- ವೇ. ವಿದ್ವಾನ್ ಶಿವರಾಮ ಜೋಗಳೆಕರ್
ಶ್ರೀಮದ್ ರಾಮಾಯಣ ಗ್ರಂಥವು ಜಗತ್ತಿನ ಪ್ರಥಮ ಕಾವ್ಯವಾಗಿ ಪ್ರಸಿದ್ಧವಾಗಿದೆ. ಅನೇಕ ಮಹನೀಯರು ರಾಮಾಯಣವನ್ನು ಶೋಧಿಸಿದರು, ಬೋಧಿಸಿದರು. ಬರೆದರು ಆದರೆ ವಾಲ್ಮೀಕಿ ಮುನಿಗಳು ಬರೆದ ರಾಮಾಯಣ ಅತಿ ಪ್ರಾಚೀನ ಮತ್ತು ಇವೆಲ್ಲಕ್ಕೂ ಮುಕುಟ ಪ್ರಾಯವಾಗಿದೆ. ಸೂರ್ಯ ಚಂದ್ರರಿರುವ ತನಕವೂ ರಾಮಾಯಣ ಮಹಾಕಾವ್ಯವು ಲೋಕದಲ್ಲಿ ಪ್ರಸಿದ್ಧವಾಗಿರುತ್ತದೆ. ಇದು ತ್ರಿಕಾಲ ಬಾಧಿತ ಸತ್ಯ- ಇದು ನಮ್ಮ ಪರಂಪರೆಯಲ್ಲಿ ಏಕಕಾಲದಲ್ಲಿ ವಾಲ್ಮೀಕಿಯನ್ನು ರಾಮಾಯಣವನ್ನು ರಾಮನನ್ನು ಆದರ ಪ್ರಾಚೀನತೆಯನ್ನು ನಿತ್ಯ ಸತ್ಯವನ್ನಾಗಿಸಿದೆ.
ಶಾಪಗ್ರಸ್ತರಾದ ರಾವಣ ಕುಂಭಕರ್ಣರ ಸಂಹಾರಕ್ಕಾಗಿ ಶ್ರೀರಾಮ ಅವತರಿಸಿದ ಎಂತಿದ್ದರೂ ರಾಮಾಯಣದಲ್ಲಿ ಇನ್ನೂ ಕೆಲವು ಶಾಪ ಪ್ರಸಂಗಗಳನ್ನು ಗಮನಿಸಬಹುದಾಗಿದೆ. ಕಾಳಿದಾಸನ ಮಹಾಕಾವ್ಯವೆಂದರೆ ಒಂದು ಇತಿಹಾಸದಂತಿದ್ದು ಅದರೊಳಗೆ ರಘುವಂಶದ ದಿಲೀಪನಿಂದ ಪ್ರಾರಂಭಿಸಿ ಅಗ್ನಿವರ್ಣದ ರಾಜರ ತನಕ ವರ್ಣಿಸಿದ್ದು ಇದರೊಳಗೆ 28 ರಾಜರ ವಂಶಾವಳಿಯ ಮಹಾಕಾವ್ಯವಿದ್ದು- ಇದನ್ನನುಸರಿಸಿ ರಾಮಾಯಣದ ಕೆಲವು ಶಾಪಪ್ರಸಂಗಗಳಿವೆ.
ಇದರೊಳಗೆ ಮೊದಲನೆಯದು –ಕಾಮಧೇನುವಿನ ಶಾಪ –ರಘುವಂಶದ 1ನೇ ಸರ್ಗದಲ್ಲಿ ಕಾಮಧೇನು ಶಾಪಕಥೆ ವರ್ಣಿಸಿದ್ದಾನೆ.
ರಾಜಾ ದಿಲೀಪನಿಗೆ ಸರ್ವಸುಖವೂ ಇತ್ತು. ಆದರೆ ಪುತ್ರಪ್ರಾಪ್ತಿ ಇರಲಿಲ್ಲ. ಪುತ್ರಪ್ರಾಪ್ತಿಯ ಅತೀವ ಇಚ್ಛೆಯಿಂದ ಆತ ರಾಜ್ಯಕಾರ್ಯಭಾರವು ಮಂತ್ರಿಗೆ ವಹಿಸಿ ರಾಣಿ ಸುದಕ್ಷಿಣೆ ಸಮಸ್ತ ಪರಿವಾರ ಜೊತೆಗೆ ವಸಿಷ್ಠರ ಆಶ್ರಮ ತಲುಪಿದ. ಉಭಯ ಕುಶಲೋಪರಿ ನಂತರ ಬಂದ ಕಾರಣ ವಸಿಷ್ಠರಿಗೆ ಅರುಹಿದ. ಮುನಿವಸಿಷ್ಠ ರಾಜಾ ದಿಲೀಪನನ್ನು ಉದ್ದೇಶಿಸಿ ರಾಜಾ ಬಹುವರ್ಷದ ಹಿಂದೆ ನೀನು ಸ್ವರ್ಗದಲ್ಲಿ ಇಂದ್ರನ ಸೇವೆ ಮುಗಿಸಿ ನಿನ್ನ ರಾಜ್ಯಕ್ಕೆ ಹಿಂದಿರುಗುವ ಸಮಯದಲ್ಲಿ ರಾಣಿಯ ಜೊತೆ ಬರುತ್ತಿದ್ದೆ. ಪುತ್ರಾಪೇಕ್ಷೆ ವಿಚಾರ ಮಾಡುತ್ತಾ ಮನಸ್ಸು ವಿಚಲಿತವಾಗಿ-ಅಲ್ಲೇ ಇದ್ದ ಕಾಮಧೇನುವನ್ನು ನಿರ್ಲಕ್ಷಿಸಿದೆ. ಆ ಕಾಮಧೇನುವನ್ನು ಕಣ್ಣೆತ್ತಿ ನೋಡಲು ಇಲ್ಲ. ನಮಸ್ಕರಿಸಲೂ ಇಲ್ಲಾ ಇದು ನಿನ್ನಿಂದ ಆದ ಪ್ರಮಾದವಾಗಿದೆ ಇದರಿಂದ ಕಾಮಧೇನು ಕೋಪಗೊಂಡು ನಿನ್ನನ್ನು ಶಪಿಸಿದ್ದಾಳೆ. ಎಲ್ಲಿಯ ತನಕ ನನ್ನ ಪುತ್ರಿಯ ಸೇವೆ ಮಾಡುವುದಿಲ್ಲವೋ ಅಲ್ಲಿಯತನಕ ನಿನಗೆ ಪುತ್ರ ಪ್ರಾಪ್ತಿಯಾಗುವುದಿಲ್ಲ ಎಂದು ಕಾಮಧೇನು ನಿನ್ನನ್ನು ಶಪಿಸಿದ್ದಾಳೆ. ಶಾಪವಾಣಿ ನಿನಗಾಗಲಿ ನಿನ್ನ ಸಾರಥಿಗಾಗಲಿ ಕೇಳದಿರುವುದು ಅಚ್ಚರಿ ತಂದಿದೆ. ಪೂಜನೀಯರಿಗೆ ಪೂಜಿಸದಿದ್ದರೆ ಶುಭಕಾರ್ಯ ಫಲದ್ರೂಪ ಹೊಂದುವಂತಿಲ್ಲ!
