ಬೆಂಗಳೂರು : ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್ ವತಿಯಿಂದ 59ನೇ ನಾದಜ್ಯೋತಿ ಸಂಗೀತ ಸಂಭ್ರಮ ಹಾಗೂ ಶ್ರೀ ಪುರಂದರದಾಸರ ಮತ್ತು ತ್ರಿಮೂರ್ತಿಗಳ ಉತ್ಸವ ಸಮಾರಂಭವನ್ನು ಫೆಬ್ರವರಿ 14 ರಿಂದ 18ರ ವರೆಗೆ ಮಲ್ಲೇಶ್ವರಂ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ (ಅಂಚೆ ಕಚೇರಿ ಹತ್ತಿರ) ಶ್ರೀ ರಾಮ ಮಂದಿರದಲ್ಲಿ ಆಯೋಜಿಸಲಾಗಿದೆ.
ಫೆಬ್ರವರಿ 14 ರಂದು ಬುಧವಾರ ಸಂಜೆ 6.00 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ನಂತರ ಡಾ|| ರಂಜನಿ ವಾಸುಕಿ (ಗಾಯನ), ವಿ|| ವಿಶ್ವಜಿತ್ ಮತ್ತೂರ್ (ಪಿಟೀಲು), ವಿ|| ಕೆ.ಕೆ. ಹರಿನಾರಾಯಣ್ (ಮೃದಂಗ), ವಿ|| ಎನ್.ಎಸ್. ಕೃಷ್ಣಪ್ರಸಾದ್ (ಘಟಂ).
ಫೆಬ್ರವರಿ 15 ರಂದು ಗುರುವಾರ ಸಂಜೆ 6.00 ಗಂಟೆಗೆ ವಿ|| ಟಿ.ವಿ. ರಾಮಪ್ರಸಾದ್ (ಗಾಯನ), ವಿ|| ಚಾರುಲತಾ ರಾಮಾನುಜಂ (ಪಿಟೀಲು), ವಿ|| ಅರವಿಂದ್ ರಂಗನಾಥನ್ (ಮೃದಂಗ), ವಿ|| ಎ.ಎಸ್.ಎನ್. ಸ್ವಾಮಿ (ಖಂಜರ).
ಫೆಬ್ರವರಿ 16 ರಂದು ಶುಕ್ರವಾರ ಸಂಜೆ 6.00 ಗಂಟೆಗೆ ವಿ|| ಶಿವಶ್ರೀ ಸ್ಕಂದಪ್ರಸಾದ್- ಚೆನ್ನೆöÊ (ಗಾಯನ), ವಿ|| ಕಲ್ಪನ ಕಿಶೋರ್ (ಪಿಟೀಲು), ವಿ|| ತಿರುಕುಡಂದೈ ಡಿ. ಸುರೇಶ್ (ಮೃದಂಗ), ವಿ|| ಎಸ್.ವಿ. ಬಾಲಕೃಷ್ಣ (ಮೋರ್ಚಿಂಗ್).
ಫೆಬ್ರವರಿ 17 ರಂದು ಶನಿವಾರ ಬೆಳಗ್ಗೆ 9 ಗಂಟೆಗೆ "ಊಂಛವೃತ್ತಿ", 11ಕ್ಕೆ ಶ್ರೀ ತ್ಯಾಗರಾಜರ ಪಂಚರತ್ನ ಕೀರ್ತನೆಗಳ "ಗೋಷ್ಠಿ ಗಾಯನ" , ಸಂಜೆ 4-15ಕ್ಕೆ ವಿ|| ಹೆಚ್.ಎನ್. ಭಾಸ್ಕರ್ ಮತ್ತು ವಿ|| ಪೃಥ್ವಿ ಭಾಸ್ಕರ್ ಇವರಿಂದ "ದ್ವಂದ್ವ ಪಿಟೀಲು ವಾದನ" ವಿ|| ಅರ್ಜುನ್ ಕುಮಾರ್ (ಮೃದಂಗ), ವಿ|| ಓಂಕಾರ್ ರಾವ್ (ಘಟಕ). ಪ್ರಶಸ್ತಿ ಪ್ರದಾನ ಸಮಾರಂಭ ಸಂಜೆ 6-15ಕ್ಕೆ ಡಾ|| ಅನಸೂಯಾ ಕುಲಕರ್ಣಿ (ಗಾಯನ) ಇವರಿಗೆ "ಜೀವಮಾನ ಸಾಧನ ಪುರಸ್ಕಾರ-2024", ವಿ|| ಹೆಚ್.ಕೆ. ನರಸಿಂಹಮೂರ್ತಿ (ಪಿಟೀಲು) ಇವರಿಗೆ "ಕಲಾಜ್ಯೋತಿ ಪ್ರಶಸ್ತಿ-2024" ಹಾಗೂ ಡಾ|| ರಂಜನಿ ವಾಸುಕಿ (ಗಾಯನ) ಇವರಿಗೆ "ನಾದಜ್ಯೋತಿ ಪುರಸ್ಕಾರ-2024"ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು.
ಫೆಬ್ರವರಿ 18 ರಂದು ಭಾನುವಾರ ಸಂಜೆ 6-00ಕ್ಕೆ "ವಜ್ರ ಮಹೋತ್ಸವ ಸಂಭ್ರಮದ ಉದ್ಘಾಟನೆ" 'ಕಲಾಜ್ಯೋತಿ' ಡಾ|| ಆರ್.ಕೆ. ಪದ್ಮನಾಭ ಇವರಿಂದ ಸಂಗೀತ ಕಾರ್ಯಕ್ರಮ : ಡಾ|| ನಿಶಾಂತ್ ಚಂದ್ರನ್ (ಪಿಟೀಲು), ವಿ|| ಸಿ. ಚೆಲುವರಾಜು (ಮೃದಂಗ), ವಿ|| ಲತಾ ರಾಮಾಚಾರ್ (ಖಂಜಿರ). ನಂತರ ಸಮಾರೋಪ ಸಮಾರಂಭ.
ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಸಂಗೀತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಟ್ರಸ್ಟಿನ ಪದಾಧಿಕಾರಿಗಳು ವಿನಂತಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ







