ಸಾಂದರ್ಭಿಕ ಚಿತ್ರ
ಎಲ್ಲ ವಾಹನಗಳಿಗೆ HSRP ಹೊಸ ನಂಬರ್ ಪ್ಲೇಟ್ ಹಾಕಿಸಲು ಕಡೇ ದಿನಾಂಕ ಈ ತಿಂಗಳ 17. ಇನ್ನು 14 ದಿನಗಳಲ್ಲಿ ಹೊಸ ನಂಬರ್ ಪ್ಲೇಟ್ ಹಾಕಿಸಿಕೊಳ್ಳಬೇಕು. ಈ ಬಗ್ಗೆ ಅನೇಕ ಗೊಂದಲಗಳಿವೆ:
1) 14 ದಿನಗಳಲ್ಲಿ HSRP ನಂಬರ್ ಪ್ಲೇಟ್ ಹಾಕಿಸದಿದ್ದರೆ ದಂಡ ತೆರಬೇಕಾ? ಎಷ್ಟು?
2) ಈ HSRP ನಂಬರ್ ಪ್ಲೇಟ್ ಯೋಜನೆ ಯಾವ ಸರಕಾರದ್ದು? ಕೇಂದ್ರ? ರಾಜ್ಯ? ಜಂಟಿ?
3) 1.70 ಕೋಟಿ ವಾಹನಗಳಿಗೆ ಹೊಸ HSRP ನಂಬರ್ ಪ್ಲೇಟ್ ಹಾಕಿಸಬೇಕಾಗಿದ್ದು, ಅದರಲ್ಲಿ ಈಗ ಆಗಿರುವುದು ಕೇವಲ 10 ಲಕ್ಷ ಮಾತ್ರ ಅಂತ ವರದಿ ಹರಿದಾಡುತ್ತಿದೆ. ಉಳಿದ 1.60 ಕೋಟಿ ಇನ್ನು 14 ದಿನಗಳಲ್ಲಿ ಸಾಧ್ಯವಾ?
4) ಹೊಸ ನಂಬರ್ ಪ್ಲೇಟ್ ಇಲಾಖೆಗಳ ಮತ್ತು ಸರಕಾರದ ಅಗತ್ಯವಾಗಿರುವುದರಿಂದ, ಸರಕಾರವೇ ಅದರ ಖರ್ಚನ್ನು ಭರಿಸಿ, ವಾಹನ ಮಾಲಿಕರಿಗೆ ಉಚಿತವಾಗಿ ಮಾಡಿ ಕೊಡಬಹುದಾಗಿತ್ತಲ್ವಾ?
5) ಹೊಸ ನಂಬರ್ ಪ್ಲೇಟ್ ಮಾಡಿಸುವ ಬಗ್ಗೆ, ನಿಗದಿತ ದಿನಾಂಕದೊಳಗೆ ಮಾಡಿಸದಿದ್ದರೆ ಬೀಳಬಹುದಾದ ದಂಡದ ಬಗ್ಗೆ ವಾಹನ ಮಾಲಿಕರಿಗೆ ಅಧಿಕೃತ ಮಾಹಿತಿಯನ್ನು ಒಂದು SMS ಅಥವಾ ಪೋಸ್ಟ್ ಕಾರ್ಡ್ ಅಥವಾ ಒಂದು ಕರೆ ಮಾಡಿಯಾದರೂ ತಿಳಿಸುವ ಕ್ರಮವನ್ನು RTO ದಿಂದ ಮಾಡಬಹುದಾಗಿತ್ತು. ಇದಾಗಿಲ್ಲ. ಏಕೆ?
50 ರೂಪಾಯಿಯ ಎಮಿಷನ್ ಟೆಸ್ಟಿಗೆ SMS ಬರುತ್ತೆ, ಕರೆ ಮಾಡ್ತಾರೆ. ವಾಹನದ ಇನ್ಷ್ಯೂರೆನ್ಸ್‌ಗೆ ಕೂಡ ಕರೆ ಬರುತ್ತೆ, ಪೋಸ್ಟ್ ಕವರ್‌ನಲ್ಲಿ ಇಂಟಿಮೇಷನ್ ಬರುತ್ತೆ, ಇ-ಮೆಯಿಲ್ ಬರುತ್ತೆ. ಈ HSRP ನಂಬರ್ ಪ್ಲೇಟ್ ಬಗ್ಗೆ ಅನೇಕ ವಾಹನ ಮಾಲಿಕರ ಅರಿವಿಗೇ ಬಂದಿಲ್ಲ. ಈಗ ಡ್ಯೂ ಡೇಟ್ ಫಿಕ್ಸ್ ಮಾಡಿ ದಂಡ, ಶಿಕ್ಷೆ ಅಂತಲ್ಲ ಸರಕಾರ ಹೇಳುವುದು ಸರಿಯಾ?
6) ಹೊಸ ನಂಬರ್ ಪ್ಲೇಟ್‌ಗೆ ವಾಹನಗಳ ಷೋ ರೂಮ್ ಮೂಲಕ ಅರ್ಜಿ ಕೊಟ್ಟವರಿಗೆ ತಿಂಗಳಾದರೂ ಇನ್ನೂ ನಂಬರ್ ಪ್ಲೇಟ್ ಬಂದಿಲ್ಲ. ಅವರು ಹೇಳುವ ಪ್ರಕಾರ, ನಂಬರ್ ಪ್ಲೇಟ್ ತಯಾರಿಕೆಯನ್ನು ಖಾಸಗಿಯವರಿಗೆ ಟೆಂಡರ್ ಕರೆದು ಕೊಡಲಾಗಿದೆ ಮತ್ತು ನಿಧಾನವಾಗಿ ನಂಬರ್ ಪ್ಲೇಟ್ ತಯಾರಿಸುತ್ತಿದ್ದಾರಂತೆ. ಅದೇ ನಿಜವಾಗಿದ್ದರೆ, 10 ಲಕ್ಷ ನಂಬರ್ ಪ್ಲೇಟ್‌ಗಳಿಗೇ ಇಷ್ಟು ನಿಧಾನವಾದರೆ, ಇನ್ನುಳಿದ 1.60 ಕೋಟಿ ನಂಬರ್ ಪ್ಲೇಟ್ ತಯಾರಿಕೆಗೆ ವರ್ಷಗಟ್ಟಲೆ ಬೇಕಾಗಬಹುದು. ಗ್ರಾಹಕರು ಮಾಡದ ತಪ್ಪಿಗೆ ದಂಡ ಕಟ್ಟಬೇಕಾ?
