ಜೇನಿನ ರುಚಿ ನೋಡುವಂತೆ ಜೀವನ ಸುಮಧುರ ಕಾವ್ಯ ರಚಿಸಿದವರು ಕೆ.ಎಸ್.ನ: ಸುಮಾವೀಣಾ

Upayuktha
0



ಹಾಸನ: ಕನ್ನಡ ಕಂಡ ಪ್ರಗತಿಯ ಒಲುಮೆಯ ಕವಿ ಕೆ.ಎಸ್.ನರಸಿಂಹಸ್ವಾಮಿ ದಾಂಪತ್ಯವೇ ಕವಿಯ ಕಾವ್ಯದ ಹೂರಣ ದಂಪತಿಗಳಲ್ಲಿ ಚರ್ಚೆ ಬೇಕು ವಾಗ್ವಾದ ಬೇಡ ಮನುಷ್ಯ ಎಂದ ಮೇಲೆ ಮನಸ್ಸಿನಲ್ಲಿ ತಿದ್ದುವ ಕ್ಷಮಿಸುವ ಗುಣವಿರಲೇಬೇಕೆಂದು ಪ್ರತಿಪಾದಿಸಿದ ಕವಿ ಹುಟ್ಟಿನಲ್ಲಿಯೇ ಜೇನಿನ ರುಚಿ ನೋಡುವಂತೆ ಜೀವನ ಸುಮಧುರ ಕಾವ್ಯವನ್ನು ಅವರ ಕವಿತೆಗಳಲ್ಲಿ ಅನುಭವಿಸಬಹುದು ಎಂದು ಉಪನ್ಯಾಸಕಿ  ಸುಮಾವೀಣಾ ತಿಳಿಸಿದರು. 




ಅವರು  ಹಾಸನ ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿಯ ಅಧ್ಯಕ್ಷರು, ನಟರು  ಬಿದರೆ ರವಿಕುಮಾರ್ ಪ್ರಾಯೋಜಕತ್ವದಲ್ಲಿ ಹಾಸನ ವಾಣಿವಿಲಾಸ ರಸ್ತೆ ಥಿಯಾಸಾಪಿಕಲ್ ಸೊಸೈಟಿ ಇಲ್ಲಿ ಭಾನುವಾರ ನಡೆದ ಮನೆ ಮನೆ ಕವಿಗೋಷ್ಠಿ 313 ತಿಂಗಳ ಕಾರ್ಯಕ್ರಮದಲ್ಲಿ ಕವಿ ಕೆ.ಎಸ್.ನರಸಿಂಹಸ್ವಾಮಿ ಕಾವ್ಯ ಕುರಿತಾಗಿ ಮಾತನಾಡಿ ಕೆ.ಎಸ್.ನ.ಕವಿತೆಗಳು ಎದೆಯನ್ನು ಹೊಕ್ಕುತ್ತ ಹಾಯ್ದು ಹೋಗುವುದು ಆಡಂಬರವಿಲ್ಲದ ಕ್ಲಿಷ್ಟವಾಗದ ಆಡುಮಾತುಗಳೇ ಸರಿಯಾದ ಅಳವಡಿಕೆಯನ್ನು ಮೈಸೂರು ಮಲ್ಲಿಗೆ ಕೃತಿಯ ಮುನ್ನುಡಿಯಲ್ಲಿ ಡಿವಿಜಿಯವರು ಶ್ಲಾಘಿಸಿದ್ದಾರೆ ಎಂದು ಕೆ.ಎಸ್.ನ.ಕಾವ್ಯವನ್ನು ವಿಸ್ತøತವಾಗಿ ವಿಶ್ಲೇಷಿದರು.




ಸಾಹಿತಿ ಗೊರೂರು ಅನಂತರಾಜು ಮಾತನಾಡಿ,  ಕವಿ ರಚಿತ ಕಾವ್ಯ ಗಾಯಕರ ಕಂಠಸಿರಿಯಲ್ಲಿ ಕೇಳುಗರಿಗೆ ನೇರವಾಗಿ  ಅಥವಾ ಕ್ಯಾಸೆಟ್ ಮೂಲಕ ತಲುಪಿ ಕಾವ್ಯವು ಜನಸಾಮಾನ್ಯರನ್ನು ತಲುಪಿ ಕಾವ್ಯ ಜೊತೆಗೆ ಕವಿಯೂ ಕೂಡ ಜನಪ್ರಿಯವಾಗುವಲ್ಲಿ ಗಾಯಕ ಗಾಯಕಿಯರ ಭಾವಗೀತೆಗಳ ಗಾಯನಗಳ ಕೊಡುಗೆಯು ಮಹತ್ತರವಾದುದು ಎಂದರು. 




