ಸಮಾಜದಲ್ಲಿ ಜವಾಬ್ದಾರಿ ನಿರ್ವಹಿಸಲು ಶಕ್ತಿ, ಸಾಮರ್ಥ್ಯ, ಸವಾಲು ಎದುರಿಸಲು ಪಿಎಂ ಶ್ರೀ ಯೋಜನೆ ನೆರವಾಗುತ್ತದೆ ಎಂದರು.


ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಜನೆಯನ್ನು ಘೋಷಿಸಿದ್ದು, 14,500 ಶಾಲೆಗಳಲ್ಲಿ ಈ ಶಾಲೆಯೂ ಒಂದು‌ ಎಂದು ನುಡಿದರು. ಆವಿಷ್ಕಾರ ಆಧಾರಿತ, ಕಲಿಕಾ ಕೇಂದ್ರಿತ ಬೋಧನೆಯ ವಿಧಾನಕ್ಕೆ ಒತ್ತು ನೀಡಲಾಗಿದ್ದು ಸರ್ವಾಂಗೀಣವಾಗಿ ವಿದ್ಯಾರ್ಥಿಯ ಪ್ರತಿಭೆಯನ್ನು ಪ್ರೋತ್ಸಾಹಿಸುವುದು ಪ್ರಧಾನಿ ಮೋದಿಯವರ ಉದ್ದೇಶವಾಗಿದೆ ಎಂದರು.


ಇದೇ ಸಂದರ್ಭ ಯಾವುದೇ ಕಾರಣಕ್ಕೂ ಧರ್ಮ, ರಾಜಕೀಯ ಶಾಲಾ ವಠಾರ ಸುಳಿಯದಂತೆ ಎಚ್ಚರಿಕೆ ವಹಿಸಬೇಕು. ಶಿಕ್ಷಣವೇ ಆದ್ಯತೆಯಾಗಬೇಕು  ಎಂದು ಸೂಚನೆ ನೀಡಿದರು. ಮುತ್ತೂರು ಪಂಚಾಯತ್ ಅಧ್ಯಕ್ಷ ಪ್ರವೀಣ್ ಆಳ್ವ ಗುಂಡ್ಯ, ಶಾಲಾ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ನಾಗೇಶ್ ಶೆಟ್ಟಿ ಮುತ್ತೂರು, ಮುತ್ತೂರು ಪಂಚಾಯತ್ ಉಪಾಧ್ಯಕ್ಷರು ಮತ್ತು ಪಂ. ಸದಸ್ಯರುಗಳು, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ಸ್ಥಳೀಯ ಭಾಗದ ಶಾಲಾ ಹಿತೈಷಿಗಳು, ಶಾಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top