ಸರಕಾರವು ಇಲಾಖೆಗಳ ಮೂಲಕ ರೈತರಿಗೆ, ಸಾರ್ವಜನಿಕರಿಗೆ ಅನೇಕ ಸೌಲಭ್ಯಗಳನ್ನು ಕೊಡುತ್ತಿದೆ, ಕೊಡುತ್ತಿರುತ್ತದೆ. ಅದಕ್ಕಾಗಿ ಪ್ರತೀ ಬಜೆಟ್‌ನಲ್ಲಿ ಕೋಟಿಗಟ್ಟಲೆ ಅನುದಾನವನ್ನೂ ಬಿಡುಗಡೆ ಮಾಡಲಾಗುತ್ತದೆ.
ಅಂತಹ ಸೌಲಭ್ಯಗಳು ತಾಲೂಕಿನಲ್ಲಿರುವ ಇಲಾಖೆಗಳ ಮೂಲಕ ವಿತರಿಸಲಾಗುತ್ತದೆ. ಆದರೆ, ಅವುಗಳ ಮಾಹಿತಿಗಳನ್ನು ಸಾಮಾನ್ಯ ರೈತರಿಗೆ, ಸಾರ್ವಜನಿಕರಿಗೆ ಸ್ಪಷ್ಟವಾಗಿ ತಲುಪಿಸುವ ವ್ಯವಸ್ಥೆ ಇಲ್ಲ.
1) ಸಾಮಾನ್ಯವಾಗಿ ಇಲಾಖೆಗಳ ಗೋಡೆಯನ್ನೇ ನೋಟೀಸ್ ಬೋರ್ಡ್ ಮಾಡಿಕೊಂಡು ಅಲ್ಲೊಂದು ಮಾಹಿತಿಯನ್ನು ಅಂಟಿಸಲಾಗುತ್ತದೆ. ಸಾಮಾನ್ಯವಾಗಿ ಬೆರಳೆಣಿಕೆಯ ಜನರು ಭೇಟಿ ಕೊಡುವುದರಿಂದ ಈ ನೋಟೀಸ್ ಬೋರ್ಡ್ ಮಾಹಿತಿ ಎಲ್ಲರಿಗೂ ತಲುಪುವುದಿಲ್ಲ.
2) ದಿನ ಪತ್ರಿಕೆಗಳಲ್ಲಿ ಚುಟುಕಾಗಿ ಒಂದು ಸುದ್ದಿ ಪ್ರಕಟಣೆ ಮಾಡಲಾಗುತ್ತದೆ. ಪೇಪರ್ ಓದುವವರ ಗಮನಕ್ಕೂ ಬಾರದಷ್ಟು ಚಿಕ್ಕದಾದ ಆ ಸುದ್ದಿಯಿಂದಲೂ ಎಲ್ಲರಿಗೂ ಮಾಹಿತಿ ತಲುಪುವುದಿಲ್ಲ. ಒಂದು ಎಲ್ಲ ಪತ್ರಿಕೆಗಳಲ್ಲಿ ಪ್ರಕಟಣೆ ಬಂದಿರುವುದಿಲ್ಲ, ಮತ್ತೊಂದು ಎಲ್ಲರೂ ಪತ್ರಿಕೆಗಳನ್ನು ತರಿಸುವುದಿಲ್ಲ. ಹಾಗಾಗಿ ಸೌಲಭ್ಯಗಳ ಪತ್ರಿಕಾ ಸುದ್ದಿ ಮಾಹಿತಿ ಎಲ್ಲರಿಗೂ ತಲುಪುವುದಿಲ್ಲ.
3) ಇಲಾಖೆಗಳು ಎಲ್ಲಾ ಗ್ರಾಮ ಪಂಚಾಯತಿಗೆ ಮಾಹಿತಿ ಹಂಚುವಂತೆ ಸೂಚಿಸಿ ಇ-ಮೆಯಿಲ್ ಮಾಡುತ್ತಾರೆ. ಗ್ರಾ.ಪಂ. ತಮ್ಮ ನೋಟೀಸ್ ಬೋರ್ಡ್‌ಗೆ ಹಾಕಿ ಕೈ ತೊಳೆದುಕೊಳ್ಳುತ್ತಾರೆ. ಯಾರಿಗೆ ಎಂತದು ಗೊತ್ತಾಗಲ್ಲ!!!
ಅದ್ಭುತ ಗ್ಯಾಜೆಟ್‌ಗಳು, ಆ್ಯಪ್‌ಗಳು, ಮೆಸೇಜ್-ವಾಟ್ಸಪ್‌ಗಳು, ತಂತ್ರಜ್ಞಾನಗಳು ಬಂದಿದ್ದರೂ, ಇಲಾಖೆಗಳು ಮತ್ತು ಗ್ರಾ.ಪಂ.ಗಳು ಅವುಗಳನ್ನು ಬಳಸಿಕೊಳ್ಳುತ್ತಿಲ್ಲ.
ಫ್ರೂಟ್ ಐಡಿ ಇದೆ, ಆಧಾರ್ ಕನೆಕ್ಷನ್ ಇದೆ, ಎಲ್ಲಾ ರೈತರ ಸಂಪರ್ಕದ ಮೊಬೈಲ್ ನಂಬರ್ ಇಲಾಖೆಗಳಲ್ಲಿವೆ. ಒಂದು SMS ಸಾಕು... ವಾಟ್ಸಪ್ ಮೆಸೇಜ್ ಮಾಡಬಹುದು. ಉಹೂಂ, ಯಾವುದನ್ನು, ಯಾರೂ ಬಳಸುವುದಿಲ್ಲ.
ಪರಿಣಾಮ, ಅನೇಕರಿಗೆ ಸೌಲಭ್ಯಗಳ ಮಾಹಿತಿಯೇ ಇರುವುದಿಲ್ಲ. ಇಲಾಖೆಗಳವರು ತಮಗೆ ಬೇಕಾದವರಿಗೆ!!? ಮಾತ್ರ ಸೌಲಭ್ಯಗಳ ಮಾಹಿತಿ ಕೊಟ್ಟು, ಈ ಹಿಂದೆ ಫಲಾನುಭವಿಗಳಾದವರಿಗೇ ಮತ್ತೆ ಮತ್ತೆ ರಹಸ್ಯವಾಗಿ ಅನುಕೂಲಗಳನ್ನು ಕಲ್ಪಿಸಿ ಕೊಡುತ್ತಾರೆ.
ಸಾಮಾನ್ಯ ರೈತರಿಗೆ ಆಗುತ್ತಿರುವ ದೋಖಾಗಳಲ್ಲಿ ಇದೂ ಒಂದು.
ಸರಿಯಾದೀತಾ?
- ಅರವಿಂದ ಸಿಗದಾಳ್, ಮೇಲುಕೊಪ್ಪ.
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