ಪುಂಜಾಲಕಟ್ಟೆ : ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ, ರಾಷ್ಟೀಯ ಸೇವಾ ಯೋಜನೆ ಘಟಕ ಒಂದು ಮತ್ತು ಎರಡರ ವತಿಯಿಂದ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಕುಕ್ಕೇಡಿ, ಬುಳೆಕ್ಕಾರ್ ಇಲ್ಲಿ 2023-24 ರ ವಾರ್ಷಿಕ ವಿಶೇಷ ಶಿಬಿರವನ್ನು ಫೆ 09 ರಿಂದ ದಿನಾಂಕ 15 ರವೆಗೆ ಹಮ್ಮಿಕೊಳ್ಳಲಾಗಿದೆ.
ಶಿಬಿರದ ಮೊದಲ ದಿನವಾದ ನಿನ್ನೆ ಉದ್ಘಾಟನಾ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಅನಿತಾ ಕೆ, ಅಧ್ಯಕ್ಷರು ಗ್ರಾ.ಪಂ. ಕುಕ್ಕೇಡಿ ಇವರು ಉದ್ಘಾಟಿಸಿ ಮಾತನಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಪ್ರೊ.ಮಾಧವ ಎಂ, ಪ್ರಾಂಶುಪಾಲರು ಸ. ಪ್ರ. ದ. ಕಾಲೇಜು ಪುಂಜಾಲಕಟ್ಟೆ , ಇವರು ವಹಿಸಿಕೊಂಡಿದ್ದರು. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಗೋಪಾಲ ಶೆಟ್ಟಿ , ಸದಸ್ಯರು ಗ್ರಾ.ಪಂ. ಕುಕ್ಕೇಡಿ, ಸತೀಶ, ಮುಖ್ಯ ಶಿಕ್ಷಕರು ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕುಕ್ಕೇಡಿ , ಕಿಶೋರ್ ಕುಮಾರ್ ಜೈನ್ ಹಾಗು ರಾ. ಸೇ.ಯೋ.ಯ ಯೋಜನಾಧಿಕಾರಿಗಳು, ಪದಾಧಿಕಾರಿಗಳು ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ರೆಡ್ ರಿಬ್ಬನ್‌ನ ಪದಾಧಿಕಾರಿಯಾದ ರೂಪ ಸ್ವಾಗತಿಸಿ, ರೇಖಾ ಧನ್ಯವಾದವಿತ್ತರು, ಪದಾಧಿಕಾರಿಯಾದ ದೀನಕೃಪಾ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