
ಮಂಗಳೂರು: ಓರ್ವ ಸಜ್ಜನ, ನಿಷ್ಕಳಂಕ ವ್ಯಕ್ತಿತ್ವದ 'ಸಹೃದಯೀ ಪಳ್ಳಿ ರಮಾನಾಥ ಹೆಗ್ಡೆಯವರು. ತುಳು ಕೂಟ (ರಿ) ಕುಡ್ಲ ಸಂಸ್ಥೆ ಗೆ ಆರಂಭದಿಂದಲೂ ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದು, ತುಳು ಕೂಟದ ಮಹಾ ಪೋಷಕರಾಗಿದ್ದರು. ಈ ಬಾರಿಯ ತುಳು ಕೂಟದ ಅಮೃತ ಮಹೋತ್ಸವ - ಬಂಗಾರ್ ಪರ್ಬೊ ಸರಣಿ ವೈಭವದ 3-4 ಕಾರ್ಯಕ್ರಮಗಳು ಸುಸೂತ್ರವಾಗಿ ಜರಗಲು ಪೂರ್ಣಪ್ರಮಾಣದ ಸಹಾಯವನ್ನು ನೀಡುತ್ತಿದ್ದರು.
ಶ್ರೀಮಂಗಳಾದೇವಿ ದೇವಳದ ಮುಕ್ತೇಸರರಾಗಿ ಪ್ರಸಿದ್ಧರಾಗಿದ್ದು, ತುಳು ಭಾಷಾಭಿಮಾನಿಯಾಗಿಯೂ ಪರಿಚಿತರು. ಇಂತಹಾ ಚೇತನಗಳು ಮತ್ತೆ ಮತ್ತೆ ಹುಟ್ಟಿಬರಲಿ ಎಂದು ಕುಡ್ಲ ತುಳುಕೂಟದ ಅಧ್ಯಕ್ಷ ಮುರೋಳಿ ಬಿ.ದಾಮೋದರ ನಿಸರ್ಗ ಕೂಟ ವರ್ಷಡಿಸಿದ್ದ ಸಂತಾಪ ಸೂಚಕ ಸಭೆಯಲ್ಲಿ ದಿವಂಗತರ ಗುಣಗಾನ ಮಾಡುತ್ತಾ ನುಡಿನಮನ ಸಲ್ಲಿಸಿದರು.
ಸಭೆಯಲ್ಲಿ ಜೆ.ವಿ.ಶೆಟ್ಟಿ, ವರ್ಕಾಡಿ ರವಿ ಅಲೆವೂರಾಯ, ಚಂದ್ರಶೇಖರ ಸುವರ್ಣ, ಪದ್ಮನಾಭ ಕೋಟ್ಯಾನ್, ಹೇಮಾ ನಿಸರ್ಗ, ಭಾಸ್ಕರ ಸಾಲ್ಯಾನ್, ಪಿ. ಗೋಪಾಲಕೃಷ್ಣ, ಸುಜಾತಾ ಸುವರ್ಣ, ಸತ್ಯವತಿ ಆರ್. ಬೋಳೂರು ರಮೇಶ ಕುಲಾಲ್, ಬಾಯಾರ್ , ಭಾಸ್ಕರ ಕುಲಾಲ್ ಬರ್ಕೆ, ಡಾ. ರಾಕೇಶ್ ಕುಮಾರ್, ದಿನೇಶ ಕುಂಪಲ ಹಾಗೂ ಇನ್ನಿತರ ಸದಸ್ಯರು ಮೌನ ಪ್ರಾರ್ಥನೆಯೊಂದಿಗೆ ಅಗಲಿದ ಆತ್ಮಕ್ಕೆ ಸದ್ಗತಿ ಕೋರಿದರು. ತುಳು ಕೂಟದ ಕಛೇರಿಯಲ್ಲಿ ಈ ಸಂತಾಪ ಸೂಚಕ ಸಭೆ ಜರಗಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

