ಮ್ಯೂಚುವಲ್ ಫಂಡ್‍ನಲ್ಲಿ ಬಂಡವಾಳ ಹಾಕುವುದು ಹೆಚ್ಚು ಸುರಕ್ಷಿತ ಹಾಗೂ ಲಾಭದಾಯಕ: ಡಿ. ವೀರೇಂದ್ರ ಹೆಗ್ಗಡೆ

Upayuktha
0



ಉಜಿರೆ: ಮ್ಯೂಚ್ಯುವಲ್ ಫಂಡ್‍ನಲ್ಲಿ ಬಂಡವಾಳ ಹಾಕುವುದರಿಂದ ಬ್ಯಾಂಕಿಗಿಂತಲೂ ಅಧಿಕ ಲಾಭ ಸಿಗುತ್ತದೆ ಹಾಗೂ ಅದು ಹೆಚ್ಚು ಸುರಕ್ಷಿತವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.



ಅವರು ಭಾನುವಾರ ಧರ್ಮಸ್ಥಳದಲ್ಲಿ ಬೆಂಗಳೂರಿನ ಆರಾ ಆರ್ಥಿಕ ಸೇವಾ ಸಂಸ್ಥೆಯ ವೀಡಿಯೊ ಮತ್ತು ಮಾಹಿತಿಪತ್ರ ಅನಾವರಣಗೊಳಿಸಿ ಮಾತನಾಡಿದರು.



ಆರಾ ಸೇವಾ ಸಂಸ್ಥೆಯು ಕಳೆದ ಎರಡು ವರ್ಷಗಳಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರಿಗೆ ಬಂಡವಾಳ ಹೂಡಿಕೆ ಬಗ್ಯೆ ಮಾಹಿತಿ, ಮಾರ್ಗದರ್ಶನ ನೀಡಿ ಸಹಕರಿಸುತ್ತಿದ್ದಾರೆ. ದೀರ್ಘಾವಧಿ ಹೂಡಿಕೆಯಿಂದ ಹೆಚ್ಚು ಲಾಭ ಪಡೆಯಬಹುದು ಎಂದು ಅವರು ತಿಳಿಸಿದರು.



ಸಾರ್ವಜನಿಕರಿಗೆ ಬೇಕಾದ ಉಪಯುಕ್ತ ಮಾಹಿತಿ ಹಾಗೂ ಸಲಹೆ, ವೀಡಿಯೊ ಹಾಗೂ ಮಾಹಿತಿಪತ್ರದಲ್ಲಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್, ಆರಾ ಸಂಸ್ಥೆಯ ನಿರ್ದೇಶಕ ಶ್ರೀಧರ ಭಟ್, ಹಿರಿಯ ಅಧಿಕಾರಿ ಪ್ರತೀಕ್ ಓರಾ ಮತ್ತು ಉಜಿರೆ ಶಾಖೆಯ ಪ್ರಬಂಧಕ ಜನಾರ್ದನ ಪಡ್ಡಿಲ್ಲಾಯ ಉಪಸ್ಥಿತರಿದ್ದು, ಪೂರಕ ಮಾಹಿತಿ ನೀಡಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   .


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top