 ನಿವೃತ್ತ ಪ್ರಾಂಶುಪಾಲರು ಹಾಸನಾಂಬ ಥಿಯಾಸಾಪಿಕಲ್ ಸೊಸೈಟಿ ಅಧ್ಯಕ್ಷರು  ಎಂ.ಆರ್.ಚಂದ್ರಶೇಖರ್ ಇಂತಹ ಸದಭಿರುಚಿಯ ಕಾವ್ಯ ಗಾಯನ ಕಾರ್ಯಕ್ರಮ ಮನಸ್ಸಿಗೆ ನಾಟಿದೆ  ಉಪನ್ಯಾಸ ಸಾಹಿತ್ಯ ಓದಲು ಪ್ರೇರೆಪಿಸುವಂತಿದೆ ಉಪನ್ಯಾಸ ಕಾವ್ಯ ಗಾಯನ ಮಿಶ್ರಿತ ಕಾರ್ಯಕ್ರಮ ಮೂರು ಗಂಟೆ ಕಳೆದಿದ್ದೆ ತಿಳಿಯದಷ್ಟು ಖುಷಿ ತಂದಿದೆ ಎಂದು ಹರ್ಷಿಸಿದರು. 




 ನಿವೃತ್ತ ತಹಸೀಲ್ದಾರ್ ಹಾಗೂ ರಂಗನಟರು  ಎ.ವಿ. ರುದ್ರಪ್ಪಾಜಿರಾವ್ ಮಾತನಾಡಿ ನಾನು ರಂಗಗೀತೆಗಳನ್ನು ಬಯಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ಕವಿಗೋಷ್ಠಿಯಲ್ಲಿ ಕಾವ್ಯ ವಿಮರ್ಶೆ ಜೊತೆಗೆ ನಟರು ಗಾಯಕರನ್ನು ಒಗ್ಗೂಡಿಸಿ ರಂಗಗೀತೆ ಕೆ.ಎಸ್.ನ.ಭಾವಗೀತೆ ಇವೆಲ್ಲವೂ ಇಲ್ಲಿ ಮೇಳೈಸಿದ್ದು ಮುಂದೆಯೂ ಕೂಡ ರಂಗಗೀತೆ ಭಾವಗೀತೆ ಜನಪದ ಗಾಯನವನ್ನು ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಒಳಪಡಿಸಿದರೆ ನಾವು ಶೋತೃಗಳು ಕೂಡ ಭಾಗವಹಿಸುವುದಾಗಿ ತಿಳಿಸಿದರು. 




 ಕವಿಗೋಷ್ಠಿಯಲ್ಲಿ ಜಿ.ಆರ್.ರವಿಕುಮಾರ್ ಜನಿವಾರ, ರೇಖಾ ಪ್ರಕಾಶ್, ನೀಲಾವತಿ ಸಿ.ಎನ್. ಗೊರೂರು ಅನಂತರಾಜು, ದಿಬ್ಬೂರು ರಮೇಶ್,  ಉಮೇಶ್ ಹೊಸಹಳ್ಳಿ, ವನಜಾ ಸುರೇಶ್, ಜಯಶಂಕರ್ ಬೆಳಗುಂಬ, ಜಿ.ಆರ್.ಶ್ರೀಕಾಂತ್ ಗೊರೂರು ಮಲ್ಲೇಶ್ ಜಿ. ಸ್ವರಚಿತ ಕವಿತೆ ವಾಚಿಸಿ ವಾಚಿಸಿದ ಕವಿತೆಗಳ ವಿಮರ್ಶೆ ನಡೆಯಿತು.




ಶ್ವೇತಮೋಹನ್, ಧನಲಕ್ಷ್ಮೀ ಗೊರೂರು, ದಿಬ್ಬೂರು ರಮೇಶ್ ಕೆ.ಎಸ್.ನ ಭಾವಗೀತೆಗಳನ್ನು ಹಾಡಿ ರಂಜಿಸಿದರೆ ಸಾವಿತ್ರಿ ಬಿ.ಗೌಡ ಕೆ.ಎಸ್.ನ.ಕವಿತೆ ವಾಚಿಸಿ ನುಡಿ ನಮನ ಸಲ್ಲಿಸಿದರು. ಗಾಯಕರು ಬಾಲಕೃಷ್ಣ ಹೆಚ್.ಸಿ.  ನಟಿ ರಾಣಿ ಚರಾಶ್ರೀ, ನಟ ಜಯಶಂಕರ್ ಬೆಳಗುಂಬ ರಂಗಗೀತೆಗಳಿಂದ ರಂಜಿಸಿದರು. ಕಲಾವಿದ ಯಾಕೂಬ್, ಕುಮಾರ್ ಇದ್ದರು. ಧನಲಕ್ಷ್ಮಿ ಪ್ರಾರ್ಥಿಸಿದರು. ಮನೆ ಮನೆ ಕವಿಗೋಷ್ಠಿ ಸಂಚಾಲಕರು ಗೊರೂರು ಅನಂತರಾಜು ಕಾರ್ಯಕ್ರಮ ನಿರೂಪಿಸಿದರು. 




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

  



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top