ಯಕ್ಷಗಾನ ಪ್ರತಿಭಾ ಖನಿ ಸತ್ಯಜಿತ್ ಹೆಚ್. ರಾವ್

Upayuktha
0

ರಾವಳಿಯ ಪ್ರಸಿದ್ಧ ಸ್ಥಾನವನ್ನು ಪಡೆದ ಕಲೆ "ಯಕ್ಷಗಾನ". ಕರ್ನಾಟಕದ ಗಂಡು ಕಲೆಯಾಗಿರುವ ಯಕ್ಷಗಾನ ಪಾರ್ತಿ ಸುಬ್ಬರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜೃಂಭಿಸುತ್ತಿದೆ. ಇಂತಹ ಕಲೆಯಲ್ಲಿ ರಾರಾಜಿಸುತ್ತಿರುವ ಕಲಾವಿದ ಸತ್ಯಜಿತ್ ಹೆಚ್ ರಾವ್. ಇವರು ಹರಿಪ್ರಸಾದ್ ರಾವ್ ವಿ ಹಾಗೂ ಹೇಮಾ ಹೆಚ್ ರಾವ್ ಇವರ ಮಗನಾಗಿ ಜನಿಸಿದ್ದು. ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನಲ್ಲಿ ಪೂರ್ಣಗೊಳಿಸಿ, ಶ್ರೀ ಸತ್ಯಸಾಯಿ ಸೇವಾ ಲೋಕ ಅಳಿಕೆ (ಹೈಸೂಲ್ ಮತ್ತು ಪಿ.ಯು.ಸಿ) ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪದವಿ ಹಾಗೂ ಉನ್ನತ ಶಿಕ್ಷಣ ಎಮ್.ಬಿ.ಎ ಪದವಿಯನ್ನು ಪಡೆದಿರುತ್ತಾರೆ.





ಯಕ್ಷಗಾನವು ಇವರ ಮನೆಯಲ್ಲಿ ಹಿರಿಯರಿಂದ ರಕ್ತಗತವಾಗಿ ಬಂದ ಕಲೆ. ಅಜ್ಜ, ಮುತ್ತಜ್ಜ, ತಂದೆ ಮತ್ತು ಅಣ್ಣನವರೆಲ್ಲರೂ ಯಕ್ಷಗಾನದ ಒಂದೊಂದು ಕ್ಷೇತ್ರದಲ್ಲಿ ತೊಡಗಿಸಿಕೊಂಡವರು. ಬಾಲ್ಯದಲ್ಲಿ ಮೈಸೂರಿನ ರಮೇಶ್ ಧಾನೂರ್ ಇವರಿಂದ ತಬಲಾ ವಾದನದ ಶಿಕ್ಷಣವನ್ನು ಪಡೆದು ಬಳಿಕ ಶ್ರೀ ಸತ್ಯಸಾಯಿ ಲೋಕ ಸೇವಾ ಕೇಂದ್ರದಲ್ಲಿ ನಿತ್ಯ ಭಜನೆಗೆ ತಬಲಾ ವಾದನದ ಅವಕಾಶ ನಿತ್ಯವೂ ಲಭಿಸಿತು. ಅಲ್ಲಿಯೇ ಇದ್ದ ಯಕ್ಷಗಾನದ ಮಕ್ಕಳ ತಂಡದಲ್ಲಿ ಅಭ್ಯಾಸಕ್ಕಾಗಿ ಮದ್ದಳೆ ನುಡಿಸುವ ಅವಕಾಶವನ್ನು ಯಕ್ಷಗಾನದ ಭಾಗವತರಾದ ಗಿರೀಶ್ ರೈ ಕಕ್ಕೆಪದವು ಹಾಗೂ ಪ್ರಸಿದ್ಧ ವೇಷಧಾರಿ  ಉಮೇಶ್ ಶೆಟ್ಟಿ ಉಬರಡ್ಕರಿಂದ ಲಭಿಸಿತು. ಜೊತೆಗೆ ಯಕ್ಷಗಾನದ ನಾಟ್ಯಾಭ್ಯಾಸವನ್ನು ಕಲಿಯುವ ಅವಕಾಶ ಸಿಕ್ಕಿತು. ಹೀಗೆ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು. ಶ್ರೀಯುತ ಮೋಹನ್ ಬೈಪಾಡಿತ್ತಾಯರು ಉಜಿರೆ ಚೆಂಡೆ ಮದ್ದಲೆ ಗುರುಗಳು.





