ಪುತ್ತೂರು: ವಿವೇಕಾನಂದ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ಇದರ ಪ್ರಥಮ ಮತ್ತು ತೃತೀಯ ಸೆಮಿಸ್ಟರ್ ಪದವಿ ಫಲಿತಾಂಶವು ಜ.17ರಂದು ಪೂರ್ವಾಹ್ನ 09:00 ಗಂಟೆಯಿಂದ ಕಾಲೇಜಿನ ವೆಬ್‍ಸೈಟ್‍ನಲ್ಲಿ (vcputtur.ac.in) ದೊರೆಯಲಿದೆ. ಪ್ರಥಮ ಸೆಮಿಸ್ಟರ್‍ನಲ್ಲಿ ಶೇಕಡಾ 87.41 ಮತ್ತು ತೃತೀಯ ಸೆಮಿಸ್ಟರ್‍ನಲ್ಲಿ ಶೇಕಡಾ 91.60 ಫಲಿತಾಂಶವು ದಾಖಲಾಗಿದೆ.
ಪ್ರಥಮ ಸೆಮಿಸ್ಟರ್ ಬಿ.ಎ. ಶೇ. 78, ಬಿ.ಎಸ್ಸಿ ಶೇ.97, ಬಿ.ಕಾಂ. ಶೇ. 92, ಬಿಬಿಎ ಶೇ.92, ಬಿಸಿಎ ಶೇ.84.13 ಫಲಿತಾಂಶ ಬಂದಿದೆ. ತೃತೀಯ ಸೆಮಿಸ್ಟರ್ ಬಿ.ಎ. ಶೇ.96, ಬಿ.ಎಸ್ಸಿ ಶೇ.96, ಬಿ.ಕಾಂ. ಶೇ.85.71, ಬಿಬಿಎ ಶೇ.98, ಬಿಸಿಎ ಶೇ.93ರಷ್ಟು ಫಲಿತಾಂಶ ದಾಖಲಾಗಿದೆ ಎಂದು ಪರೀಕ್ಷಾಂಗ ಕುಲಸಚಿವ ಡಾ. ಶ್ರೀಧರ ಎಚ್.ಜಿ. ಮತ್ತು ಪ್ರಾಂಶುಪಾಲ ವಿಷ್ಣುಗಣಪತಿ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


