ಮಂಗಳೂರು: ಉದ್ಯಮಿ, ಸಮಾಜ ಸೇವಕ ಸ್ವರ್ಗೀಯ ಬಿ.ಕೆ. ವಿಶ್ವನಾಥ ಅವರು ಕಟೀಲು ಗೋಪಾಲಕೃಷ್ಣ ಅಸ್ಪಣ್ಣರ ಪ್ರೇರಣೆಯಿಂದ ಕೂಳೂರು ಶ್ರೀ ದೇವಿ ಪ್ರಸಾದ - ಗೋಪಿ ನಿಲಯದಲ್ಲಿ 1964ರಲ್ಲಿ ಆರಂಭಿಸಿ ಮುನ್ನಡೆಸಿದ್ದ ಶ್ರೀ ಕಟೀಲು ಮೇಳದ ಸೇವೆ ಆಟದ 60ನೇ ವರ್ಷದ ಸೇವೆಯನ್ನು ''ಯಕ್ಷಸೇವಾ ಷಷ್ಟಿ ಪೂರ್ತಿ ಸಂಭ್ರಮ'' ವಾಗಿ ಮಾರ್ಚ್ 1 ಮತ್ತು 2 ರಂದು ಆಚರಿಸಲಾಗುವುದು.
ಮಾರ್ಚ್ 1 ರಂದು ಶುಕ್ರವಾರ ಶ್ರೀ ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆ, ಅಮೃತ ವಿದ್ಯಾಲಯ ಕೂಳೂರು, ವಿ.ಆರ್. ಟೈನಿ ಫೀಟ್ಸ್ ಪ್ರೀ ಸ್ಕೂಲ್ ಕೂಳೂರು, ಭಾರತೀಯ ನೃತ್ಯ ಕಲಾ ಶಾಲೆ, ಕೊಟ್ಟಾರ ಆದರ ಬಾಲ ಕಲಾವಿದರಿಂದ "ಸಾಂಸ್ಕೃತಿಕ ವೈವಿಧ್ಯ" ಹಾಗೂ ಲಯನ್ ಕಿಶೋರ್ ಡಿ. ಶೆಟ್ಟಿಯವರ ಶ್ರೀಲಲಿತೆ ತಂಡದವರಿಂದ ಕದ್ರಿ ನವನೀತ ಶೆಟ್ಟಿ ವಿರಚಿತ "ಕಟೀಲ್ದಪ್ಪೆ ಉಳ್ಳಾಲ್ದಿ" ತುಳು ಪೌರಾಣಿಕ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.
ಅ೦ದು ಯಕ್ಷಗಾನ ಸಂಘಟಕ ಶ್ರೀ ಪದ್ಮನಾಭ ಕಟೀಲು ದುಬ್ಳಾ ಹಾಗೂ ಹಿರಿಯ ಕಲಾವಿದೆ ಶ್ರೀಮತಿ ಸರೋಜಿನಿ ಶೆಟ್ಟಿ ಅವರನ್ನು ಶ್ರೀ ವಿಖ್ಯಾಯಾನ೦ದ ಸ್ವಾಮೀಜಿ, ಮಾಣಿಲ ಮೋಹನ್‌ದಾಸ್ ಸ್ವಾಮೀಜಿ ಹಾಗೂ ಗುರುಪುರ ರಾಜಶೇಖರಾನಂದ ಸ್ವಾಮೀಜಿ ಹಾಗೂ ರಾಜಕೀಯ, ಧಾರ್ಮಿಕ ನೇತಾರರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಗುವುದು.
ಮಾರ್ಚ್ 2 ಶನಿವಾರ ಸಂಜೆ ಶ್ರೀ ಕ್ಷೇತ್ರ ಕಟೀಲಿನ ತಂತ್ರಿಗಳು, ಅಸ್ರಣ್ಣ ಬಂಧುಗಳ ಉಪಸ್ಥಿತಿಯಲ್ಲಿ, ಗಣ್ಯರ ಸಮಕ್ಷಮದಲ್ಲಿ ಹಿರಿಯ ಯಕ್ಷಗಾನ ವೇಷಧಾರಿ ಕೋಡಿ ಕೃಷ್ಣ ಗಾಣಿಗ (ಕುಂದಾಪುರ ಕುಷ್ಟ), ಸುಣ್ಣಂಬಳ ವಿಶ್ವೇಶ್ವರ ಭಟ್ ಹಾಗೂ ಕಟೀಲು ಮೇಳದ ಹಾಸ್ಯಗಾರ ಬಾಬುಗೌಡ ಚಾರ್ಮಾಡಿ ಅವರಿಗೆ ಬಿ.ಕೆ. ಎಶ್ವನಾಥ ಸ್ಮೃತಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಹಾಗೂ ಕಟೀಲು ಮೇಳದವರಿಂದ "ಶ್ರೀ ದೇವಿ ಮಹಾತ್ಮೆ" ಯಕ್ಷಗಾನ ಬಯಲಾಟ ಜರಗಲಿರುವುದು ಎಂದು ಸಂಘಟಕರಾದ ಶ್ರೀಮತಿ ಬಿ.ಕೆ. ರಾಜೀವಿ ವಿಶ್ವನಾಥ ಮತ್ತು ಮಕ್ಕಳು ತಿಳಿಸಿದ್ದಾರೆ.
ಬಿ.ಕೆ. ಶೈಲೇಂದ್ರ, ಬಿ.ಕೆ. ಸುಜಿತ್, ಬಿ.ಕೆ. ಸಂದೀಪ್, ಆದಿತ್ಯ ಆರ್. ಅಂಚನ್, ಕದ್ರಿ ನವನೀತ್ ಶೆಟ್ಟಿ, ಯೋಗೀಶ್ ಕಾಂಚನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