ಮಕ್ಕಳಲ್ಲಿ ಮರುಕಳಿಸುವ ಕೆಮ್ಮು, ನೆಗಡಿ, ಜ್ವರ: ಏನು ಪರಿಹಾರ...?

Upayuktha
0


ಸೀನುವುದು, ಕೆಮ್ಮು, ಗಂಟಲು ಕೆರೆತ, ಮೂಗಿನಿಂದ ಬರುವ ನೆಗಡಿ ಅಥವಾ ನೀರಿನಂತಹ ಸ್ರಾವ, ಕಣ್ಣಲ್ಲಿ ನೀರು ಬರುವುದು, ಸುಸ್ತು, ಜ್ವರ, ಹಸಿವು ಇಲ್ಲದಿರುವುದು, ವಾಂತಿ, ಭೇದಿ, ತಲೆನೋವು- ಇತ್ಯಾದಿ ಲಕ್ಷಣಗಳು ಮಕ್ಕಳಲ್ಲಿ ಬ್ಯಾಕ್ಟೀರಿಯಾ ಅಥವಾ ವೈರಸ್ ಸೂಕ್ಷಾö್ಮಣು ಸೋಂಕು, ಅಲರ್ಜಿ ಕಾರಣಗಳಿಂದ ಆಗಿರಬಹುದು. ವರ್ಷಕ್ಕೆ ಒಂದೆರಡು ಬಾರಿ ಬರುವುದು ಸಹಜ. ಆದರೆ ಪದೇಪದೇ ಮಕ್ಕಳಲ್ಲಿ ಈ ಲಕ್ಷಣಗಳು ಕಂಡುಬಂದರೆ ಹೆತ್ತವರು ಇದನ್ನು ಸ್ವಲ್ಪ ಗಂಭೀರವಾಗಿ ತೆಗೆದುಕೊಂಡು, ಕೇವಲ ತಾತ್ಕಾಲಿಕ ಉಪಶಮನ ಕೊಡುವ ವಿಧಾನಗಳಿಗೆ ಮೊರೆ ಹೋಗದೇ, ರೋಗದ ಮೂಲಕ್ಕೆ ಹೋಗಿ, ಸಮಸ್ಯೆಯನ್ನು ಸರಿಯಾಗಿ ಆಲಿಸಿ ಚಿಕಿತ್ಸೆ ಕೊಡುವ ರ‍್ಯಾಯ ವಿಧಾನಗಳನ್ನು ಆಶ್ರಯಿಸುವುದು ಒಳ್ಳೆಯದು. ಮತ್ತೆಮತ್ತೆ ಬರುವ ಶೀತ ಕಾಲಾಂತರದಲ್ಲಿ ಕಿವಿ, ಗಂಟಲು, ಸೈನಸ್ ಸಮಸ್ಯೆಗಳನ್ನು ಉಂಟುಮಾಡಬಹುದು.


ರೋಗದ ಕಾರಣ ಪತ್ತೆ ಹಚ್ಚಲು ರಕ್ತ ತಪಾಸಣೆಯ ಅಗತ್ಯ ಬೇಕಾಗಬಹುದು. 

ಆಂಟಿಬಯೋಟಿಕ್ ನೀಡಲು ವೈದ್ಯರ ಮೇಲೆ ಒತ್ತಡ ತರಬೇಡಿ. ಯಾಕೆಂದರೆ ವೈರಸ್ ಹಾಗೂ ಅಲರ್ಜಿಯಿಮದ ಉಂಟಾದ ಶೀತದಲ್ಲಿ ಆಂಟಿಬಯೋಟಿಕ್ ಯಾವುದೇ ಪ್ರಯೋಜನ ನೀಡಲಾರದು, ಬದಲಿಗೆ ಹಾನಿಯನ್ನೇ ಉಂಟುಮಾಡುತ್ತದೆAದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ. ಬ್ಯಾಕ್ಟೀರಿಯಾ ಸೋಂಕಿನಲ್ಲಿ ಮಾತ್ರ ಅದು 


ಉಪಯೋಗ. ಯಾವಾಗಲೋ ವೈದ್ಯರು ಕೊಟ್ಟ ಔಷಧವನ್ನು ಹಿಂದುಮುAದು ನೋಡದೆ ಮಗುವಿನ ಮೇಲೆ ಪ್ರಯೋಗಿಸುವುದು, ತಾವೇ ಆಂಟಿಬಯೋಟಿಕ್ ಔಷಧ "ಮೆಡಿಕಲ್"ನಿಂದ ಖರೀದಿಸಿ ಕೊಡುವುದು- ಮಗುವಿನ ಭವಿಷ್ಯದ ಆರೋಗ್ಯಕ್ಕೆ ಮಾರಕ. ಕರುಳಿನ ಉಪಕಾರಕ ಸೂಕ್ಷಾö್ಮಣು ಸಮೂಹವನ್ನು  ಅದು ನಾಶಮಾಡಿ ಮಗುವಿಗೆ ಮುಂದೆ ಬೊಜ್ಜು, ಅಲರ್ಜಿ ಸಮಸ್ಯೆ ಕಾಣಿಸಬಹುದು.


 

ಶೀತ ಇದ್ದಾಗ ಮಗುವಿಗೆ ಸಾಕಷ್ಟು ದ್ರವಾಂಶ ಇರುವ ಆಹಾರ ಕೊಡಬೇಕು. ವಿಶ್ರಾಂತಿ ಬೇಕು. ಮೂಗಿನ ಉಸಿರಾಟದ ಅಡಚಣೆಗೆ ಸಲೈನ್ ನಾಸಲ್ ಸ್ಪೆçà ಬಳಸಬಹುದು. 

ಶೀತ, ಕೆಮ್ಮು ಇದ್ದಾಗ ಹಾಲು ಕೊಡಬಾರದೆಂಬ ತಪ್ಪು ಕಲ್ಪನೆ ಹೆತ್ತವರಲ್ಲಿ ಇದೆ. ಹಾಲನ್ನು ಧಾರಾಳವಾಗಿ ಕೊಡಿ. ಒಂದು ಚಿಟಿಕೆ ಅರಸಿನ ಪುಡಿ ಸೇರಿಸಿ ಕೊಡಿ. ಜೇನು ಕೊಟ್ಟರೆ ಉಷ್ಣ ಎಂಬ ತಪ್ಪು ಯೋಚನೆ ಇದೆ. ಜೇನು ಅತ್ಯುತ್ತಮ ಉರಿಯೂತ ನಾಶಕ, ಸೂಕ್ಷಾö್ಮಣು ನಾಶಕ. ಎದೆಹಾಲನ್ನು ಮಗುವಿಗೆ ಸಾಕಷ್ಟು ಕೊಡಿ. ಇದು ಮಗುವಿನ ರೋಗ ನೀರೋಧಕ ವ್ಯವಸ್ಥೆಯನ್ನು ಬಲಪಡಿಸುವುದು. 


ಮಗುವಿಗೆ ಜ್ವರ ಇದ್ದರೆ, ಭದ್ರಮುಷ್ಟಿ, ಅಣಿಲೆಕಾಯಿ, ಕಹಿಬೇವಿನ ತೊಗಟೆ, ಜ್ಯೇಷ್ಠಮಧು- ಸೇರಿಸಿ ಕುದಿಸಿ ಕಾಲು ಭಾಗಕ್ಕೆ ಇಳಿಸಿ, ಕಷಾಯ ಮಾಡಿ ಅರ್ಧ ಚಮಚ ಕೊಡಿ.

