ಕಸಾಪ ಮಂಗಳೂರು ತಾ. ಘಟಕದ ಅಭಿನಂದನೆ ಸ್ವೀಕರಿಸಿ ಡಾ. ಜೆ. ಪಿ. ತೊಟ್ಪೆತ್ತೋಡಿ ಅಭಿಮತ
ಕಾಸರಗೋಡು: ಕಾಸರಗೋಡಿನ ಮಣ್ಣಿನ ಕಣ ಕಣದಲ್ಲಿ ಕನ್ನಡಮ್ಮನ ಪ್ರೀತಿ ಹರಿಯುತ್ತಿದೆ ಮತ್ತು ಇಲ್ಲಿನ ಎಲ್ಲ ಕನ್ನಡ ಮನಸ್ಸುಗಳು ಒಂದಾಗಿ ತಾಯಿ ಭುವನೇಶ್ವರಿಯ ಸೇವೆಗೈಯುತ್ತಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತು- ಕಾಸರಗೋಡು ಗಡಿನಾಡು ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ನುಡಿದರು. ಕ ಸಾ ಪ ಮಂಗಳೂರು ತಾಲೂಕು ಘಟಕ ಏರ್ಪಡಿಸಿದ ಅಭಿನಂದನಾ ಸಭೆಯಲ್ಲಿ ಸಂಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸರಳ ಸಜ್ಜನ , ನುರಿತ ಸಂಘಟಕ ಎಸ್. ವಿ. ಭಟ್ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಹಿರಿಯ ಕಿರಿಯ ಮನಸ್ಸುಗಳೆಲ್ಲ ಸೇರಿಕೊಂಡು ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಅಲ್ಲಿನ ಎಲ್ಲ ಸಂಘಟನೆಗಳೊಂದಿಗೆ ನನಗೆ ನಿಕಟ ಸಂಪರ್ಕ ಇದೆ.ಎಲ್ಲರನ್ನೂ ಜೊತೆಗೂಡಿಸಿಕೊಂಡು ಕನ್ನಡಮ್ಮನ ಸೇವೆಯಲ್ಲಿ ತೊಡಗಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಕಸಾಪ ಕೇಂದ್ರ ಮಾರ್ಗದರ್ಶಿ ಸಮಿತಿ ಸದಸ್ಯ ಡಾ. ಮುರಲೀಮೋಹನ್ ಚೂಂತಾರು ಅಭಿನಂದನೆಯ ನುಡಿಗಳನ್ನಾಡಿದರು. ಘಟಕದ ಕೋಶಾಧಿಕಾರಿ ಎನ್. ಸುಬ್ರಾಯ ಭಟ್ , ಡಾ. ಜೆ. ಪಿ. ತೊಟ್ಟೆತ್ತೋಡಿಯವರ ಬಗೆಗೆ ಮಾತನಾಡಿದರು.
ಘಟಕದ ಅಧ್ಯಕ್ಷ ಡಾ. ಮಂಜುನಾಥ ಎಸ್. ರೇವಣ್ಕರ್ ಅಧ್ಯಕ್ಷತೆ ವಹಿಸಿ, ಸನ್ಮಾನಿಸಿ , ಶುಭ ಹಾರೈಸಿದರು.
ಗೌ. ಕಾರ್ಯದರ್ಶಿ ಗಣೇಶ್ ಪ್ರಸಾದ್ ಜೀ ಧನ್ಯವಾದವಿತ್ತರು. ಸಮಿತಿ ಸದಸ್ಯ ಎಂ. ಟಿ. ಭಟ್, ಮುರಳೀಧರ ಭಾರದ್ವಾಜ್, ಕ ಸಾ ಪ ಸದಸ್ಯರಾದ ಡಾ. ಕಿಶನ್ ರಾವ್ ಬಾಳಿಲ, ಎ.ಎಸ್.ಭಟ್, ಅನಂತ ಶರ್ಮ , ನಿಜಗುಣ ದೊಡ್ಡಮನಿ, ಶಶಿಧರ್, ರಾಜಶ್ರೀ ಮೋಹನ್, ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