ಫೆ.10-16: ಗೋವಿಂದ ದಾಸ ಕಾಲೇಜಿನಲ್ಲಿ ಎನ್‌.ಎಸ್‌.ಎಸ್‌. ವಾರ್ಷಿಕ ವಿಶೇಷ ಶಿಬಿರ

Upayuktha
0




ಸುರತ್ಕಲ್: ಗೋವಿಂದ ದಾಸ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವಾರ್ಷಿಕ ವಿಶೇಷ ಶಿಬಿರವು ಫೆಬ್ರವರಿ 10 ರಿಂದ 16ರ ವರೆಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ಸಸಿಹಿತ್ಲು ಇಲ್ಲಿ ನಡೆಯಲಿದೆ. ಮುಲ್ಕಿ-ಮೂಡಬಿದ್ರೆ ವಿಧಾನಸಭೆಯ ಶಾಸಕರಾದ ಉಮನಾಥ ಕೋಟ್ಯಾನ್ ಶಿಬರವನ್ನು ಉದ್ಘಾಟಿಸಲಿದ್ದು ಕಾಲೇಜಿನ ಪ್ರಾಚಾರ್ಯ ಪ್ರೊ. ಪಿ. ಕೃಷ್ಣಮೂರ್ತಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. 


ಮುಖ್ಯ ಅತಿಥಿಗಳಾಗಿ ಹಿಂದೂ ವಿದ್ಯಾದಾಯಿನೀ ಸಂಘ (ರಿ)ದ ಅಧ್ಯಕ್ಷ ಜಯಚಂದ್ರ ಹತ್ವಾರ್, ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ರಮೇಶ್ ಕುಳಾಯಿ, ಉಪಪ್ರಾಚಾರ್ಯ ಪ್ರೊ. ರಮೇಶ್ ಭಟ್ ಎಸ್.ಜಿ., ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕರಾದ ಪ್ರೊ. ಹರೀಶ್ ಆಚಾರ್ಯ ಮತ್ತು ಪ್ರೊ. ನೀಲಪ್ಪ ವಿ., ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ, ಸದಸ್ಯೆ ಸವಿತಾ ಉದಯ ಸಾಲ್ಯಾನ್, ಶ್ರೀ ಭಗವತಿ ದೇವಸ್ಥಾನ ಸಸಿಹಿತ್ಲುವಿನ ಅಧ್ಯಕ್ಷ ವಾಮನ ಇಡ್ಯಾ, ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯ ಮುಖ್ಯೋಪಾಧ್ಯಾಯಿನಿ ಕ್ಲೊಟಿಲ್ಡಾ ಲೋಬೋ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಾಧವ ಶೆಟ್ಟಿಗಾರ್, ಸಸಿಹಿತ್ಲು ಯುವಕ ಮಂಡಲದ ಅಧ್ಯಕ್ಷ ದಿಲೀಪ್ ಕರ್ಕೇರ, ಬಿಲ್ಲವ ಸಮಾಜಸೇವಾ ಸಂಘ, ಹಳೆಯಂಗಡಿಯ ಅಧ್ಯಕ್ಷ ಚಂದ್ರಶೇಖರ್ ನಾನಿಲ್, ಅಗರಿ ಎಂಟರ್‌ಪ್ರೆöÊಸಸ್, ಸುರತ್ಕಲ್ ನ ಮಾಲಕ ಅಗರಿ ರಾಘವೇಂದ್ರ ರಾವ್, ಲಯನ್ಸ್ ಕ್ಲಬ್ ಹಳೆಯಂಗಡಿಯ ಅಧ್ಯಕ್ಷ ಲ. ದಾಮೋದರ ಎಂ. ಸಾಲ್ಯಾನ್, ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಸುರತ್ಕಲ್ ಘಟಕದ ಅಧ್ಯಕ್ಷ ಸುಧಾಕರ ಪೂಂಜಾ ಭಾಗವಹಿಸಲಿದ್ದಾರೆ.



ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವಜನತೆ ಎಂಬ ಧ್ಯೇಯದೊಂದಿಗೆ,  ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಮತ್ತು ಶ್ರಮದಾನ ಚಟುವಟಿಕೆಗಳೊಂದಿಗೆ ಶಿಬಿರವು ನಡೆಯಲಿದೆ. ಹಿರಿಯ ತರಬೇತುದಾರರು, ಸಮಾಜಸೇವಕರು, ರಂಗನಟರು ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳಲ್ಲಿದ್ದಾರೆ ಎಂದು ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮಾಧಿಕಾರಿಗಳಾದ ಅಕ್ಷತಾ ಶೆಟ್ಟಿ ಮತ್ತು ಡಾ.ಭಾಗ್ಯಲಕ್ಷ್ಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top