ಆಗ ರಾಜಾ ದಿಲೀಪ ವಸಿಷ್ಠರನ್ನು ಉದ್ದೇಶಿಸಿ ಮುಂದೇನು? ಎಂದ. ಆಗ ವಸಿಷ್ಠರು ಈಗ ಕಾಮಧೇನು ಸಿಗುವಂತಿಲ್ಲ. ಅವಳು ವರುಣದೇವ ಪಾತಾಳದಲ್ಲಿ ಒಂದು ಯಾಗ ನಡೆಸುತ್ತಿದ್ದು ಅಲ್ಲಿ ಯಜ್ಞ ಸಾಮಗ್ರಿ ಪೂರೈಕೆಗೆ ಅವಳು ಆ ಕೈಂಕರ್ಯದಿಂದ ಹೊರ ಬರುವಂತಿಲ್ಲ. ಇನ್ನು ಪಾತಾಳದ ಪ್ರವೇಶದ್ವಾರದಲ್ಲಿ ಭಯಂಕರ ವಿಷಸರ್ಪಗಳಿದ್ದು ಅಲ್ಲಿ ನಾವು ಪ್ರವೇಶಿಸುವಂತಿಲ್ಲ. ಆದ್ದರಿಂದ ಕಾಮಧೇನುವಿನ ಮಗಳು ನಂದಿನಿ ಸೇವೆಮಾಡಿ ನಿನ್ನ ಶಾಪವನ್ನು ನಿವಾರಿಸಿ ನಿನ್ನ ಪುತ್ರ ಸಂಕಲ್ಪದ ಇಚ್ಛೆ ಪೂರ್ಣಗೊಳಿಸಬಹುದು ಎಂದರು. ಅದರಂತೆ ದಿಲೀಪನು ತನ್ನ ಸಮಸ್ತ ಪರಿವಾರವನ್ನು ಅಯೋಧ್ಯೆಗೆ ಕಳುಹಿಸಿ, ಸುದಕ್ಷಿಣೆ ಸಹಿತ ನಂದಿನಿಯ 21ನೇ ದಿನ ಯತಾರ್ಥ ಸೇವೆ ಪೂರೈಸಿ 22ನೇ ದಿನ ಪ್ರವೇಶಿಸುತ್ತಿರುವಾಗ ಒಂದು ಅದ್ಭುತ ಘಟನೆಯಂತೆ ನಂದಿನಿ ತನ್ನ ಮಾಯದಿಂದ ಸಿಂಹವಾಗಿ ರೂಪಗೊಂಡು ದಿಲೀಪನನ್ನು ಪರೀಕ್ಷಿಸಿದಳು. ರಾಜಾ ದಿಲೀಪನು ಆ ಪರೀಕ್ಷೆಯಲ್ಲೂ ಗೆದ್ದು ಮುಂದೆ ಶೀಘ್ರದಲ್ಲಿ ರಘು ಪುತ್ರ ಪಡೆದ.
ಇನ್ನು ಶ್ರವಣಕುಮಾರ ತಂದೆಯ ಶಾಪ – ರಾಮ ವನವಾಸಕ್ಕೆ ಹೊರಟು ನಿಂತ ಸಮಯ ದುಃಖದಲ್ಲಿ ಕೌಸಲ್ಯೆಗೆ ತನ್ನ ಪೂರ್ವಾಯುಷ್ಯದ ಪ್ರಸಂಗ ದಶರಥ ಹೇಳಿದ್ದು- ವಾಲ್ಮಿಕಿ ರಾಮಾಯಣ ಅಯೋಧ್ಯೆ ಕಾಂಡದಲ್ಲಿದೆ. 63/64 ಅಧ್ಯಾಯ – ಶ್ರವಣ ಕುಮಾರ ಯಾತ್ರೆ ಮಾಡಿಸುತ್ತಾ ಸರಯೂ ನದಿಯ ತೀರದಲ್ಲಿ ಬಾಯಾರಿಕೆಗಾಗಿ ವೃದ್ಧ ಅಂಧ ತಂದೆತಾಯಿ ಸಲುವಾಗಿ ನದಿಯ ನೀರನ್ನು ತುಂಬುವಾಗ ಬಂದ ಸಪ್ಪಳದಿಂದ ಯಾವುದೊ – ಮೃಗ ನೀರು ಕುಡಿಯುತ್ತಿದೆ ಎಂದೆಣಿಸಿ ಶಬ್ದವೇಧಿ ಬಾಣ ಪ್ರಯೋಗಿಸಿದೆ. ಅದು ಶ್ರವಣ ಕುಮಾರನಿಗೆ ತಾಗಿ ‘ಅಯ್ಯೋ ತಂದೆ’ ಎಂಬ ಅವನ ಕೂಗಿನಿಂದ ಬೆಚ್ಚಿಬಿದ್ದೆ. ನನ್ನ ಪ್ರಮಾದ ನನಗೆ ಅರಿವಾಯಿತು. ಅವನ ಕೂಗನ್ನು ಅನುಸರಿಸುತ್ತಾ ಹೋದಂತೆ ಮರಣೋನ್ಮುಖ ಶ್ರವಣಕುಮಾರನನ್ನು ಕಂಡೆ.
ಇಲ್ಲಿ ನನ್ನ ತಪ್ಪಿಗೆ ಪ್ರಾಯಶ್ಚಿತ್ತವಿಲ್ಲಾ! ಎಂದೆನಿಸಿ ಅತೀವ ದುಃಖದಿಂದ ಅವನನ್ನು ಸಮೀಪಿಸಿದಾಗ, ಶ್ರವಣಕುಮಾರ ಆ ಅವಸ್ಥೆಯಲ್ಲೂ ತನ್ನ ತಂದೆ-ತಾಯಿ ಅಂಧರಿದ್ದು ವೃದ್ಧರಿದ್ದು ಅವರಿಗೆ ನೀರಡಿಕೆಯಾಗಿದ್ದು ನೀನು ಶೀಘ್ರದಲ್ಲಿ ಅವರಿಗೆ ನೀರನ್ನು ತಲುಪಿಸು. ಅವರಿಗೆ ಕೋಪ ಮತ್ತು ನಿನಗೆ ಶಪಿಸದಂತೆ ಪ್ರಸನ್ನಗೊಳಿಸು ಎಂದು ಹೇಳಿ ಶ್ರವಣ ಕುಮಾರ ಪ್ರಾಣತ್ಯಾಗ ಮಾಡಿದ. ನಾನು ಶ್ರವಣ ಕುಮಾರನ ತಂದೆ-ತಾಯಿಯ ಸಮೀಪ ಬಂದು ನೀರನ್ನು ಕೊಟ್ಟೆ ಇದು ಶ್ರವಣ ಕುಮಾರನ ಕೈಗಳಲ್ಲಿ ಇದು ಶ್ರವಣ ಕೈಯಾರೆ ತಂದ ನೀರಲ್ಲ ಇದರಲ್ಲಿ ಏನೊ ವ್ಯತ್ಯಯವಿದೆ. (ಇಲ್ಲಿ ಗಮನಿಸಬೇಕಾದ ಅಂಶÀ ಅಂಧರಿಗೆ ಸ್ವರ್ಶಜ್ಞಾನ ಅಗಾಧವಾದದ್ದು). ನನ್ನ ಮಗನೇ, ಶ್ರವಣಕುಮಾರ ಏಕೆ ಮಾತನಾಡುತಿಲ್ಲ! ಮಾತಾಡು ಮಗನೇ ಮಾತಾಡು!!?
