ಆಳ್ವಾಸ್ ಕಾಲೇಜಿನಲ್ಲಿ ನಡೆದ ‘ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ’

Upayuktha
0

ಪಂಜ, ಮುಲ್ಲಕಾಡು ಶಾಲೆಗಳಿಗೆ ಪ್ರಶಸ್ತಿ 



ವಿದ್ಯಾಗಿರಿ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಮಂಗಳವಾರ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಯಕ್ಷಗಾನ ಕಲೆಯಾಧಾರಿತ ರಾಜ್ಯಮಟ್ಟದ ಸ್ಪರ್ಧೆ ‘ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ’ದ ಯಕ್ಷರೂಪಕ ಸ್ಪರ್ಧೆಗಳಲ್ಲಿ ಮುಲ್ಲಕಾಡು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ (ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವೇದಿಕೆ) ತಂಡ ಹಾಗೂ ಪಂಜದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ (ಪ್ರೊ.ಎಂ.ಎ.ಹೆಗಡೆ ವೇದಿಕೆ)  ತಂಡಗಳು ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡವು. 


ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವೇದಿಕೆಯಲ್ಲಿ ನಡೆದ ಯಕ್ಷರೂಪಕ ಸ್ಪರ್ಧೆಯಲ್ಲಿ ಮುಲ್ಲಕಾಡು ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಯ ರಾಕೇಶ್ ರೈ ಅಡ್ಕ ನೇತೃತ್ವದ ತಂಡವು  ದಶಾವತಾರ ಆಖ್ಯಾನಕ್ಕೆ ಪ್ರಥಮ ತಂಡ ಪ್ರಶಸ್ತಿ ಪಡೆಯಿತು.  


ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ(ಗುರುಪುರ)ಯ ದೀವಿತ್ ಎಸ್. ಕೆ. ಪೆರಾಡಿ ನೇತೃತ್ವದ ತಂಡವು ಶ್ರೀ ರಾಮಾಯಣ ದರ್ಶನಂ ಆಖ್ಯಾನಕ್ಕೆ ದ್ವಿತೀಯ ಹಾಗೂ  ರಾಮಕೃಷ್ಣ ಅನುದಾನಿತ ಪ್ರೌಢಶಾಲೆ (ಹರೇಕಳ)ಯ ಅಶ್ವತ್ ಮಂಜನಾಡಿ ನೇತೃತ್ವದ ತಂಡವು ಕ್ಷೀರಾಬ್ಧಿ ಮಥನ ಆಖ್ಯಾನಕ್ಕೆ ತೃತೀಯ ತಂಡ ಪ್ರಶಸ್ತಿ ಪಡೆಯಿತು.


ಪ್ರೊ.ಎಂ.ಎ.ಹೆಗಡೆ ವೇದಿಕೆಯಲ್ಲಿ ನಡೆದ ಯಕ್ಷರೂಪಕ ಸ್ಪರ್ಧೆಯಲ್ಲಿ ಪಂಜದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಗಿರೀಶ್ ಗಡಿಕಲ್ಲು ನೇತೃತ್ವದ ತಂಡವು ವಿಶ್ವರೂಪ ಆಖ್ಯಾನಕ್ಕೆ ಪ್ರಥಮ ಪ್ರಶಸ್ತಿ ಪಡೆಯಿತು.  


ಸರಕಾರಿ ಪ್ರೌಢಶಾಲೆ ಮಂಚಿ (ಕೊಲ್ನಾಡು)ಯ ಅಶ್ವತ್ ಮಂಜನಾಡಿ ಅವರ ನೇತೃತ್ವದ ತಂಡವು ಲಕ್ಷ್ಮಿ ಸ್ವಯಂವರ ಆಖ್ಯಾನಕ್ಕೆ ದ್ವಿತೀಯ ತಂಡ ಪ್ರಶಸ್ತಿ ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ವಸತಿ ಶಾಲೆ(ಗುರುಪುರ)ಯ ದೀವಿತ್ ಎಸ್. ಕೆ ಪೆರಾಡಿ ನೇತೃತ್ವದ ತಂಡವು ಶ್ರೀ ಕೃಷ್ಣ ಲೀಲಾಮೃತಂ ಆಖ್ಯಾನಕ್ಕೆ ತೃತೀಯ ತಂಡ ಪ್ರಶಸ್ತಿ ಪಡೆಯಿತು. 


ವಿಜೇತ ತಂಡಗಳಿಗೆ ಪ್ರಥಮ (30 ಸಾವಿರ ರೂ.), ದ್ವಿತೀಯ (20 ಸಾವಿರ ರೂ.) ಹಾಗೂ ತೃತೀಯ(15 ಸಾವಿರ ರೂ.) ನಗದು ಬಹುಮಾನ ಪಡೆಯಿತು. 

ಎರಡೂ ವೇದಿಕೆ ಸೇರಿದಂತೆ ಒಟ್ಟಾರೆ ಶಿಸ್ತಿನ ತಂಡ ಪ್ರಶಸ್ತಿಯನ್ನು ಮೊರಾರ್ಜಿ  ದೇಸಾಯಿ ವಸತಿ ಶಾಲೆ ಕಮ್ಮಾಜೆಯ ರಕ್ಷಿತ್ ಶೆಟ್ಟಿ ಪಡ್ರೆ ತಂಡ ಪಡೆಯಿತು. 10 ಸಾವಿರ ರೂಪಾಯಿ ನಗದು ಪ್ರಶಸ್ತಿಗೆ ಪಾತ್ರವಾಯಿತು.


ಉಳಿದಂತೆ ಯಕ್ಷ ರಂಗು ಮುಖ ವರ್ಣಿಕೆ ಸ್ಪರ್ಧೆಯಲ್ಲಿ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರದ  ವಿದ್ಯಾರ್ಥಿನಿ ಮಾನ್ಯ ಜೆ ಭಂಡಾರಿ ಪ್ರಥಮ, ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿಯ ವಿದ್ಯಾರ್ಥಿನಿ ಶ್ರಾವ್ಯ ಯು ದ್ವಿತಿಯ, ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಮ್ಮಾಜೆ (ಕಿನ್ನಿಗೋಳಿ)ಯ ಸಾತ್ವಿಕ್ ತೃತೀಯ ಸ್ಥಾನ ಪಡೆದರು.


ಶ್ಲೋಕ ಕಂಠಪಾಠ ಸ್ಪರ್ದೆಯಲ್ಲಿ ವಿಶ್ವ ಮಂಗಳ ಪ್ರೌಡಶಾಲೆ ಕೊಣಾಜೆಯ ವಿದ್ಯಾರ್ಥಿ ಅಭಿನವ ಭಟ್ಟ ಎನ್. ಪ್ರಥಮ, ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್, ದೇವಿ ನಗರ (ತಲಪಾಡಿ)ದ ವಿದ್ಯಾರ್ಥಿ ಪ್ರಯಾಗ ಜಿ. ಕೊಟ್ಟಾರಿ ದ್ವಿತೀಯ, ಹಾಗೂ ಶ್ರೀ ದುರ್ಗಾಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲೆ, ಧರ್ಮತಡ್ಕ(ಕಾಸರಗೋಡು)ದ ವಿದ್ಯಾರ್ಥಿ ಸ್ಕಂದಪ್ರಸಾದ ಎ. ತೃತೀಯ ಸ್ಥಾನ ಪಡೆದರು.


ಯಕ್ಷಲೇಖನ ಸ್ಪರ್ಧೆಯಲ್ಲಿ ಶ್ರೀ ಮುಜಿಲ್ನಾಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕಾರ್ಕಳದ ವಿದ್ಯಾರ್ಥಿನಿ ಸೌಜನ್ಯ ಪ್ರಥಮ, ಜೈನ ಪ್ರೌಢಶಾಲೆ ಮೂಡುಬಿದಿರೆಯ ವಿದ್ಯಾರ್ಥಿನಿ ಅಸ್ಮಿ ದ್ವಿತೀಯ, ಡಾ, ರಾಮಣ್ಣ ಶೆಟ್ಟಿ ಮೆಮೋರಿಯಲ್ ಸ್ಕೂಲ್ ತೋಕೂರು, (ಹಳೆಯಂಗಡಿ)ನ ವಿದ್ಯಾರ್ಥಿನಿ ಸಾದ್ವಿ ತೃತೀಯ ಸ್ಥಾನ ಪಡೆದರು.

ಯಕ್ಷ ಸ್ವಗತ ಮಾತುಗಾರಿಕೆ ಸ್ಪರ್ಧೆಯಲ್ಲಿ ಮಾರುತಿ ವಿದ್ಯಾಕೇಂದ್ರ ತುಮಕೂರುವಿನ ವಿದ್ಯಾರ್ಥಿ ಸಂದೃತ್ ಶರ್ಮಾ ಪ್ರಥಮ, ಶ್ರೀ ರಾಮಕೃಷ್ಣ ಪ್ರೌಢಶಾಲೆ ಹರೇಕಳದ ವಿದ್ಯಾರ್ಥಿನಿ ಲಾವಣ್ಯ ದ್ವಿತೀಯ, ಶಾರದಾ ಶುಭೋದಯ ವಿದ್ಯಾಲಯ ಮೂಡುಶೆಡ್ಡೆಯ ವಿದ್ಯಾರ್ಥಿ ಚಿನ್ಮಯ ಕೃಷ್ಣ ಉಳಿತ್ತಾಯ ತೃತೀಯ ಸ್ಥಾನ ಪಡೆದರು.


ಯಕ್ಷಜ್ಞಾನ ಪರೀಕ್ಷಾ ಪಂಥ ಸ್ಪರ್ಧೆಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಚ್ಚಿನದ ವಿದ್ಯಾರ್ಥಿನಿ ಸಾತ್ವಿ ಪ್ರಥಮ, ಜಿ. ಎಚ್. ಎಸ್. ವಳಕಾಡು(ಉಡುಪಿ)ನ ಮೇದಾ ದ್ವಿತೀಯ, ಶಾರದಾ ಗಣಪತಿ ವಿದ್ಯಾಕೇಂದ್ರ ಪುಣ್ಯಕೋಟಿ ನಗರದ ವಿದ್ಯಾರ್ಥಿ ಸುಧನ್ವ, ಕೆ. ತೃತೀಯ ಸ್ಥಾನ ಪಡೆದರು.

ಯಕ್ಷ ರಸಪ್ರಶ್ನೆ ಸ್ಪರ್ಧೆಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಚ್ಚಿನ (ಬೆಳ್ತಂಗಡಿ)ದ ವಿದ್ಯಾರ್ಥಿನಿಯರು ಹಸ್ತ ಪಿ.ಸಿ. ಕುಶಿ ಪ್ರಥಮ, ಎಸ್.ಎನ್.ವಿ. ಪ್ರೌಢಶಾಲೆ ಹಿರಿಯಂಗಡಿ, ಹರೇಕಳದ ವಿದ್ಯಾರ್ಥಿನಿಯರು ಆಶ್ರಿತಾ ಮತ್ತು ಸಾನ್ವಿಕಾ ದೇವಾಡಿಗ ದ್ವಿತೀಯ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಚ್ಚಿನ (ಬೆಳ್ತಂಗಡಿ)ದ ಪ್ರಣಿತ್ ಜೆ ಮತ್ತು ಕೌಶಿಕ್ ಶೆಟ್ಟಿ  ತೃತೀಯ ಸ್ಥಾನ ಪಡೆದರು.


ಸಮಾರೋಪ: ವಿಜೇತ ತಂಡ ಹಾಗೂ ವಿದ್ಯಾರ್ಥಿಗಳಿಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಶಾಸಕ ಉಮಾನಾಥ ಕೋಟ್ಯಾನ್, ‘ಯಕ್ಷಗಾನ  ಜ್ಞಾನವನ್ನು ನೀಡುತ್ತದೆ’. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಆಸಕ್ತ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುವ ಮೂಲಕ ಕಲೆಯ ಉಳಿವಿಗೆ ಶ್ರಮಿಸುತ್ತಿದೆ ಎಂದರು. 


ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನದಲ್ಲಿ ಉತ್ತಮ ಮನೋಸ್ಥೈರ್ಯ, ಆತ್ಮಬಲ, ರೂಢಿಸಿಕೊಳ್ಳಲು ಸಹಕಾರಿಯಾಗಿರುವ ಯಕ್ಷಗಾನ ಭೂತ ಭವಿಷ್ಯ ವರ್ತಮಾನಗಳಿಗೂ ಉತ್ತಮ ಜ್ಞಾನದಾಯಕವಾಗಲಿದೆ ಎಂದರು. 


ಮಾಜಿ ಸಚಿವ ಕೆ. ಅಭಯ ಚಂದ್ರ ಜೈನ್ ಮಾತನಾಡಿ, ಯಕ್ಷಗಾನ ಆಸಕ್ತ ವಿದ್ಯಾರ್ಥಿಗಳಿಗೆ ಮತ್ತು ಅಭಿಮಾನಿಗಳಿಗೆ ಇಂತಹ ಕಾರ್ಯಕ್ರಮಗಳು ಶಕ್ತಿ ತುಂಬುವ ಕಾರ್ಯ ಮಾಡುತ್ತವೆ. ಯಕ್ಷಗಾನ ಕಲಾವಿದರಿಗೆ ಇಂತಹ ಪ್ರಯೋಗಗಳು ಕಲಾಸಕ್ತಿಯ ಏಳಿಗೆಗೆ ಸಹಕಾರಿ ಎಂದರು.


ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಪಟ್ಲಗುತ್ತು ಸತೀಶ್ ಶೆಟ್ಟಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ, ಭಂಡಾರಿ, ಕೋಶಾಧಿಕಾರಿ ಸಿ. ಎ. ಸುದೇಶ್ ಕುಮಾರ್ ರೈ, ಪ್ರಧಾನ ಸಂಚಾಲಕ, ಪಣಂಬೂರು ವಾಸುದೇವ ಐತಾಳ್, ಯಕ್ಷಗಾನದ ವಿದ್ವಾಂಸ   ಡಾ.  ಎಂ. ಪ್ರಭಾಕರ ಜೋಷಿ,  ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಪ್ರದೀಪ ಆಳ್ವ ಕದ್ರಿ, ಮಹಿಳಾ ಘಟಕದ ಅಧ್ಯಕ್ಷೆ ಆರತಿ ಆಳ್ವ ಇದ್ದರು. 



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top