ಅಜೀಂ ಪ್ರೇಮ್‍ಜಿ ವಿವಿ ಪದವಿ ಪ್ರವೇಶಕ್ಕೆ ಅರ್ಜಿ

Upayuktha
0


ಮಂಗಳೂರು: ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯವು ನಾಲ್ಕು ವರ್ಷಗಳ ಪೂರ್ಣಕಾಲಿಕ ಬಿ.ಎ ಆನರ್ಸ್, ಬಿ.ಎಸ್ಸಿ ಆನರ್ಸ್ ಮತ್ತು ದ್ವಿ-ಪದವಿ ಬಿ.ಎಸ್ಸಿ-ಬಿ.ಇಡಿ ವಿಷಯಗಳ ಪದವಿ ಕಾರ್ಯಕ್ರಮಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸುತ್ತಿದೆ.


ವಿವಿಯ ಬೆಂಗಳೂರು ಮತ್ತು ಭೋಪಾಲ್ ಕ್ಯಾಂಪಸ್‍ಗಳಲ್ಲಿ ಕಲಿಕೆಗೆ ಅವಕಾಶವಿದೆ. ಭೋಪಾಲ್ ಕ್ಯಾಂಪಸ್‍ನಲ್ಲಿ ಜೀವ ವಿಜ್ಞಾನದಲ್ಲಿ ಬಿಎಸ್ಸಿ ಆನರ್ಸ್, ಅರ್ಥಶಾಸ್ತ್ರ, ಇಂಗ್ಲಿಷ್, ಇತಿಹಾಸ ಮತ್ತು ಸಮಾಜ ವಿಜ್ಞಾನ ವಿಯದಲ್ಲಿ ಬಿಎ ಆನರ್ಸ್ ಪದವಿಗೆ ಅವಕಾಶವಿದೆ. ಬೆಂಗಳೂರು ಕ್ಯಾಂಪಸ್‍ನಲ್ಲಿ ಅರ್ಥಶಾಸ್ತ್ರ, ಇಂಗ್ಲಿಷ್, ಇತಿಹಾಸ, ತತ್ವಶಾಸ್ತ್ರ, ಸಮಾಜ ವಿಜ್ಞಾನ, ತತ್ವಶಾಸ್ತ್ರ, ರಾಜಕೀಯ ಮತ್ತು ಅರ್ಥಶಾಸ್ತ್ರದಲ್ಲಿ ಬಿ.ಎ ಆನರ್ಸ್, ಜೀವ ವಿಜ್ಞಾನ, ರಸಾಯನ ವಿಜ್ಞಾನ, ಗಣಿತ, ಭೌತ ವಿಜ್ಞಾನ, ಪರಿಸರ ವಿಜ್ಞಾನ ಮತ್ತು ಸುಸ್ಥಿರತೆ, ಮಾಹಿತಿ ವಿಜ್ಞಾನ ವಿಷಯದಲ್ಲಿ ಬಿ.ಎಸ್ಸಿ ಆನರ್ಸ್‍ಗೆ ಅವಕಾಶವಿದೆ. ಜತೆಗೆ ಜೀವ ವಿಜ್ಞಾನ, ರಸಾಯನ ವಿಜ್ಞಾನ, ಗಣಿತ, ಭೌತ ವಿಜ್ಞಾನದಲ್ಲಿ ಬಿ.ಎಸ್ಸಿ. ಬಿಇಡಿ ಗೆ ಅವಕಾಶವಿದೆ. ಜುಲೈನಲ್ಲಿ ತರಗತಿಗಳು ಆರಂಭ. ವಿವರಗಳಿಗೆ ಮೊಬೈಲ್: 8971889988, ಇ-ಮೇಲ್: outreach@apu.edu.in ಸಂಪರ್ಕಿಸಬಹುದು.


ರಾಷ್ಟೀಯ ಶಿಕ್ಷಣ ನೀತಿ 2020ರ  ಅನುಗುಣವಾಗಿ ಇದನ್ನು ರೂಪಿಸಿ ವಿನ್ಯಾಸಗೊಳಿಸಲಾಗಿದೆ. ಉನ್ನತ ಪ್ರೇರಣೆ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಹೊಂದಿದ, ಚಿಂತನಶೀಲ ಹಾಗೂ ಸ್ವಕಲಿಕೆಯ ಸಾಮರ್ಥ್ಯವುಳ್ಳ ಯುವ ನಾಗರಿಕರನ್ನು ರೂಪಿಸುವುದು ಇದರ ಉದ್ದೇಶ ಎಂದು ಪ್ರಕಟಣೆ ಹೇಳಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top