ಅಥವಾ ಶುಂಠೀ, ಕರಿಮೆಣಸು, ಹಿಪ್ಪಲಿ, ಅಣಿಲೆಕಾಯಿ, ನೆಲ್ಲಿಕಾಯಿ, ಶಾಂತಿಕಾಯಿ, ಕೊತ್ತಂಬರಿ, ಶತಾವರೀ, ಬಜೆ, ಭಾರಂಗಿ ಮತ್ತು ಒಂದೆಲಗ ಸೇರಿಸಿ ಮಾಡಿದ ಪುಡಿಯನ್ನು


ಎರಡು ಗ್ರಾಂನಷ್ಟು ಜೇನು ಸೇರಿಸಿ ನೆಕ್ಕಿಸಿ.

ಮಗುವಿಗೆ ಹಸಿವು ಕಡಿಮೆ ಇದ್ದಲ್ಲಿ, ಸಿಂದುಪ್ಪು, ಅಣಿಲೆಕಾಯಿ, ನೆಲ್ಲಿಕಾಯಿ, ಶಾಂತಿಕಾಯಿ ಪುಡಿಮಾಡಿ, ಸ್ವಲ್ಪ ದನದ ತುಪ್ಪ ಮತ್ತು ಜೇನು ಸೇರಿಸಿ ನಾಲಗೆಗೆ ನೆಕ್ಕಿಸಿ. ಅಥವಾ ಅಣಿಲೆಕಾಯಿ ಹುಡಿಯನ್ನು ಜೇನು ಸೇರಿಸಿ ಕೊಟ್ಟರೂ ಅಗಬಹುದು.

ಮಗು ತುಂಬಾ ಅಳುತ್ತಿದ್ದರೆ, ತ್ರಿಫಲಾಚೂರ್ಣ, ಹಿಪ್ಪಲಿ ಚೂರ್ಣ ಮಿಶ್ರಮಾಡಿ ಎರಡು ಗ್ರಾಂನಷ್ಟು ಸ್ವಲ್ಪ ತುಪ್ಪ ಮತ್ತು ಜೇನು ಸೇರಿಸಿ ಮಗುವಿಗೆ ಕೊಡಿ. ಮಗುವಿಗೆ ಬಿಕ್ಕಳಿಕೆ ಹಾಗೂ ದಮ್ಮು ಕಟ್ಟುವುದು ಇದ್ದರೆ- ಹಿಂಗು, ಜ್ಯೇಷ್ಠಮಧು, ಏಲಕ್ಕಿ, ಶುಂಠೀ ಪುಡಿಮಾಡಿ ಜೇನು ಸೇರಿಸಿ ನೆಕ್ಕಿಸಿ. ಕಫ ಕೆಮ್ಮು ಹೆಚ್ಚಾಗಿದ್ದರೆ-ಶುಂಠೀ, ಕರಿಮೆಣಸು, ಹಿಪ್ಪಲೀ, ಸಿಂದುಪ್ಪು ಹುಡಿ ಮಾಡಿ ಸೇರಿಸಿ ಕಪ್ಪು ಬೆಲ್ಲದೊಂದಿಗೆ ಮಗುವಿಗೆ ಕೊಡಿ. ಒಣದ್ರಾಕ್ಷೆ, ಹಿಪ್ಪಲೀ, ಶುಂಠೀ ಹುಡಿ ಮಾಡಿ ಸೇರಿಸಿ ಜೇನಿನೊಂದಿಗೆ ಕೊಡಿ. 

 


