ಔಷಧ ರಹಿತ ಚಿಕಿತ್ಸಾ ಸೇವೆಗೆ ಪದ್ಮಭೂಷಣ ಪ್ರಶಸ್ತಿ ಗೌರವ

Upayuktha
0


ಮಂಗಳೂರು: ಸಮಾಜಸೇವೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಜನಪ್ರಿಯ ಹೆಸರಾಗಿರುವ ಡಾ. ಸೀತಾರಾಮ್ ಜಿಂದಾಲ್ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅವರ ಅಪ್ರತಿಮ ಸಮಾಜಸೇವೆ ಕೆಲಸಗಳಿಗೆ, ವಿಶೇಷವಾಗಿ ಪ್ರಕೃತಿ ಚಿಕಿತ್ಸೆ ಕ್ಷೇತ್ರದಲ್ಲಿನ ಅವರ ಮಹತ್ವದ ಕೊಡುಗೆಗಳ ಕಾರಣಕ್ಕೆ ಈ ಪುರಸ್ಕಾರವು ಪ್ರಾಪ್ತವಾಗಿದೆ. ಔಷಧ ರಹಿತ ಚಿಕಿತ್ಸೆಗೆ ಮತ್ತು ಜಿಂದಾಲ್ ನೇಚರ್‍ಕ್ಯೂರ್ ಇನ್‍ಸ್ಟಿಟ್ಯೂಟ್ ಸ್ಥಾಪನೆ ಮಾಡಿದ ಡಾ.ಜಿಂದಾಲ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.


ಕಿಬ್ಬೊಟ್ಟೆಯ ಕ್ಷಯರೋಗಕ್ಕೆ ತುತ್ತಾಗಿ ಸ್ವತಃ ರೋಗದ ಅನುಭವ ಪಡೆದ ಅವರು ಉಪವಾಸ, ಎನಿಮಾಗಳು ಮತ್ತು ಇತರ ಅಸಾಂಪ್ರದಾಯಿಕ ವಿಧಾನಗಳ ಮೂಲಕ ಗುಣಮುಖರಾದರು. ಈ ವಿಶಿಷ್ಟ ಅನುಭವವು ಪ್ರಕೃತಿ ಚಿಕಿತ್ಸೆ ಮತ್ತು ಯೋಗದಲ್ಲಿ ಅವರಿಗೆ ಅಚಲವಾದ ನಂಬಿಕೆಯನ್ನು ಹುಟ್ಟುಹಾಕಿತು.


ಸಮಗ್ರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಆಸ್ಪತ್ರೆಯನ್ನು ಆರಂಭಿಸಿದರು. ಅದು ಇಂದು ಪ್ರಕೃತಿ ಚಿಕಿತ್ಸೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಡಾ. ಜಿಂದಾಲ್ ಅವರ ಬದ್ಧತೆಗೆ ಸಾಕ್ಷಿ ನಿಂತಿದೆ.


ಅಸ್ತಮಾ, ಮಧುಮೇಹ, ಅಧಿಕ ರಕ್ತದೊತ್ತಡ, ಸಂಧಿವಾತ ಮತ್ತು ಕೆಲವು ಕ್ಯಾನ್ಸರ್ ಪ್ರಕರಣಗಳು ಸೇರಿದಂತೆ ವಿವಿಧ ಕಾಯಿಲೆಗಳ ಚಿಕಿತ್ಸೆಗಾಗಿ ವಿಶೇಷ ವಿಶ್ವ ದರ್ಜೆಯ ಸೌಲಭ್ಯ ಇದಾಗಿದೆ. ಇಂದು ಇದು 550 ಹಾಸಿಗೆಗಳ ಹೆಗ್ಗಳಿಕೆ ಹೊಂದಿದ್ದು, ತಮ್ಮ ಆರೋಗ್ಯ ಕಾಳಜಿಗಾಗಿ ಔಷಧ-ಮುಕ್ತ ಪರ್ಯಾಯ ಚಿಕಿತ್ಸೆಗಳನ್ನು ಬಯಸುವವರಿಗೆ ಭರವಸೆಯ ದಾರಿದೀಪವಾಗಿದೆ.


ತನ್ನ ಪ್ರಯಾಣದ ಉದ್ದಕ್ಕೂ, ಡಾ. ಜಿಂದಾಲ್ ಹಲವಾರು ಆವಿಷ್ಕಾರಗಳು ಮತ್ತು ಚಿಕಿತ್ಸೆಗಳನ್ನು ಪರಿಚಯಿಸಿದ್ದಾರೆ. ಹಲವಾರು ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿದ್ದಾರೆ. ಅವರ ದೂರದೃಷ್ಟಿಯ ನಾಯಕತ್ವ ಮತ್ತು ಅಪಾರ ಕೊಡುಗೆಗಳನ್ನು ಗುರುತಿಸಿ, ಡಾ. ಜಿಂದಾಲ್ ಅವರು ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ, ಚಂದ್ರಶೇಖರ್, ಐ.ಕೆ ಗುಜ್ರಾಲ್, ಎಚ್.ಡಿ. ದೇವೇಗೌಡ, ಉಪಪ್ರಧಾನಿ ದೇವಿಲಾಲ್ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳಿಂದ ಗೌರವ ಪುರಸ್ಕಾರಗಳನ್ನು ಪಡೆದಿದ್ದಾರೆ ಎಂದು ಪ್ರಕಟಣೆ ಹೇಳಿದೆ.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top