ಸುರತ್ಕಲ್: ವಿವಿಧ ವಿಷಯಗಳ ಗ್ರಹಿಕೆಯೊಂದಿಗೆ ವರ್ತಮಾನವನ್ನು ಅರ್ಥೈಸಿಕೊಂಡು ಸೃಜನಾತ್ಮಕವಾಗಿ ಕಥನಗಳನ್ನು ಕಟ್ಟಲು ಸಾಧ್ಯವಿದೆ. ಸಾಂಸ್ಕೃತಿಕ ಅಧ್ಯಯನಗಳ ಮುಖಾಮುಖಿಯಲ್ಲಿ ಬಹುತ್ವದ ಮಹತ್ವನ್ನು ನಿರೂಪಿಸುವ ಅಗತ್ಯವಿದೆ ಎಂದು ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ ಡಾ. ಜ್ಯೋತಿ ಚೇಳಾರು ನುಡಿದರು. ಅವರು ವೀರಲೋಕ ಬುಕ್ಸ್, ಬೆಂಗಳೂರು ಹಾಗೂ ಗೋವಿಂದ ದಾಸ ಕಾಲೇಜಿನ ಸಾಹಿತ್ಯ ಸಂಘದ ಆಶ್ರಯದಲ್ಲಿ ನಡೆದ ಯುವ ಬರಹಗಾರರ ಎರಡು ದಿನಗಳ ದೇಸಿ ಜಗಲಿ ಕಥಾ ಕಮ್ಮಟದ ಸಮಾರೋಪ ಭಾಷಣ ಮಾಡಿ ಮಾತನಾಡಿದರು. ದೇಸಿ ಕಮ್ಮಟದ ಸಂಚಾಲಕಿ ಡಾ. ನಿಕೇತನ ಮಾತನಾಡಿ ಯುವ ಕಥೆಗಾರರನ್ನು ಬೆಳೆಸುವ ದೃಷ್ಟಿಯಿಂದ ವೀರಲೋಕ ಬುಕ್ಸ್ ಪ್ರತಿ ಜಿಲ್ಲೆಯಲ್ಲಿ ಕಥಾ ಕಮ್ಮಟಗಳನ್ನು ನಡೆಸುತ್ತಿದ್ದು ನೂತನ ಕಥೆಗಾರರು ರೂಪುಗೊಳ್ಳುವ ಆಶಯ ವ್ಯಕ್ತ ಪಡಿಸಿದರು. ಸಂಪನ್ಮೂಲ ವ್ಯಕ್ತಿ ಡಾ. ಗಣನಾಥ ಎಕ್ಕಾರು ಕಥೆಯ ವಸ್ತು – ವಿನ್ಯಾಸಗಳನ್ನು ನಿರೂಪಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ.ಪಿ. ಕೃಷ್ಣಮೂರ್ತಿ ಕಥೆಗಾರರು ಚಿಂತನೆ ಅಲೋಚನೆಗಳಲ್ಲಿ ದೃಢತೆಯನ್ನು ತಾಳುತ್ತಾ ಹೊಸ ಆಯಾಮದ ಕಥೆಗಳನ್ನು ಸೃಷ್ಟಿಸಬೇಕಾಗಿದ್ದು ಕಥಾ ಕಮ್ಮಟ ಪೂರಕ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಗೋವಿಂದ ದಾಸ ಕಾಲೇಜಿನ ಆಂಗ್ಲಭಾಷಾ ಪ್ರಾಧ್ಯಾಪಕ ಕುಮಾರ್ ಮಾದರ, ವಿನೋದ್ ಶೆಟ್ಟಿ ಮತ್ತು ರಾಮಾಂಜಿ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ಶಿಬಿರಾರ್ಥಿಗಳು ತಮ್ಮ ಸ್ವರಚಿತ ಕಥೆಗಳನ್ನು ಮಂಡಿಸಿದರು.
ಉಪನ್ಯಾಸಕಿ ಅಕ್ಷತಾ ಸ್ವಾಗತಿಸಿದರು. ಡಾ. ಸಂತೋಷ್ ಆಳ್ವ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