ವಿವಿಧ ವಿಭಾಗಗಳಲ್ಲಿ ಒಟ್ಟಾರೆ ಒಟ್ಟು 110 ರ‍್ಯಾಂಕ್
ಮಂಗಳೂರು: ಸೆಪ್ಟೆಂಬರ್ 2018ರಿಂದ ಜೂನ್ 2022ರ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು, ಕರ್ನಾಟಕ ನಡೆಸಿರುವ ಹೋಮಿಯೋಪಥಿ ವೈದ್ಯಕೀಯ ವಿಭಾಗದ ಪರೀಕ್ಷೆಗಳಲ್ಲಿ ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ಮೆಡಿಕಲ್ ಕಾಲೇಜಿನ ಪದವಿಪೂರ್ವ ವಿದ್ಯಾರ್ಥಿಗಳು (ಬಿ.ಎಚ್.ಎಮ್.ಎಸ್ 2017-18) 10 ರ‍್ಯಾಂಕ್ ಗಳಲ್ಲಿ 7 ರ‍್ಯಾಂಕ್ ಗಳಿಸುವ ಮೂಲಕ ಸ್ಥಿರ ಮತ್ತು ದಕ್ಷ ಪರಿಶ್ರಮವನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ಕೋರ್ಸ್‍ವಾರು 21 ಹಾಗೂ ವಿಷಯವಾರು 82 ರ್ಯಾಂಕ್‍ಗಳನ್ನು ಪಡೆದು ಒಟ್ಟು 110 ರ್ಯಾಂಕ್‍ಗಳನ್ನು ಗಳಿಸಿಕೊಂಡಿದೆ.
ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ನಿರ್ದೇಶಕರಾದ ಅತೀ ವಂದನೀಯ ಫಾ. ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು ಹಾಗೂ ಪ್ರಾಂಶುಪಾಲರು ಮತ್ತು ಅಧ್ಯಾಪಕರ ಮಾರ್ಗದರ್ಶನವನ್ನು ಶ್ಲಾಘಿಸಿದರು.
ರ‍್ಯಾಂಕ್ ಗಳಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತ ಮಂಡಳಿ, ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