ನಾನು ನಡೆದ ಕಥೆಯನ್ನು ಯಥಾವತ್ತಾಗಿ ಹೇಳಿದೆ. ಶ್ರವಣಕುಮಾರನ ಮರಣದ ವಾರ್ತೆ ಕೇಳಿ ಅವನ ಅಂಧ ತಂದೆ ತಾಯಿಯು ಮಮ್ಮುಲ ಮರುಗಿದರು. ಅತೀವ ದುಃಖಿಸಿದರು!! ಶ್ರವಣ ಕುಮಾರ ಎಲ್ಲಿ ಮರಣಿಸಿದ್ದಾನೋ ಅಲ್ಲಿ ತಮ್ಮನ್ನು ಕರೆದೊಯ್ಯುವಂತೆ ಹೇಳಿದರು. ನಾನು ಅವರನ್ನು ಮೃತ ಶ್ರವಣಕುಮಾರನ ಬಳಿ ನಿಲ್ಲಿಸಿದೆ. ಮೃತ ಶ್ರವಣಕುಮಾರನ ದೇಹವನ್ನು ಸ್ಪರ್ಶಿಸಿ ಅತೀವ ಕ್ರೋಧದಿಂದ ಶ್ರವಣ ಕುಮಾರನ ತಂದೆ ನನ್ನನ್ನು ನನಗೆ ಪುತ್ರಶೋಕದಿಂದ ಬಂದ ಮರಣದಂತೆ ನಿನಗೂ ಸಹ ಪುತ್ರಶೋಕ ಬಂದು ಮರಣಹೊಂದು ಎಂದ ಶಪಿಸಿದ.
ನಾನು ಬಹು ದಯೆಯಿಂದ ಅವರಲ್ಲಿ ಕ್ಷಮಾಪಣೆ ಕೇಳಿದೆ. ಆದರೆ ಅವರು ಯಾವುದನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ, ತಪ್ಪು ಕ್ಷಮಾರ್ಹವಲ್ಲ, ಎಂದು ಕೂಗುತ್ತಾ ಶ್ರವಣಕುಮಾರನ ತಂದೆತಾಯಿಯು ಪ್ರಾಣತ್ಯಜಿಸಿದರು. ಅದು ಈಗ ಸತ್ಯವಾಗುವತ್ತ ಹೊರಟಿದೆ?! ಮುನಿಗಳ ಶಾಪ ಹುಸಿಯಾಗುವುದಿಲ್ಲ. ಅವರ ಶಾಪವನ್ನು ನಾನು ಅನುಗ್ರಹವೆಂದು ಸ್ವೀಕರಿಸಿದೆ. ಆ ಶಾಪವಾಣಿಯು ನನ್ನನ್ನು ಪುತ್ರವಂತನ್ನನಾಗಿಸಿದೆ. ಇಲ್ಲಿ ಗಮನಿಸಿಬೇಕಾದ ಅಂಶ-ಪ್ರಾಪ್ತಿ ಮತ್ತು ತ್ಯಾಗ, ಲಾಭ ಮತ್ತು ಹಾನಿ ಸುಖ ಮತ್ತು ದುಃಖ ಹೀಗೆ ದ್ವಂದ್ವಗಳು ಸತತವಾಗಿ ಒಂದು ಚಕ್ರದಂತೆ ತಿರುಗುತ್ತಾ ಇರುತ್ತದೆ. ಮಹಾಕವಿ ಕಾಳಿದಾಸನು ರಾಮಾಯಣದ ಈ ಕತೆಯನ್ನು ರಘುವಂಶದ 9ನೇ ಸರ್ಗದಲ್ಲಿ ವರ್ಣಿಸಿದ್ದಾನೆ.
ಇನ್ನು ಗೌತಮಶಾಪ- ಮೂಲ ವಾಲ್ಮೀಕಿ ರಾಮಾಯಣ ಬಾಲಕಾಂಡದಲ್ಲಿ ಬಂದ ಅಹಲ್ಯಾಶಾಪದ ವರ್ಣನೆ.
ಒಂದು ದಿನ ದೇವರಾಜ ಇಂದ್ರ ಕೆಲವು ಕೆಲಸದ ನಿಮಿತ್ತ ಗೌತಮನ ಆಶ್ರಮಕ್ಕೆ ಬಂದಿದ್ದ ಆತ ಗೌತಮನ ಪತ್ನಿ ಅಹಲ್ಯಯ ಅದ್ಭುತ ರೂಪನೋಡಿ ಮನಸ್ಸಿನಲ್ಲಿ ಕಾಮವು ಉತ್ಪತ್ತಿಯಾಗಿ ಪಾಪವು ಜಾಗೃತವಾಯಿತು. ಇಂದ್ರ ದೇವರಾಜನಿದ್ದರೂ ಇಂದ್ರೀಯ ಸೆಳೆತ ಅವನನ್ನೂ ಬಿಟ್ಟಿಲ್ಲ. ಗೌತಮ ಇಲ್ಲದ ಸಮಯದಲ್ಲಿ ಇಂದ್ರ ಮುನಿವೇಷ ಧರಿಸಿ ಗೌತಮನ ಆಶ್ರಮಕ್ಕೆ ಬಂದು ಅಹಲ್ಯೆಯಲ್ಲಿ ಪಾಪಕೃತ್ಯ ಮಾಡಿದ, ಇದೇ ಸಮಯಕ್ಕೆ ಗೌತಮ ಆಶ್ರಮಕ್ಕೆ ಆಗಮಿಸಿದ್ದು, ಗೌತಮ ಮುನಿವೇಶದ ಇಂದ್ರನನ್ನು ಅಲ್ಲಿ ನೋಡಿ ತಿಳಿಯಬೇಕಾದ ಅಂಶ ತಿಳಿದ!? ಮೊದಲು ಇಂದ್ರನನ್ನು ಶಪಿಸಿದ ಇಂದ್ರ ಅಲ್ಲಿಂದ ಓಡಿ ಹೋz.À ಭಯದಿಂದ ಕಂಪಿಸುತ್ತಾ ಅಹಲ್ಯೆ ಅಲ್ಲೇ ನಿಂತಿದ್ದಳು. ಅವಳ ಕಣ್ಣುಗಳಿಂದ ಧಾರಾಕಾರವಾಗಿ ಅಶ್ರುಗಳು ಜಿನುಗುತ್ತಿತ್ತು. ಅತೀವ ಕೋಪದಿಂದ ಕ್ರುದ್ಧನಾದ ಗೌತಮನನ ಬಾಯಿಂದ ಶಾಪವಾಣಿ ಇಂತಿತ್ತು. "ವಾತಭಕ್ಷಾ ನಿರಾಹಾರ ತಪ್ಯಂತೀ ಭಸ್ಮಶಾಯಿನೀ ಅದೃಶ್ಯಾ ಸರ್ವಭೂತಾನಾಂ ಆಶ್ರಮೆಸ್ಮಿನ್ ವಶಿಷ್ಯಸಿ ಶಿಲಾಯಾಂ ಆಶ್ರಮೇ ತಿಷ್ಠ!
ಈ ಪಾಪಕ್ಕೆ ಪ್ರಾಯಶ್ಚಿತ್ತವಿಲ್ಲಾ ನೀನು ಕಲ್ಲಾಗಿ ಪರ್ವತದಂತೆ ಬಿದ್ದಿರು. ಕೇವಲ ವಾಯುಭಕ್ಷಿಸಿ ನಿರಾಹಾರಿಯಾಗಿ ತಪಿಸುತ್ತಾ ಧೂಳಿನಲ್ಲಿ ಬಿದ್ದಿರು ಎನ್ನುತ್ತಾ ಗೌತಮ ಅಹಲ್ಯೆಯನ್ನು ತ್ಯಾಗ ಮಾಡಿದ. ಅವಳು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಳು. ಅಹಲ್ಯೆ ಗೌತಮನ ಪಾದಗಳಿಗೆ ಎರಗಿ ಈ ಅಪರಾಧದಿಂದ ಮುಕ್ತವಾಗಲು ಮತ್ತು ಈ ಶಾಪವಿಮೋಚನೆಗೆ ದಾರಿತೋರಿ ಎಂದು ಅಂಗಲಾಚಿದಳು. ಮಹರ್ಷಿ ಗೌತಮ ನಾನು ನಿನಗೆ ಏನು ಹೇಳಲಿ? ವಿಷ್ಣುವು ರಾಮಾವತಾರದಲ್ಲಿ ಸ್ವತಃ ಅವನು ಇಲ್ಲಿಗೆ ಬಂದು ನಿನ್ನನ್ನು ಉದ್ಧರಿಸುತ್ತಾನೆ. ನೀನು ಮಾನವೀ ರೂಪ ಪಡೆದ ಮೇಲೆ ನಾನು ನಿನ್ನನ್ನು ಸ್ವೀಕರಿಸುತ್ತೇನೆ ಎಂದ!
