ಮಗುವಿನ ಭಾಷಾ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಬಹಳ ಅಮೂಲ್ಯ : ವಿಜಯಲಕ್ಷ್ಮಿ.ಹೆಚ್.ಕೆ.

Upayuktha
0



ಹಾಸನ : ತರಗತಿ ