ಕಟ್ಟಿಮನಿಯವರ ಸಾಹಿತ್ಯದಲ್ಲಿ 'ನೈತಿಕತೆ'ಯ ಮೌಲ್ಯವು ಪ್ರತಿಫಲಿತವಾಗಿದೆ: ಡಾ. ನಟರಾಜ್ ಹುಳಿಯಾರ್

Upayuktha
0

ಶಿವಮೊಗ್ಗ: ಬೆಳಗಾವಿಯ ಬಸವರಾಜ ಕಟ್ಟಿಮನಿ ಪ್ರತಿಷ್ಠಾನ, ಶಿವಮೊಗ್ಗದ ಮಾನಸ ಟ್ರಸ್ಟ್ ನ ಮಾನಸ ಸಾಂಸ್ಕೃತಿಕ ಅಧ್ಯಯನಗಳ ಕೇಂದ್ರ ಹಾಗೂ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಸಾಹಿತ್ಯ ಸಹೃದಯ ವೇದಿಕೆಯ ವತಿಯಿಂದ 'ಬಸವರಾಜ ಕಟ್ಟಿಮನಿಯವರ ಸಾಹಿತ್ಯದ ಸಮಕಾಲೀನ ಪ್ರಸ್ತುತತೆ' ಎಂಬ ವಿಷಯದ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣವು ಕಾಲೇಜಿನ ಬಹುಮುಖಿ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮ ಉದ್ಘಾಟಿಸಿದ ಪ್ರಸಿದ್ಧ ಸಂಸ್ಕೃತಿ ಚಿಂತಕರಾದ ಡಾ.ನಟರಾಜ್ ಹುಳಿಯಾರ್ ರವರು,  ಕಟ್ಟಿಮನಿಯವರ ಸಾಹಿತ್ಯದಿಂದಲೇ ನಾನೂ ಲೇಖಕನೊಬ್ಬನು ಚಳುವಳಿಗಳಲ್ಲಿ ಭಾಗವಹಿಸಬೇಕೆಂಬ ಸಂದೇಶವನ್ನು ಪಡೆದೆ ಎಂದರು.


ಕಟ್ಟಿಮನಿಯವರು ಒಬ್ಬ ಕಾದಂಬರಿಕಾರರು ಹೌದು ಪತ್ರಿಕೋದ್ಯಮಿಯು ಹೌದು, ಪತ್ರಿಕೋದ್ಯಮಿಯೂ ಹೌದು, ಆದ್ದರಿಂದ ಅವರು ತಮ್ಮ ಕಾದಂಬರಿಗಳು ಹಾಗೂ ಲೇಖನಗಳಲ್ಲಿ ಸಮಾಜದ ಅಸಮಾನತೆ, ಅಂಕು - ಡೊಂಕು, ಅನ್ಯಾಯಗಳ ಪರಿಣಾಮಗಳನ್ನು ಹೊರಚೆಲ್ಲಿದರು. ಕಟ್ಟಿಮನಿಯವರು ಸಮಕಾಲೀನ ಚರಿತ್ರೆಯನ್ನು ಕಾದಂಬರಿಗಳ ಮೂಲಕ ದಾಖಲೆಸಿದರು. ಒಬ್ಬ ಕಾದಂಬರಿಕಾರನಿಗೆ ಪತ್ರಿಕೋದ್ಯಮಿಯಂತೆ ಬರೆಯುವ ತುಡಿತವಿರಬೇಕು, ಪತ್ರಿಕೋದ್ಯಮಿಗೆ ಕಾದಂಬರಿಕಾರರ ತಾಳ್ಮೆಯಿರಬೇಕು. ಕಟ್ಟಿಮನಿಯವರು ಇವೆರಡನ್ನೂ ಒಳಗೊಂಡಂತೆ ಒಬ್ಬ ರಾಜಕೀಯ ಮುತ್ಸದ್ದಿಯಾಗಿದ್ದರು. ಆದ್ದರಿಂದ ಅವರ ಕೃತಿಗಳಲ್ಲಿ 'ನೈತಿಕತೆ'ಯ ಮೌಲ್ಯಗಳು ಪ್ರತಿಫಲಿತವಾಗಿದೆ ಎಂದರು. ಕಾರ್ಯಕ್ರಮದ ಪ್ರಸ್ತಾವಿಕ ನುಡಿಗಳನ್ನಾಡಿದ ಪ್ರತಿಷ್ಠಾನದ ಡಾ.ಬಸವರಾಜ ಸಾದರರವರು ಪ್ರತಿಷ್ಠಾನದ ಕಾರ್ಯಕ್ರಮ ಹಾಗೂ ಜವಾಬ್ದಾರಿಗಳನ್ನು ವಿವರಿಸಿದರು.


ಕಾರ್ಯಕ್ರಮದಲ್ಲಿ ಡಾ.ರಾಜೇಂದ್ರ ಚೆನ್ನಿ, ಡಾ.ಸಂಧ್ಯಾಕಾವೇರಿ, ಕನ್ನಡ ಉಪನ್ಯಾಸಕರಾದ ಶ್ರೀ ಮೋಹನ್ ಕುಮಾರ್ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ.ಮಲ್ಲಿಕಾರ್ಜುನ ಹಿರೇಮಠ್ ವಹಿಸಿದ್ದರು. ಡಾ.ಮಲ್ಲಿಕಾರ್ಜುನ ಮೇಠಿ, ಡಾ.ಸುಭಾಷ್ ರಾಜಮನೆ, ಡಾ.ಭಾರತಿ ಡಾ. ಸಬಿತಾ ಬನ್ನಾಡಿ, ಡಾ. ಅರುಣ್ ಜೋಳದ ಕೂಡ್ಲಿಗಿರವರು ಕಟ್ಟಿಮನಿಯವರ ಸಾಹಿತ್ಯದ ವಿವಿಧ ವಿಷಯಗಳ ಪ್ರಸ್ತುತತೆಯನ್ನು ವಿವಿಧ ಗೋಷ್ಠಿಗಳಲ್ಲಿ ಪ್ರಸ್ತುತಪಡಿಸಿದರು. ಈ ಕಾರ್ಯಕ್ರಮದ ಸಮಾರೋಪ ನುಡಿಗಳನ್ನು ಡಾ.ರಾಜೇಂದ್ರ ಚೆನ್ನಿ ನಡೆಸಿಕೊಟ್ಟರು. ಡಾ.ಬಾಳಾಸಾಹೇಬ ಲೋಕಾಪುರ, ಮಾನಸ ಸಂಸ್ಥೆಯ ನಿರ್ದೇಶಕರಾದ ಡಾ.ರಜನಿ ಪೈ ರವರು ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಡಾ.ಕೆ.ಆರ್.ದುರ್ಗಾದಾಸ್ ರವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ವಿದ್ಯಾರ್ಥಿಗಳು ನಡೆಸಿಕೊಟ್ಟರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   .


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top