ಇನ್ನು ಕಬಂಧನ ಶಾಪ– ವಾಲ್ಮಿಕಿ ರಾಮಾಯಣದಲ್ಲಿ ಅರಣ್ಯಕಾಂಡದ 71ನೇ ಅಧ್ಯಾಯ. ಕಬಂಧ ರಾಮನಿಗೆ ತನ್ನ ಪೂರ್ವ ವೃತ್ತ ಕಥನವನ್ನು ಹೇಳಿದ ಭಾಗ, ಸೂರ್ಯ ಚಂದ್ರನಂತೆ ನನ್ನ ಶರೀರ ದಿವ್ಯರೂಪವಾಗಿತ್ತು. ನನ್ನಲ್ಲಿ ಪ್ರಚಂಡ ಬಲ ಮತ್ತು ಪರಾಕ್ರಮವಿತ್ತು. ಶಕ್ತಿಯ ಮತ್ತಿನಲ್ಲಿ ನಾನು ಭಯಹುಟ್ಟಿಸುವ ರಾಕ್ಷಸ ರೂಪ ಪಡೆದು ವನದಲ್ಲಿನ ಋಷಿಗಳನ್ನು ಪೀಡಿಸುತ್ತಿದ್ದೆ. ಅವರು ವನದಲ್ಲಿ ಫಲ ಸಮಿಧೆ ಕಟ್ಟಿಗೆಗಳನ್ನು ಸಂಗ್ರಹಿಸುತ್ತಿರುವಾಗ ಅವರನ್ನು ಹಿಂಸಿಸುತ್ತಿದ್ದೆ. ಋಷಿಮುನಿಗಳು ನನ್ನ ಹಿಂಸೆಗಳನ್ನು ಸಹಿಸಿ ಸಹಿಸಿ ಕೋಪಿಷ್ಠರಾಗಿ ನೀನು ಈ ಶರೀರದಂತೆ ನಿಂದ್ಯ ಮತ್ತು ದುಷ್ಟವಾಗಿರು ಎಂದು ಶಪಿಸಿದರು.
ನಾನು ಅವರಿಗೆ ವಂದಿಸಿ ಶರಣಾಗಿ ನನ್ನ ಈ ಶಾಪದ ಅಂತ್ಯ ಎಂದು ಎಂಬುದಾಗಿ ಕೇಳಿದೆ. ಈಗ ಅವರುಗಳು ಶ್ರೀರಾಮ ವನವಾಸದ ಸಮಯದಲ್ಲಿ ನಿನ್ನ ಕೈಗಳನ್ನು ತುಂಡರಿಸಿ ನಿನ್ನನ್ನು ದಹನ ಮಾಡುತ್ತಾರೆ. ಅದು ಶಾಪವಿಮೋಚನೆ ಎಂದು ತಿಳಿ, ಆಗ ನಿನಗೆ ಪೂರ್ವ ಶರೀರ ಪ್ರಾಪ್ತವಾಗುತ್ತದೆ ಎಂದಿದ್ದರು. ಹೀಗೆ ದಿನ ಕಳೆಯುತ್ತಿದ್ದಂತೆ ಈ ರಾಕ್ಷಸರೂಪದಿಂದ ನಾನು ಬ್ರಹ್ಮನನ್ನು ಕುರಿತು ತಪಶ್ಚರ್ಯಗೈದೆ. ಆತ ಸಂತುಷ್ಟನಾಗಿ ನನಗೆ ದೀರ್ಘಾಯುಷ್ಯ ವರಕೊಟ್ಟ, ಅದರಿಂದ ನನ್ನ ಗರ್ವವು (ಮದವು) ಇನ್ನೂ ನೆತ್ತಿಗೇರಿತು. ನಾನು ಯಾವುದÀನ್ನು ಲೆಕ್ಕಿಸದೆ ನಾನು ಇಂದ್ರನ ಮೇಲೆ ದಂಡೆತ್ತಿ ಯುದ್ಧಕ್ಕೆ ಹೋದೆ ಆಗ ಇಂದ್ರ ವಜ್ರಾಯುಧ ನನ್ನ ಮೇಲೆ ಪ್ರಯೋಗಿಸಿದ. ಅದು ನನ್ನ ಜಂಘಾ ಮತ್ತು ತಲೆಯನ್ನು ಶರೀರದಲ್ಲಿ ಹೊಕ್ಕಿ ನನ್ನನ್ನು ಆಕ್ರಾಳವಾಗಿಸಿತು. ಇಂದ್ರ ನನ್ನನ್ನು ಕೊಲ್ಲದೆ ``ಬ್ರಹ್ಮದೇವನ ವರ ಸತ್ಯವಾಗಲಿ``, ಎಚಿದ. ನನ್ನ ಮುಖ ಶಿರ, ಭಗ್ನಾವಸ್ಥೆಯಲ್ಲಿ ನನ್ನ ಆಹಾರ-ವಿಹಾರಕ್ಕೆ ತೊಡಕಾಗಿದ್ದು ನನಗೆ ಪರ್ಯಾಯ ಮಾರ್ಗ ತೋರು ಎಂದು ಇಂದ್ರನಲ್ಲಿ ಅರುಹಿದೆ. ನನ್ನ ಅವಸ್ಥೆಯನ್ನು ನೋಡಿ ಇಂದ್ರ ಕರಗಿದ.