ಶೀತದೊಂದಿಗೆ ಕೆಮ್ಮುದಮ್ಮು ಕೂಡಿಕೊಂಡಿದ್ದಲ್ಲಿ- ಹರಳೆಣ್ಣೆಯನ್ನು ವೀಳ್ಯದೆಲೆಗೆ ಲೇಪಿಸಿ, ಸ್ವಲ್ಪ ಬಿಸಿ ಮಾಡಿ ಬ್ಯಾಂಡೇಜ್ ತರ ಎದೆಯಲ್ಲಿ ಹಾಕಿ. ಆಡುಸೋಗೆ ಗಿಡದ ಹೂಗಳನ್ನು ಪುಡಿಮಾಡಿ, ಒಂದುಗ್ರಾAನಷ್ಟು ಸ್ವಲ್ಪ ಜೇನು ಸೇರಿಸಿ ದಿನಕ್ಕೆ ಮೂರುಸಲ ಕೊಡಿ. ಲವಂಗವನ್ನು ಹುರಿದು ಹುಡಿ ಮಾಡಿ, ನೂರಾಇಪ್ಪತ್ತೆöÊದು ಗ್ರಾಂನಷ್ಟು ತೆಗೆದುಕೊಂಡು ಜೇನು ಸೇರಿಸಿ ದಿನಕ್ಕೆ ಎರಡು ಸಲ ಕೊಡಿ. ಒಂದು ಎಸಳು ಬೆಳ್ಳುಳ್ಳಿಯನ್ನು ಜಜ್ಜಿ ನೀರಿನಲ್ಲಿ ಕುದಿಸಿ, ಸಕ್ಕರೆ ಸೇರಿಸಿ ಕೊಡಿ. ಅಥವಾ ಅರ್ಧದಿಂದ ಒಂದು ಗ್ರಾಂನಷ್ಟು ಅರಸಿನವನ್ನು ಜೇನು ಸೇರಿಸಿ ದಿನಕ್ಕೆ ಎರಡು ಸಲ ಕೊಡಿ. ಅರಸಿನ ಕೊಟ್ಟರೆ ಅರಸಿನ ಕಾಮಾಲೆ ಬರುತ್ತದೆ ಎಂಬ ಮನೋಭ್ರಾಂತಿಯನ್ನು ತಲೆಯಿಂದ ಈಗಲೇ ಕಿತ್ತೊಗೆಯಿರಿ. ಅರಸಿನ ಅಧ್ಭುತ ರೋಗನಿವಾರಕ. ಶೀತ ಇದ್ದಾಗ, ಎರಡು ಗ್ರಾಂ ಕರಿಮೆಣಸು, ಒಂದು ಗ್ರಾಂ ಹಿಂಗು, ಎರಡು ಗ್ರಾಂ ಜೀರಿಗೆ, ಒಂದು ಗ್ರಾಂ ಒಣಶುಂಠಿ, ಹತ್ತು ಜಜ್ಜಿದ ತುಳಸಿ ಎಲೆಗಳನ್ನು ಸೇರಿಸಿ, ಕಾಲು ಲೀಟರ್ ನೀರಿನಲ್ಲಿ ಕುದಿಸಿ, ಕಾಲುಭಾಗಕ್ಕೆ ಬತ್ತಿಸಿ, ಸೋಸಿ, ಹತ್ತು ಮಿಲಿಲೀಟರ್‌ನಷ್ಟು ದಿನಕ್ಕೆ ಮೂರು ಸಲ ಕೊಡಿ. ಆಗಾಗ ಬರುವ ಶೀತದಲ್ಲಿ ಕಚೋರಾದಿ ಚೂರ್ಣವನ್ನು ಪೇಸ್ಟ್ ಮಾಡಿ ನೆತ್ತಿ ಮೇಲೆ ಲೇಪಿಸಿ. ಮಗು ರಾತ್ರಿ ಅಳುವುದಿದ್ದರೆ, ಜಾಯಿಕಾಯಿಯನ್ನು ಪೇಸ್ಟ್ ಮಾಡಿ ಜೇನು ಸೇರಿಸಿ, ಅರ್ಧದಿಂದ ಒಂದು ಗ್ರಾಂನಷ್ಟು ಬಾಯಿಗೆ ಕೊಡಿ. ಮಗು ಚೆನ್ನಾಗಿ ನಿದ್ರೆ ಮಾಡುವುದು. ಸಂಶೋಧನ ವರದಿಗಳ ಪ್ರಕಾರ, ಮಕ್ಕಳ ಅಸ್ತಮಾದಲ್ಲಿ ಹಿಪ್ಪಲೀ ಪರಿಣಾಮಕಾರಿ. ಶ್ವಾಸನಾಳ ಹಾಗೂ ಶ್ವಾಸಕೋಶ ಸೋಂಕಿನಲ್ಲಿ ಆಡುಸೋಗೆ, ಜ್ಯೇಷ್ಠಮಧು, ತುಳಸೀ ಜೊತೆಯಾಗಿ ಕೊಟ್ಟರೆ ಪ್ರಯೋಜನ ಸಿಗುವುದು. 


