ಸುರತ್ಕಲ್: ಸಾಹಿತ್ಯವು ಸಮಾಜವನ್ನು ಕಟ್ಟುವ ಮೂಲಕ ಅಂಕುಡೊಂಕುಗಳನ್ನು ತಿದ್ದುವುದರೊಂದಿಗೆ ಬರಹಗಾರನ ಶಕ್ತಿಯಾಗಿಯೂ ಹೊರಹೊಮ್ಮುತ್ತದೆ. ಕಣ್ಣೀರಿನ ಕಥೆಗಳು ಗೋಳಿನ ಕಥೆಗಳಾಗದೆ ಶಕ್ತಿಯಾಗಬೇಕಾದ ಅವಶ್ಯಕತೆ ಇದೆ. ಹೆಣ್ಣು ಅನುಭವಿಸುವ ಸಂಕೀರ್ಣತೆಗಳು ಬರಹದ ಮೂಲವಾಗ ಬೇಕು ಎಂದು ಸಿಂಬಿಯೋಸಿಸ್ ಅಂತರಾಷ್ಟ್ರೀಯ ಡೀಮ್ಡ್ ಕಾನೂನು ವಿಶ್ವವಿದ್ಯಾನಿಲಯ ಪುಣೆಯ ನಿರ್ದೇಶಕರಾದ ಡಾ. ಶಶಿಕಲಾ ಗುರುಪುರ ನುಡಿದರು ಅವರು ಸಮಗ್ರ ಗ್ರಾಮೀಣ ಆಶ್ರಮ, ಪೆರ್ನಾಲು, ಉಡುಪಿ ಜಿಲ್ಲೆ, ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ (ರಿ), ಕರ್ನಾಟಕ-ಕೇರಳ, ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ) ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ, ಕಾಸರಗೋಡು ಮತ್ತು ಗೋವಿಂದ ದಾಸ ಕಾಲೇಜು ಸುರತ್ಕಲ್‌ಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಬುಡಕಟ್ಟು ಯುವ ಬರಹಗಾರರ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿ ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ (ರಿ) ಕರ್ನಾಟಕ-ಕೇರಳದ ಅಧ್ಯಕ್ಷೆ ಸುಶೀಲ ನಾಡ ಅವರು ಚಳುವಳಿಗಳೊಂದಿಗೆ ಅನುಭವದ ಬರಹಗಳು ಮುಖ್ಯ ತಂದರು. ನಮ್ಮ ನ್ಯಾಯ ಕೂಟ ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ (ರಿ) ಕರ್ನಾಟಕ-ಕೇರಳದ ಅಧ್ಯಕ್ಷ ಬಾಲರಾಜ್ ಕೋಡಿಕಲ್ ಮಾತೃ ಸಂಸ್ಕೃತಿಯ ಮಹತ್ವವನ್ನು ದೃಷ್ಟಾಂತ ಕಥೆಗಳು ಮೂಲಕ ನಿರೂಪಿಸಿದರು. ಹಿಂದೂ ವಿದ್ಯಾದಾಯಿನಿ ಸಂಘ (ರಿ), ಸುರತ್ಕಲ್‌ನ ಕಾರ್ಯದರ್ಶಿ ಶ್ರೀರಂಗ ಹೆಚ್. ಶುಭ ಹಾರೈಸಿದರು.
ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ) ಅವಿಭಜಿತ ದಕ್ಷಿಣ ಕನ್ನಡ ಕಾಸರಗೋಡು ಇದರ ಅಧ್ಯಕ್ಷೆ ಡಾ. ಜ್ಯೋತಿ ಚೇಳಾೈರು ನೆಲದ ಪಿಸು ಮಾತುಗಳನ್ನು ಕೇಳಿ ನಮ್ಮ ಬರಹಗಳು ಗಟ್ಟಿಗೊಳ್ಳಲಿ. ಕೊರಗ ಭಾಷೆಯಲ್ಲಿಯೂ ಕೃತಿಗಳ ರಚನೆಯಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಗೋವಿಂದ ದಾಸ ಕಾಲೇಜಿನ ಪ್ರಾಚಾರ್ಯ ಪ್ರೊ.ಪಿ. ಕೃಷ್ಣಮೂರ್ತಿ ಮಾತನಾಡಿ ಮುಂದಿನ ದಿನಗಳಲ್ಲಿ ಬುಡಕಟ್ಟು ಭಾಷೆಗಳ ಮಹತ್ವದ ಕೃತಿಗಳು ಹೊರ ಬರಲು ಕಮ್ಮಟವು ಪ್ರೇರಣೆಯಾಗಿದೆ ಎಂದರು. ಕೊರಗ ಸಮುದಾಯದ ಜೊತೆಗೆ ಹತ್ತು ವರ್ಷಗಳ ಕಾಲ ನಡೆಸಿದ ನಲ್ಮೆ-ಬಲ್ಮೆ ಕಾರ್ಯಕ್ರವನ್ನು ಅವರು ನೆನಪಿಸಿಕೊಂಡರು. ಸಮಗ್ರ ಗ್ರಾಮೀಣ ಆಶ್ರಮ, ಪೆರ್ನಾಲು, ಉಡುಪಿ ಜಿಲ್ಲೆಯ ನಿರ್ದೇಶಕ ಅಶೋಕ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ದೇವಿಕಾ ನಾಗೇಶ್ ವಂದಿಸಿದರು ಪದ್ಮಾ ವೇಣೂರು ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