ತೀಕ್ಷ್ಣದಂಷ್ಟ್ರಯುಕ್ತ ಮುಖವನ್ನು ನನ್ನ ಉದರದಲ್ಲಿ ನಿರ್ಮಿಸಿಕೊಟ್ಟ ಮತ್ತು ಒಂದು ಯೋಜನೆ ದೀರ್ಘವಾದ ಬಾಹುವನ್ನು ಅನುಗ್ರಹಿಸಿದ, ಆ ದಿನದಿಂದ ನಾನು ವನದಲ್ಲಿ ಅತ್ತಿತ್ತ ಸಂಚರಿಸುವ ಸಿಂಹ ಇತ್ಯಾದಿ ಪ್ರಾಣಿಗಳನ್ನು ನನ್ನ ದೀರ್ಘವಾದ ಕೈಯಿಂದ ಬಳಸಿ ಅವುಗಳನ್ನು ಭಕ್ಷಿಸುತ್ತಾ ಇದ್ದೇನೆ. ಶ್ರೀರಾಮ ಲಕ್ಷ್ಮಣರ ಕೈಯಲ್ಲಿ ನಿನ್ನ ಅಂತಿಮ ಹಂತ ಎಂದು ಹೇಳಿ ಇಂದ್ರ ಅದೃಶ್ಯನಾದ. ಅಂದಿನಿಂದ ಇಂದಿನ ತನಕವು ನಿನ್ನನ್ನು ಎದುರು ನೋಡುತ್ತಾ ನಿನ್ನ ಪ್ರತೀಕ್ಷೆಯಲ್ಲಿದ್ದೆ. ಇಂದು ನಿಮ್ಮನ್ನು ನೋಡಿ ನನಗೆ ತುಂಬಾ ಆನಂದವಾಗಿದೆ. ಎಂದು ಕರಜೋಡಿಸುತ್ತಾ ಇನ್ನು ತಡವಮಾಡಿದೆ. ನನ್ನ ಕೈಗಳನ್ನು ತುಂಡರಿಸಿ ನನ್ನನ್ನು ದಹಿಸಿ ನನ್ನ ಔಧ್ರ್ವದೇಹಿಕ ನೆರವೇರಿಸು ಎಂದು ಪ್ರಾರ್ಥೀಸಿದ, ಅನ್ಯ ಯಾರಿಂದಲೂ ಈ ಕೆಲಸ ಅಸಾಧ್ಯ ನನ್ನನ್ನು ಉದ್ಧರಿಸು. ನನ್ನ ಪೂರ್ವರೂಪದ ಪ್ರಾಪ್ತಿನಂತರ ನಾನು ನಿಮಗೆ ಮುಂದಿನ ಮಾರ್ಗಕ್ರಮಣ ಹೇಳಿ ನನ್ನ ಮಿತ್ರತ್ವ ಸಾರ್ಥಕಗೊಳಿಸುವೆ ಎಂದ. ಈ ಕತೆಯನ್ನು ಕಾಳಿದಾಸನು ರಘುವಂಶದಲ್ಲಿ ಒಂದೇ ಶ್ಲೋಕದಲ್ಲಿ ಕಬಂಧಶಾಪದ ಕತೆ ಉಲ್ಲೇಖಿಸಿದ್ದಾನೆ.
ಇನ್ನು ದುರ್ವಾಸ ಶಾಪ:- ಇದು ವಾಲ್ಮೀಕಿ ರಾಮಾಯಣದ ಉತ್ತರಕಾಂಡದಲ್ಲಿ ಸರ್ಗ 103 ರಿಂದ 105 ದಲ್ಲಿ ಶಾಪಕತೆ ದೀರ್ಘವಾಗಿ ವರ್ಣಿಸಲಾಗಿದೆ. ದೂರ್ವಾಸರು ಶಾಪ ಪ್ರತ್ಯಕ್ಷ ಕೊಡದಿದ್ದರೂ ಶಾಪದ ಗಂಭೀರತೆಯನ್ನು ಲಕ್ಷ್ಮಣ ಅರಿತಿದ್ದ. ಶಾಪವನ್ನು ಕೊಡುವ ಕ್ಷಣವನ್ನು ಬರದಂತೆ ನೋಡಿದ. ಅರ್ಥಾತ್ ಅದರ ಪರಿಣಾಮ ಅವನಿಗೆ ಎದುರಿಸಬೇಕಾಯಿತು. ಇದು ರಘುವಂಶದ ಸರ್ಗ 15ದರ ಶ್ಲೋಕ 92- 95 ರಲ್ಲಿ ಪ್ರಸ್ತಾಪವಿದೆ.
ಒಮ್ಮೆ ಕಾಲಪುರುಷ ಮುನಿವೇಷದಲ್ಲಿ ರಾಮನ ಬಳಿ ಬಂದು ಎಲೈ ಶ್ರೀರಾಮನೇ ಏಕಾಂತದಲ್ಲಿ ನಿನ್ನಲ್ಲಿ ಕೆಲವು ವಿಷಯದ ಬಗ್ಗೆ ಮಾತನಾಡುವುದಿದೆ. ಆದರೆ ಒಂದು ಮಾತಿದೆ. ಅದೇನೆಂದರೆ ನೀವು ಏಕಾಂತದಲ್ಲಿ ಮಾತನಾಡುವಾಗ ಯಾರೂ ಬರುವಂತಿಲ್ಲ ಮತ್ತು ನಮ್ಮ ವಾರ್ತಾಲಾಪದಲ್ಲಿ ಭಂಗ ತಂದವರಿಗೆ ದೇಹ ದಂಡನೆಯ ಶಿಕ್ಷೆ ಕೊಡಬೇಕು ಎಂದ ಮುನಿಯ ಮಾತಿಗೆ ಶ್ರೀರಾಮ ಒಪ್ಪಿದ. ಅವರು ಅರಮನೆಯ ಏಕಾಂತದಲ್ಲಿ ಚರ್ಚೆಯ ಆರಂಭದಲ್ಲಿ ಮುನಿಯು ತನ್ನ ಸತ್ಯಸ್ವರೂಪವನ್ನು ಹೇಳಿ ಹೇ ಪ್ರಭೋ! ತಾವು ವೈಕುಂಠಕ್ಕೆ ಬರಬೇಕು. ತಮ್ಮ ಅವತಾರ ಕಾರ್ಯವಾಗಿದೆ. ಇದು ಬ್ರಹ್ಮ ದೇವನ ಆಜ್ಞೆ ಎಂದ. ಈ ಮಧ್ಯದಲ್ಲಿ ಅಕಸ್ಮಾತ್ ದೂರ್ವಾಸ ಮುನಿಗಳು ಆಗಮಿಸಿ ಬಾಗಿಲಲ್ಲಿ ನಿಂತ ಲಕ್ಷ್ಮಣನನ್ನು ಉದ್ದೇಶಿಸಿ ಈ ಕ್ಷಣದಲ್ಲಿ ಹೋಗಿ ಶ್ರೀರಾಮನಿಗೆ ಹೇಳು ನಿನ್ನನ್ನು ಕಾಣಲು ಬಂದಿದ್ದೇನೆ ಎಂದು ಆಗ ಲಕ್ಷ್ಮಣನು ಕರಜೋಡಿಸಿ ಮುನಿವರ್ಯರೇ ಪೂಜ್ಯರೇ ಶ್ರೀರಾಮ ಏಕಾಂತದಲ್ಲಿ ಮುನಿಯ ಜೊತೆ ಬಹು ಮಹತ್ತರ ವಿಷಯ ಚರ್ಚಿಸುತ್ತಿದ್ದು. ತಾವು ಕೆಲ ಕಾಲ ವಿಶ್ರಮಿಸಿ. ತಾವುಗಳು ಬಂದ ಸುದ್ದಿಯನ್ನು ಶ್ರೀರಾಮನಲ್ಲಿ ಅರಹುತ್ತೇನೆ ಎಂದ.