ಕೃಷ್ಣ, ಸುಧಾಮ ಮತ್ತು ಮಾನಿಷಾದ ನೆಚ್ಚಿನ ಪ್ರಸಂಗಗಳು. ಯಕ್ಷ ಕಣ್ಮಣಿ ಬಲಿಪ ಪ್ರಸಾದ್ ಭಟ್ ಮತ್ತು ರಂಗದಲ್ಲಿ ಇರುವ ಎಲ್ಲರೂ ನೆಚ್ಚಿನ ಭಾಗವತರು. ಗುರುಗಳು ಮತ್ತು ಈಗಿನ ಹೆಚ್ಚಿನ ಕಲಾವಿದರು ಇವರ ನೆಚ್ಚಿನ ಚೆಂಡೆ ಹಾಗೂ ಮದ್ದಲೆ ವಾದಕರು. ಸತ್ಯಜಿತ್ ಅವರಿಗೆ ರಂಗದಲ್ಲಿ ಬಣ್ಣದ ವೇಷ ಮತ್ತು ಹಾಸ್ಯ ವೇಷವನ್ನು ಕೂಡ ಮಾಡಿದ ಅನುಭವವಿದೆ.




ಯಕ್ಷಗಾನದ ಇಂದಿನ ಸ್ಥಿತಿ ಗತಿ:- ಬಹು ಬೇಡಿಕೆಯಿರುವ ಕಲೆ ಯಕ್ಷಗಾನ. ಆದರೆ ಆರ್ಥಿಕವಾಗಿ ಜೀವನದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ಕಷ್ಟಸಾಧ್ಯ. 




ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:- ಇವತ್ತಿನ ಪ್ರೇಕ್ಷಕರ ಹೊಸತನಗಳ  ನಿರೀಕ್ಷೆಯಂತೆ ಕರ್ತವ್ಯ ನಿರ್ವಹಣೆ ಅಗತ್ಯ. ಆದರೆ ಜೊತೆಗೆ ಕಲೆಯ ಪರಂಪರೆಯನ್ನು ಉಳಿಸುವುದು ಕಲಾವಿದರೆಲ್ಲರ ಆದ್ಯ ಕರ್ತವ್ಯ.




ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:- ಪರಂಪರೆಯನ್ನು ಉಳಿಸಿಕೊಂಡು ಹೊಸತನವನ್ನು ನೀಡಿ ಯಕ್ಷಗಾನವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳುತ್ತಾರೆ ಸತ್ಯಜಿತ್.





ಮೇಳಗಳ ಹಿಮ್ಮೇಳ ಕಲಾವಿದರ ರಜೆಗೆ ಹೋದಾಗ ಹೆಚ್ಚಿನ ಎಲ್ಲಾ ಮೇಳಗಳಲ್ಲಿ ಸೇವಾರೂಪದ ಕರ್ತವ್ಯ ನಿರ್ವಹಿಸಿರುತ್ತಾರೆ. ಹವ್ಯಾಸಿ ಕಲಾವಿದರು, ಸಂಘ ಸಂಸ್ಥೆಗಳ ಕಲಾವಿದರು,  ಶಾಲೆ - ಕಾಲೇಜುಗಳ ಮಕ್ಕಳ ತಂಡಗಳಲ್ಲಿ ಮತ್ತು ಮಹಿಳಾ ಕಲಾವಿದರ ಆಟ ಕೂಟಗಳಲ್ಲಿ ಕರ್ತವ್ಯ ನಿರ್ವಹಿಸಿ ಯಕ್ಷರಂಗದಲ್ಲಿ ಒಟ್ಟು ಸುಮಾರು 9 ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇಂಟರ್ ಕಾಲೇಜು ಮಟ್ಟದ ಯಕ್ಷಗಾನ ಸ್ಪರ್ಧೆಯಲ್ಲಿ ಹಾಸ್ಯ ವೇಷಕ್ಕೆ ಎರಡು ಪ್ರಥಮ ಮತ್ತು ಒಂದು ದ್ವಿತೀಯ ಬಹುಮಾನ, ಕಾಲೇಜು ಮಟ್ಟದಲ್ಲಿ ಅನೇಕ ಸನ್ಮಾನಗಳು, ಭಾರತ ಸಾಂಸ್ಕತಿಕ ಕಲಾ ಕೇಂದ್ರದಿಂದ ಸನ್ಮಾನ, ವಿವೇಕಾನಂದ ಚಾರಿಟೇಬಲ್ ಟ್ರಸ್ಟ್ (ರಿ) ರಾಯಿ ಕಲಾವಿದ ಸನ್ಮಾನ.





ಸಂಗೀತ, ಭಜನೆ,  ಹಾರ್ಮೋನಿಯಮ್, ತಬಲಾ, ಕೀಬೋರ್ಡ್, ನಾಟಕದ ಹಿನ್ನೆಲೆ ಗಾಯನ‌ (ಮ್ಯೂಸಿಕ್), ಚಿತ್ರಕಲೆ ಮುಂತಾದವು ಇವರ ಹವ್ಯಾಸಗಳು. ತಂದೆ, ತಾಯಿ, ಅಣ್ಣನ ಪ್ರೋತ್ಸಾಹ ಹಾಗೂ ಪ್ರೇರಣೆ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಸತ್ಯಜಿತ್ ಹೆಚ್ ರಾವ್. ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.



- ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

+91 8971275651




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top