 ಆಯುರ್ವೇದ ಪದ್ಧತಿಯಲ್ಲಿ ಮಕ್ಕಳಲ್ಲಿ ಸ್ವರ್ಣಪ್ರಾಶ ಅತ್ಯಂತ ಪ್ರಯೋಜನ ನೀಡುವುದು. ಸರಿಯಾದ ರೀತಿಯಲ್ಲಿ ತಯಾರಿಸಿದ ಸ್ವರ್ಣಪ್ರಾಶನ ಮಗುವಿನ ಆರೋಗ್ಯದಲ್ಲಿ ಸುಧಾರಣೆ ತಂದು, ಕ್ರಾಂತಿಯನ್ನೇ ಉಂಟುಮಾಡಬಲ್ಲದು. ಆಯುರ್ವೇದದಲ್ಲಿ ಸ್ವರ್ಣವನ್ನು ಶೋಧಿಸಿ, ಸಂಸ್ಕರಿಸಿ ಸ್ವರ್ಣಭಸ್ಮ ಅಥವಾ ಸ್ವರ್ಣಸತ್ವ ಅಂದರೆ ಆಧುನಿಕ ಪರಿಭಾಷೆಯಲ್ಲಿ "ನ್ಯಾನೋ ಪಾರ್ಟಿಕಲ್" ರೂಪದಲ್ಲಿ ಬಳಸುತ್ತೇವೆ. ಇದನ್ನು ಪುರಾತನ ನ್ಯಾನೋವಿಜ್ಞಾನ ಎಂದೇ ಕರೆಯಬಹುದು. 


ಹುಟ್ಟಿದ ಶಿಶುವಿನಿಂದ ತೊಡಗಿ ಹದಿನಾರು ವರ್ಷದವರೆಗೆ ಸ್ವರ್ಣಪ್ರಾಶ ಕೊಡಬಹುದುದಾಗಿದೆ. ಯಾವುದೇ ಹಂತದಲ್ಲಿ ಇದನ್ನು ಮಗುವಿಗೆ ಆರಂಭಿಸಬಹುದು. ಆದರೆ ಕೇವಲ ಪುಷ್ಯನಕ್ಷತ್ರದ ಒಂದು ದಿನ ಮಗುವಿಗೆ ಇದನ್ನು ಕೊಟ್ಟ ಮಾತ್ರಕ್ಕೆ ಇದರ ಪೂರ್ಣಪ್ರಯೋಜನ ಸಿಕ್ಕಲಾರದು. ತಿಂಗಳ ಒಂದು ದಿನಕ್ಕ÷ಷ್ಟೇ ಸೀಮಿತವಾದ ಸ್ವರ್ಣಪ್ರಾಶವು, ಪಾಶ್ಚಾತ್ಯ ಲಸಿಕಾಪದ್ಧತಿಯ ಅಂಧ ಅನುಕರಣೆ ಆಗಬಹುದೇ ಹೊರತು, ಹೆತ್ತವರಲ್ಲಿ ಮಗುವಿಗಾಗಿ ಏನೋ ಘನಕರ‍್ಯ ಮಾಡಿದ್ದೇವೆಂಬ ಹುಸಿ ಸಂತೋಷವನ್ನು ಕೊಡಬಹುದೇ ಹೊರತು, ಮಗುವಿನ ಆರೋಗ್ಯದಲ್ಲಿ ಏನೋ ಪವಾಡ ಉಂಟಾಗಬಹುದೆಂಬ ನೀರೀಕ್ಷೆ ಬೇಡ. ಸ್ವರ್ಣಪ್ರಾಶ ಉಪಯೋಗ ಆಗಬೇಕಾದರೆ ದಿನನಿತ್ಯ ಕೊಡುವುದು ಮುಖ್ಯ. ನಮ್ಮ "ಪ್ರಸಾದಿನೀ ಸ್ವರ್ಣಪ್ರಾಶ"ವನ್ನು ಇದೇ ಪದ್ಧತಿಯಲ್ಲಿ ನಾವು ನೀಡುತ್ತೇವೆಯೇ ಹೊರತು, ಪುಷ್ಯನಕ್ಷತ್ರದ ಮಕ್ಕಳ ಹೆತ್ತವರನ್ನು ಸೆಳೆಯುವ ತಂತ್ರಗಾರಿಕೆಯ ಭಾಗವಾಗಿ ಅಲ್ಲ. ದಿನವೂ ನೀಡುವುದರಿಂದ, ಮಗುವಿನ ದೈಹಿಕ ಹಾಗೂ ಮಾನಸಿಕ ಬೇಳವಣಿಗೆ ಉತ್ತಮಗೊಳ್ಳುವುದು. ರೋಗನಿರೋಧಕ ಶಕ್ತಿ ಹೆಚ್ಚುವುದು. ಅಲರ್ಜಿ, ಆಗಾಗ ಬರುವ ಶೀತ, ಜ್ವರ, ಕೆಮ್ಮು, ಮರುಕಳಿಸುವ ಸೂಕ್ಷಾö್ಮಣುಸೋಂಕು ಹತೋಟಿಗೆ ಬರುವುದು. ದಿನನಿತ್ಯ ಮಗುವಿಗೆ ಖಾಲಿ ಹೊಟ್ಟೆಗೆ ಮೂರು ಬಿಂದುಗಳಷ್ಟು ಸ್ವರ್ಣಪ್ರಾಶನವು ಮಗುವಿನ ಭವಿಷ್ಯದ ದೃಷ್ಟಿಯಿಂದ ಹೆತ್ತವರು ತಳೆಯುವ ಗಟ್ಟಿ ನಿರ್ಧಾರ. ಯಾವಾಗಲಾದರೂ ಮಧ್ಯದಲ್ಲಿ ನಿಲ್ಲಿಸಿದರೆ ತೊಂದರೆ, ಅಪಾಯವೇನೂ ಇಲ್ಲ. ಆದರೆ ನಿಜವಾದ ಪ್ರಯೋಜನಕ್ಕೆ ದಿನನಿತ್ಯ ಕೊಡಲೇಬೇಕಾದದ್ದು ಈ "ಸ್ವರ್ಣಪ್ರಾಶ" ಎಂಬುದು ನೆನಪಿರಲಿ.


-ಡಾ. ರಾಘವೇಂದ್ರ ಪ್ರಾಸಾದ್ ಬಂಗಾರಡ್ಕ

ಬಿ.ಎ.ಎಂ.ಎಸ್., ಎಂ.ಎಸ್.(ಆಯು)

ಆಯುರ್ವೇದ ತಜ್ಞ ವೈದ್ಯರು ಹಾಗೂ ಆಡಳಿತ ನಿರ್ದೇಶಕರು,

ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ, ಕಾಣಿಯೂರು-ಸುಬ್ರಮಣ್ಯ ರಾಜ್ಯ ಹೆದ್ದಾರಿ,

ನರಿಮೊಗರು ಗ್ರಾಮ ಪಂಚಾಯತ್ ಸಮೀಪ, ನರಿಮೊಗರು, ಪುತ್ತೂರು.

ಮೊಬೈಲ್: 9740545979



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top