ದೂರ್ವಾಸ!? ತತ್‍ಕ್ಷಣ ಕೋಪಗೊಂಡು ಆವೇಶದಿಂದ ಎಲೈ ಲಕ್ಷ್ಮಣನೇ ನಾನು ಬಂದ ವಿಷಯ ಶ್ರೀರಾಮನ ಗಮನಕ್ಕೆ ತರದಿದ್ದಲ್ಲಿ ನಿನ್ನ ಕುಲಕ್ಕೆ ಶಾಪ ಕೊಟ್ಟು ಭಸ್ಮಮಾಡಿ ಬಿಡುತ್ತೇನೆ ಎಂದ!! ಪೂಜ್ಯರೇ ತಾವು ಶಾಂತಗೊಳ್ಳಿ ಸಮಾಧಾನವಿರಲಿ ಲಕ್ಷ್ಮಣನಿಗೆ ಇದು ಗೊತ್ತಿತ್ತು. ತಾನು ಶ್ರೀರಾಮನ ಬಳಿ ಹೋದರೆ ದೇಹÀದಂಡನೆ, ಹೋಗದಿದ್ದಲ್ಲಿ ಕುಲನಾಶ ಎಂದು ಚಿಂತಿಸಿ ಪೂಜ್ಯರೇ ಇಗೋ ಶ್ರೀರಾಮನಿಗೆ ತಾವು ಬಂದ ವಿಷಯ ತಿಳಿಸುವೆ ಎಂದು ಶ್ರೀರಾಮ ಮತ್ತು ಮುನಿ ಇದ್ದ ಏಕಾಂತದಲ್ಲಿ ಪ್ರವೇಶಿಸಿ ದೂರ್ವಾಸರು ಬಂದು ವಿಷಯ ಅರುಹಿದ. ಮುನಿ ಕೊಟ್ಟ ಮಾತಿನಂತೆ ಲಕ್ಷ್ಮಣನಿಗೆ ದೇಹದಂಡನೆ ವಿಧಿಸಿದ. ಲಕ್ಷ್ಮಣ ಅಲ್ಲಿಂದ ನೇರವಾಗಿ ಸರಯೂ ನದಿಯಲ್ಲಿ ದೇಹತ್ಯಾಗ ಮಾಡಿದ. ಇದು ಒಂದು ದೃಷ್ಟಿಯಿಂದ ರಾಮನ ಶಬ್ದದ ಪಾಲನೆ ಮತ್ತು ಅವತಾರ ಸಮಾಪ್ತಿ. ಇನ್ನೊಂದು ಏನೆಂದರೆ ದೂರ್ವಾಸ ಮುನಿಯು ಕೊಡತಕ್ಕ ಶಾಪಕ್ಕೆ ತಡೇ. ಕೋಪ ಶಮನ.
ಇನ್ನು ಮತಂಗಜ ಶಾಪ: ವಿದರ್ಭ ದೇಶದ ರಾಜ ಭೋಜನು ತನ್ನ ಭಗೀನಿ ಇಂದುಮತಿಯ ಸ್ವಯಂವರ ಆಮಂತ್ರಣವನ್ನು ಅಯೋಧ್ಯೆಗೆ ಕಳಿಸಿದ್ದ. ಆಮಂತ್ರಣ ಸ್ವೀಕರಿಸಿದ ಅಜ ಮಹಾರಾಜ ಸೈನ್ಯದೊಂದಿಗೆ ನರ್ಮದಾ ತೀರದಲ್ಲಿ ವಿಶ್ರಾಂತಿಗಾಗಿ ಸೈನ್ಯದೊಂದಿಗೆ ನೆಲೆನಿಂತಿದ್ದರು. ಆ ಸಮಯದಲ್ಲಿ ಮಿಂಚಿನಂತೆ ಒಂದು ಕಾಡಾನೆ ಝೇಂಕರಿಸುತ್ತಾ ನೀರಿನಿಂದ ಹೊರಬಂದು ತನ್ನ ಸೊಂಡಲಿನಿಂದ ಸಿಕ್ಕ ಸಿಕ್ಕ ಮರಗಳನ್ನು ಉರುಳಿಸುತ್ತಾ ಚೀತ್ಕರಿಸುತ್ತಾ ಅಜಮಹಾರಾಜನ ಸೈನ್ಯದತ್ತ ನುಗ್ಗಿತು. ಅಜನ ಸೈನ್ಯದಲ್ಲಿ ಆನೆಗಳೂ-ಕುದುರೆಗಳೂ ಇದ್ದವು. ಅವು ಆ ಆನೆಯ ಆರ್ಭಟ ಚೀತ್ಕಾರನೋಡಿ ಅವು ದಿಕ್ಕುತಪ್ಪಿ ಪಲಾಯನ ಗೈದವು. ಇದರೊಂದಿಗೆ ಸೈನ್ಯವೂ ಚೆಲ್ಲಾಪಿಲ್ಲಿಯಾದವು. ಆ ಆನೆಯ ಹೆಸರು ಮತಂಗಜ. ಆ ಮತಂಗಜ ಆನೆಯು ಅಜಮಹಾರಾಜನನ್ನೇ ಗುರಿಯನ್ನಾಗಿಸಿ ಅವನೆಡೆಗೆ ಬರುತ್ತಿತ್ತು. ಅಜಮಹಾರಾಜನು ಕ್ಷಣವೂ ಗಲಿಬಿಲಿಗೊಳ್ಳದೆ ಧನಸ್ಸನ್ನು ಕೈಗೆತ್ತಿಕೊಂಡು ಕೇವಲ ಇಲ್ಲಿಂದ ಓಡಿಸುವ ದೃಷ್ಟಿಯಿಂದ ಅದರ ಮಸ್ತಕಕ್ಕೆ (ಶಿರಕ್ಕೆ) ಗುರಿಯನ್ನಾಗಿಸಿ ಲೋಹಾಮುಖವೆಂಬ ಬಾಣಬಿಟ್ಟ. ಬಾಣವು ಗುರಿತಲುಪುವ ಹಂತದಲ್ಲಿದ್ದಾಗ ಮತಂಗಜ (ಆನೆ) ಅದೃಶ್ಯವಾಯಿತು.
ಆ ಸ್ಥಳದಲ್ಲಿ ದೇವತಾಸ್ವರೂಪ ಪುರುಷ ಕಾಣಿಸಿಕೊಂಡ. ಎಲ್ಲರೂ ಆಶ್ಚರ್ಯಚಕಿತರಾದರು. ಅಷ್ಟರಲ್ಲಿ ಆ ದಿವ್ಯಪುರುಷ ತನ್ನ ಪ್ರಭಾವದಿಂದ ಕಲ್ಪವೃಕ್ಷದ ಹೂವನ್ನು ತರಿಸಿ ಅದನ್ನು ಅಜಮಹಾರಾಜನ ಮೇಲೆ ಸುರಿಮಳೆಗೈದ. ಅಜಮಹಾರಾಜ ರೋಮಾಂಚನಗೊಂಡ. ಕೆಲಸಮಯದ ನಂತರ ಅಜನನ್ನು ಉದ್ದೇಶಿಸಿ ಕರಜೋಡಿಸಿ ಆ ದಿವ್ಯಪುರುಷ ನಾನು ಯಾರೆಂಬುದನ್ನು ಹೇಳುತ್ತೇನೆ ಕೇಳು ಎಂದ. ನಾನು ಗಂಧರ್ವರಾಜ ಪ್ರಿಯದರ್ಶನ ಅವನ ಪುತ್ರ ಪ್ರಿಯಂವದ. ನಾನು ಮನುಷ್ಯನಿಂದ ಆನೆಯ ರೂಪ ಹೊಂದಿದ ಕತೆ ಒಂದು ಮುನಿಯ ಶಾಪವಾಗಿ, ನಾನು ಒಮ್ಮೆ ಉನ್ಮತ್ತ ಸೊಕ್ಕಿನಿಂದ ಮತಂಗ ಮುನಿಯನ್ನು ಅಪಮಾನ ಮಾಡಿದೆ. ಮತಂಗ ಮುನಿಯು ನನ್ನನ್ನು ಶಪಿಸಿ ಈ ಕ್ಷಣದಿಂದ ನೀನು ಆನೆ ಆಗು ಎಂದರು.
