ಉಡುಪಿ ಎಂಜಿಎಂ. ಕಾಲೇಜಿನ ಮಧ್ಯಾಹ್ನದ ಉಚಿತ ಭೇೂಜನ ನಿಧಿಗೆ ದೇಣಿಗೆ

Upayuktha
0



ಉಡುಪಿ: ಉಡುಪಿ ಎಂಜಿಎಂ.ಕಾಲೇಜಿನಲ್ಲಿ ಕಲಿಯುತ್ತಿರುವ ಆರ್ಹ ಬಡ ವಿದ್ಯಾರ್ಥಿಗಳ ಮಧ್ಯಾಹ್ನದ ಉಚಿತ ಭೇೂಜನ ನಿಧಿಗೆ ಹೆಸರು ಹೇಳಲು ಒಪ್ಪದ ಕಾಲೇಜಿನ ಹಳೆ ವಿದ್ಯಾರ್ಥಿನಿ ರೂ.25 ಸಾವಿರವನ್ನು ದೇಣಿಗೆ ನೀಡಿದ್ದಾರೆ. 



ತಾನು ಓದುವಾಗ ಇದೇ ಉಚಿತ ಭೇೂಜನ ವ್ಯವಸ್ಥೆಯ ಫಲಾನುಭವಿಯಾಗಿ ಕಲಿತು ಉತ್ತಮ ಉದ್ಯೋಗಿಯಾಗಿ ಇರುವಾಗ ನನ್ನಂತಹ ವಿದ್ಯಾರ್ಥಿಗಳ ಮಧ್ಯಾಹ್ನದ ಹಸಿವು ತಣಿಸಬೇಕೆಂಬ ಉದ್ದೇಶದಿಂದ ಈ ದೇಣಿಗೆ ನೀಡುತ್ತಿದ್ದು. ಇದರ ಸದಪಯೇೂಗವನ್ನು ಆಹ೯ ಬಡ ವಿದ್ಯಾರ್ಥಿಗಳು ಪಡೆದು ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕೆಂದು ಅಭಿಪ್ರಾಯಿಸಿದ್ದಾರೆ. ಎಂಜಿಎಂ.ಕಾಲೇಜಿನ ಹಳೆ ವಿದ್ಯಾರ್ಥಿ ಸಂಘ ಹಮ್ಮಿಕೊಂಡ ಅಮೃತ ಸಂಗಮಅಭಿನಂದನಾ ಅಭಿವಂದನಾ ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಸಂಘದ ಮೂಲಕ ಕಾಲೇಜಿನ ಪ್ರಾಂಶುಪಾಲರಿಗೆ ಈ ದೇಣಿಗೆ ಹಸ್ತಾಂತರಿಸಲಾಯಿತು.




ಈ ಸಂದರ್ಭದಲ್ಲಿ ಹಳೆ  ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ.ಕೊಕ್ಕಣೆ೯ ಸುರೇಂದ್ರ ನಾಥ ಶೆಟ್ಟಿ, ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಎಲ್.ಸಾಮಗ, ಅಕಾಡೆಮಿಯ ಕಾರ್ಯದಶಿ೯ ಸಿ.ಎ.ಬಿ.ಪಿ.ವರದರಾಯ ಪೈ;ಕಾಲೇಜು ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ, ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ನಾಯ್ಕ, ಪ.ಪೂ.ಕಾಲೇಜಿನ ಪ್ರಾಂಶುಪಾಲೆ ಮಾಲತಿದೇವಿ, ಹಳೆ ವಿದ್ಯಾರ್ಥಿ ಸಂಘದ  ಕಾರ್ಯದಶಿ೯ ಡಾ.ಎಂ.ವಿಶ್ವನಾಥ ಪೈ, ಕೇೂಶಾಧಿಕಾರಿ ದೀಪಾಲಿ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
To Top