7) ಆನ್‌ಲೈನ್‌ನಲ್ಲೇ ಹೊಸ ನಂಬರ್ ಪ್ಲೇಟ್‌ಗೆ ಅರ್ಜಿ ಹಾಕಬಹುದು ಅಂತ ಕೆಲವು ದಿನಗಳ ಹಿಂದೆ ವಾಟ್ಸಪ್‌ನಲ್ಲಿ ಒಂದು ಲಿಂಕ್ ಬಂದಿತ್ತು. ಆದರೆ, ಅದು RTO ಅಥವಾ ಸರಕಾರದ ವೆಬ್‌ಸೈಟ್ ಆಗಿರದೆ ಖಾಸಗಿ ವೆಬ್‌ಸೈಟ್‌ಗಳಾಗಿವೆ. ಅದು ಅಧಿಕೃತ ನಂಬಿಕಾರ್ಹ ವೆಬ್‌ಸೈಟ್ ಹೌದಾ ಅನ್ನುವುದು ಗೊಂದಲ. ಹೊಸ ನಂಬರ್ ಪ್ಲೇಟ್‌ಗೆ ಅಮೌಂಟ್ ಕಟ್ಟ ಬೇಕಾದ್ದರಿಂದ ಈ ಅನುಮಾನ. ಗೊಂದಲ ಪರಿಹರಿಸುವವರ್ಯಾರು?
ಅರವಿಂದ ಸಿಗದಾಳ್, ಮೇಲುಕೊಪ್ಪ.
9449631248
******
ಆರ್‌ಟಿಓ ಅಧಿಕಾರಿಗಳ ಉತ್ತರ:
https://www.siam.in/hrspsubmit.aspx?mpgid=91&pgidtrail=91
Online ಲಿ ಹಲವಾರು website link ಗಳು ಗೂಗಲ್ ಮಾಡಿದ್ರೆ ಓಪನ್ ಆಗುತ್ತೆ ಆದರೆ ಅದೆಲ್ಲ fake website ಆಗಿರುತ್ತೆ.
ಈ ಮೇಲೆ ಹೇಳಿದ ಸಿಯಮ್ website ಅಧಿಕೃತವಾಗಿರುತ್ತೆ.
ಇದರಲ್ಲಿ HSRP ಮಾಡಿಸಲು ವಾಹನದ ಮಾಹಿತಿಯನ್ನು ಹಾಕಿದರೆ ನಿಮ್ಮ ವಾಹನದ ತಯಾರಕರ website ge ವಾಹನದ ಮಾಹಿತಿ ರವಾನೆಯಾಗುತ್ತದೆ ನಂತರ ವಾಹನದ ಡೀಲರ್ (ಸ್ಥಳೀಯ ಡೀಲರ್) ಸೆಲೆಕ್ಟ್ ಮಾಡಿ ನಿಮ್ಮ HSRP ಪ್ಲೇಟ್ ಹಾಕಿಸಲು ನಿಗದಿತ ದಿನಾಂಕವನ್ನು ತೆಗೆದುಕೊಳ್ಳಬೇಕು (ಸ್ಲಾಟ್ ಡೇಟ್) ನಂತರ ಆನ್ಲೈನ್ payment ಮಾಡಿದರೆ.. HSRP ಬುಕಿಂಗ್ ಮುಕ್ತವಾಗಲಿದೆ. ನಂತರ ನಿಗದಿತ ಸ್ಲಾಟ್ ಡೇಟ್ ನಲ್ಲಿ ತಾವು HSRP ಹಾಕಿಸಲು ಸೆಲೆಕ್ಟ್ ಮಾಡಿದ ಡೀಲರ್ ಹತ್ತಿರ ಹೋದರೆ ಅವರೇ HSRP ಫಿಕ್ಸ್ ಮಾಡುವರು.
HSRP ಆನ್ಲೈನ್ booking ಮಾಡೋವಾಗ ಕೆಲವು ತಾಂತ್ರಿಕ ಲೋಪಗಳು ಸಂಭವಿಸಿದಾಗ ಅದನ್ನು ಸರಿಪಡಿಸಲು rto office ನವರ ಹೊಣೆ ಆಗಿರುತ್ತದೆ.
(ವಾಹನದ ಮಾಹಿತಿ ಹಾಕಿದಾಗ ಅದರ ಡೇಟಾ ವಿವರವಾಗಿಲ್ಲದಿದ್ದಾಗ)
Rto ದ Vahan database nalli ವಾಹನದ ಮಾಹಿತಿ duplicate records ಇದ್ದಾಗ, maker name ಸರಿ ಇಲ್ಲದಿದ್ದಾಗ, ಚಾಸ್ಸಿಸ್ ಸಂಖ್ಯೆ ಸರಿ ಇಲ್ಲದಿದ್ದಾಗ ತಾಂತ್ರಿಕ ತೊಂದರೆ ಸಂಭವಿಸುತ್ತದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