ಆ ಕ್ಷಣದಿಂದ ನಾನು ಮತಂಗಜ ಎಂಬ ಆನೆ ಆದೆ. ನರನಿಂದ ಪ್ರಾಣಿಯಾದ ಆ ಕ್ಷಣದಲ್ಲಿ ನನ್ನ ಉನ್ಮತ್ತವು ನಾಶವಾಗಿ ನಾನು ಮತಂಗ ಮುನಿಯ ಪಾದಕ್ಕೇರಗಿದೆ. ಅವರಲ್ಲಿ ಪರಿಪರಿಯಾಗಿ ಬೇಡಿಕೊಂಡೆ. ಅವರು ನನ್ನ ಮೇಲೆ ದಯೆ ತೋರಿ ಕಾಲಾನಂತರದಲ್ಲಿ ಇಕ್ಷ್ವಾಕುವಂಶದ ಅಜಮಹಾರಾಜನು ನಿನ್ನನ್ನು ಗುರಿಯಾಗಿಸಿ ಬಿಟ್ಟ ಲೋಹಮುಖ ಎಂಬ ಬಾಣವು ಗುರಿತಲುಪುವಾಗ ನೀನು ಪುನಃ ಮಾನವ ದಿವ್ಯಶರೀರ ಪಡೆಯುವೆ. ಅದು ನಿನ್ನಿಂದ ಪುನಃ ನನಗೆ ದಿವ್ಯಶರೀರ ಸಿಕ್ಕಿದೆ. ನಿನಗೆ ಅನಂತ ವಂದನೆಗಳು ಪ್ರಿಯಂವದ ಅದೃಶ್ಯನಾದ. ಮುಂದೆ ಅಜಮಹಾರಾಜ ಇಂದುಮತಿಯನ್ನು ವಿವಾಹವಾದ ಅವನ ಮಗನೇ ದಶರಥ.
ರಾವಣನಿಗೆ ಶಾಪ ಮತ್ತು ಶಾಪ ವಿಸ್ತರಣೆ: ಇದು ಬಹುಜನರಿಗೆ ಅಜ್ಞಾತವಾಗಿ ಉಳಿದ ಒಂದು ಶಾಪದ ಕತೆ. ಇದು ಆಧ್ಯಾತ್ಮ ರಾಮಾಯಣ ಕತೆಯಂತೆ ಮಹಾಪಾಶ್ರ್ವ ಎಂಬ ಹಸ್ತಕ ರಾವಣನಿಗೆ ಸೀತೆಯ ಮೇಲೆ ಅತ್ಯಾಚಾರ ಗೈಯುವಂತೆ ಸೂಚಿಸಿದ. ಆಗ ರಾವಣ ನುಡಿಯುತ್ತಾನೆ, ನನಗೆ ಉಪದೇಶ ಬೇಡ, ಮಹಾಪಾಶ್ರ್ವ ಇದರ ಪರಿಣಾಮದ ಕತೆ ಹೇಳುತ್ತೇನೆ ಕೇಳು. ಇನ್ನು ನಾನು ಅತ್ಯಾಚಾರ ಮಾಡಿದರೆ ನನ್ನ ಶಿರವೂ ನೂರು ಚೂರಾಗಿ (ಹೋಳಾಗಿ) ಸಿಡಿದು ಬೀಳುತ್ತದೆ. ನಾನು ಹಿಂದೆ ಹೀಗೆ ಅತ್ಯಾಚಾರ ಮಾಡಿ ಶಾಪಕ್ಕೆ ಗುರಿಯಾಗಿದ್ದೇನೆ. ಅದರ ವಿಷಯ ಇಂತಿದೆ. ನಾನು ನೀರಡಿಕೆಯ ದಾಹ ಹೋಗಲಾಡಿಸಲು ಒಂದು ಆಶ್ರಮಕ್ಕೆ ಬಂದೆ, ನೀರಿಗಾಗಿ ಕೇಳಿದೆ. ಆಗ ವೇದವÀತಿ ಎಂಬ ಋಷಿ ಕನ್ಯೆಯು ನೀರನ್ನು ತಂದು ಕೊಟ್ಟಳು ಅವಳನನ್ನು ನೋಡಿ ಮೋಹಿತನಾಗಿ ನಾನು ಅವಳ ಮೇಲೆ ಅತಿ ಪ್ರಸಂಗಗೈದೆ. ಅವಳು ನನ್ನನ್ನು ವಾಚಾಮಗೋಚರವಾಗಿ ದೂರಿ ನಿನ್ನ ಪಾಪಾತ್ಮಕ ಸ್ಪರ್ಶವೂ ನನಗೆ ಅಸಹನೀಯವಾಗಿದೆ!! ಎನ್ನುತ್ತಾ ನನ್ನ ಎದುರಿನಲ್ಲೆ ಅಗ್ನಿ ಸ್ಥಾಪಿಸಿ ಸತಿಹೋದಳು! ಇನ್ನೊಂದು ಪ್ರಸಂಗ ನನ್ನ ಮಲತಾಯಿಯ ಮಗ ಕುಬೇರ ನನ್ನ ತಮ್ಮ, ಅವನ ಪುತ್ರ ನಲಕುಬೇರ ಇವನ ಪತ್ನಿ ಪುಂಜಿಕಸ್ಥ¯ ಇವಳ ಮೇಲೂ ಅತ್ಯಾಚಾರಗೈದೆ. ಪುಂಜಿಕಸ್ಥಲ ಗಂಡೆದೆಯವಳು ತುಂಬಾ ಧೈರ್ಯವಂತಳೂ ಅವಳು ಅಗ್ನಿಯನ್ನು ಪ್ರವೇಶಿಸಿದೆ ತನ್ನ ಗಂಡನಲ್ಲಿ ನಡೆದ ಘೋರಘಟನೆ ಹೇಳಿ! ಈ ನರಾಧಮನಿಗೆ ಇಷ್ಟು ಶಕ್ತಿ ಎಲ್ಲಿಂದ ಬಂತು? ಬ್ರಹ್ಮನ ವರದಿಂದ ಉನ್ಮತ್ತನಾಗಿದ್ದಾನೆ. ನಡೆಯಿರಿ ನಾವು ಬ್ರಹ್ಮನಲ್ಲಿಯೇ ಹೋಗಿ ಕೇಳೋಣ, ಎಂದು ನಲಕುಬೇರನ ಜೊತೆ ಬ್ರಹ್ಮಸ್ಥಾನವನ್ನು ತಲುಪಿದರು.
ಪುಂಜಿಕಸ್ಥಲಳು ಬ್ರಹ್ಮದೇವನನ್ನು ವಂದಿಸಿ ಬ್ರಹ್ಮನನ್ನು ಪ್ರಶ್ನಿಸಿದಳು! ಯಾವನಿಗೆ ಎಷ್ಟು ವರದಾನ ಶಕ್ತಿ ಕೊಡುವುದು ಎಂಬುದನ್ನು ನಿರ್ಣಯಿಸಿ ನೀವು ಕೊಟ್ಟ ವರವು ಒಂದು ಸೀಮೆಯಲ್ಲಿರಲಿ ಈ ನಿಮ್ಮ ವರವು ಸ್ತ್ರೀಯರಿಗೆ ಶಾಪವಾಗಿ ಪರಿಗಣಿಸುತ್ತಿದೆ. ಯೋಚಿಸಿ ನಿಮ್ಮ ವರ ಅವನಿಗೆ ಅವಧ್ಯವೆನಿಸುತ್ತದೆ. (ಅವಧ್ಯವೆಂದರೆ ಯಾರಿಂದಲೂ ಕೊಲ್ಲಲಾರದಂತಹ) ಈ ವರದ ಬಗ್ಗೆ ಪುನಃ ವಿಮರ್ಶೆಯಾಗಲಿ ಎಂದು ತುಸು ಕೋಪದಲ್ಲಿಯೇ ಬ್ರಹ್ಮ ದೇವನಲ್ಲಿ ನಡೆದ ಘಟನೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟಳು. ವೇದವತಿ ಮೇಲೆ ನಡೆದ ಅತ್ಯಾಚಾರ ಅವಳ ಅಗ್ನಿಪ್ರವೇಶ ಮಾಡಿದ ಘಟನೆಯನ್ನು ಬಹು ಗದ್ಗತವಾಗಿ ನುಡಿದಳು. ಬ್ರಹ್ಮದೇವನು ತತ್‍ಕ್ಷಣದಲ್ಲಿ ನನ್ನನ್ನು ಬರ ಹೇಳಿ ನಡೆದ ಘಟನೆಯ ಪರಿಣಾಮವನ್ನು ಕೇಳಿದನು ಮತ್ತು ಹೇಳಿದನು. ನಾನು ಕರಜೋಡಿಸಿ ತಲೆತಗ್ಗಿಸಿ ಭೂಮಿಯನ್ನು ನೋಡುತ್ತಾ ನಿಂತೆ. ಎಲೈ ರಾವಣನೇ ನಿನಗೆ ನರ ಮತ್ತು ವಾನರರನ್ನು ಬಿಟ್ಟು ಯಾರಿಂದಲೂ ನಿನಗೆ ಮರಣವಿಲ್ಲ ಎಂದಿದ್ದೆ. ಆ ವರದಲ್ಲಿ ಒಂದು ಮಹತ್ತರ ಬದಲಾವಣೆ ಮಾಡುತ್ತೇನೆ ಗಂಭೀರವಾಗಿ ಕೇಳು ಎಂದ.
ಬ್ರಹ್ಮದೇವನ ಶಾಪದ ಒಂದೊಂದು ಶಬ್ದವು ಸ್ಪಷ್ಟವಿದೆ. ರಾವಣಾ ನಾನು ನಿನಗೆ ಪೂರ್ವದಲ್ಲಿ ಕೊಟ್ಟ ವರದ ಸಾಧಕ ಬಾಧಕ ಅದರ ಘೋರ ಪರಿಣಾಮ ಗಮನಿಸಿದೆ. ಕೇಳಿದೆ! ನೀನು ಈ ಎಲ್ಲಾ ವರಕ್ಕೆ ಅರ್ಹನಲ್ಲ. ನೀನು ಇನ್ನು ಮುಂದೆ ಯಾವುದೇ ಸ್ತ್ರೀಯ ಇಚ್ಛೆ ವಿರುದ್ಧ ಅತ್ಯಾಚಾರ ಮಾಡಿದರೆ ಆ ಕ್ಷಣದಲ್ಲಿ ನಿನ್ನ ತಲೆಯು ನೂರು ತುಂಡಾಗಿ (ಹೋಳಾಗಿ) ನೀನು ಮರಣ ಹೊಂದುವಿ. ಸ್ವೇಚ್ಛೆಯಿಂದ ಆ ಸ್ತ್ರೀಯು ನಿನ್ನ ಕಡೆ ಬಂದರೆ ಮಾತ್ರ ನಿನಗೆ ಜೀವದಾನ ಎಂದು ಖಂಡಿತವಾಗಿ ಹೇಳಿದನು. ಆ ದಿನದಿಂದ ನನಗೆ ಪರಸ್ತ್ರೀ ಎಂದರೆ ತುಂಬಾ ಭೀತಿ. ಆದ್ದರಿಂದ ನಾನು ಸೀತೆಯ ಮನಸ್ಸನ್ನು (ಗೆಲ್ಲಲು) (ವಶ) ಪಡಿಸಿಕೊಂಡರೆ ಅವಳ ಪ್ರಾಪ್ತಿ ನನಗಾಗಬಹುದು. ಹಾಗಾಗಿ ಸೀತೆಯ ಮೇಲೆ ಅತ್ಯಾಚಾರ ಮಾಡುವಂತಿಲ್ಲ. ಅತ್ಯಂತ ಆಶ್ಚರ್ಯವೆಂದರೆ ಇದನ್ನು ಮಹಾಪಾಶ್ರ್ವನಿಗೆ ತುಂಬಿದ ಸಭೆಯಲ್ಲಿ ಹೇಳಿದ್ದು. ಇಲ್ಲಿ ರಾಮಾಯಣ ಚಿಂತನೆ ಅಗತ್ಯ ರಾಮಾಯಣವು ಮಾನವನನ್ನು ಹೀಗೆ ಎಚ್ಚರಿಸಿದೆ. ಧರ್ಮ, ಅರ್ಥ, ಕಾಮ, ಮೋಕ್ಷಗಳು ದೈವವು ಮಾನವನಿಗಿತ್ತ ವರಗಳು.
ಅರ್ಥ ಮತ್ತು ಕಾಮವು ಮಾನವನು ಸಾಧಿಸಿ ಅನುಭವಿಸಲೇಬೇಕಾದದ್ದು ಅವನ ಜೀವನೋದ್ದೇಶ, ಹಾಗಾಗಿ ಹಕ್ಕೆನಿಸಿದರೂ "ಅವು ಧರ್ಮದ ಎಲ್ಲೆಯನ್ನು ಮೀರಿದಾಗ ಶಾಪ" ಎಂದೇ ಪರಿಗಣಿತವಾಗುತ್ತದೆ. ಬದುಕಿನಲ್ಲಿ ವ್ಯಾವಹಾರಿಕತೆಯು ಎಂದೆಂದೂ ನೈತಿಕತೆಯನ್ನು ಆಹುತಿ ತೆಗೆದು ಕೊಳ್ಳುವಂತಾಗಬಾರದು. ವಸ್ತು ಸಂಪನ್ಮೂಲಗಳಿಂದಷ್ಟೇ ಬಯಸಿದ್ದೆಲ್ಲವನ್ನು ಗಳಿಸಿಕೊಳ್ಳಬಹುದೆಂಬ ವಿಕೃತಿ ಮನೋಸ್ಥಿತಿ ಉದ್ಭವಿಸಿದಾಗ ಮಾನವನ ರೂಪದಲ್ಲಿ ದಾನವನ ಉದಯವಾಗುತ್ತದೆ. ಮನುಷ್ಯನು ತನ್ನ ಜೀವಿತಕಾಲದಲ್ಲಿ ಅಪೇಕ್ಷಿಸುವ ಧರ್ಮ ಹಾಗೂ ಕಾಮಗಳು ಧರ್ಮಾಚರಣೆಯಿಂದ ದೊರೆತೇ ತೀರುತ್ತದೆ. ಆದರೂ ಜನರು ಧರ್ಮವನ್ನ ಇಷ್ಟಪಡುವುದಿಲ್ಲ!
- ವೇ.ವಿದ್ವಾನ್ ಶಿವರಾಮ ಜೋಗಳೆಕರ್, ಕೊಲ್ಲಾಪುರ, ಮಹಾರಾಷ್ಟ್ರ
ಲೇಖಕರ ಸಂಕ್ಷಿಪ್ತ ಪರಿಚಯ:
ವೇದ ವಿದ್ವಾನ ಶಿವರಾಮ ಜೋಗಳೇಕರ ಮೂಲ ಊರು ಶ್ರೀ ಕ್ಷೇತ್ರ ಗೋಕರ್ಣವಿದ್ದು ಪ್ರಸ್ತುತ ಮಹಾರಾಷ್ಟ್ರ ರಾಜ್ಯದ ಕೋಲ್ಹಾಪುರದಲ್ಲಿ ಪೌರೋಹಿತ್ಯ ಮಾಡುತ್ತಿದ್ದಾರೆ. ಇವರು ಸಂಪೂರ್ಣ ಚಾತುರ್ಮಾಸ್ಯ ವಿಧಿ ವಿಧಾನ ಎಂಬ ಪುಸ್ತಕವನ್ನು ಬರೆದಿದ್ದಾರೆ. ಅನೇಕ ಧಾರ್ಮಿಕ ಲೇಖಕವನ್ನು ಬರೆದಿದ್ದು ಸಂಸ್ಕೃತಿಯ ಚಿಂತಕರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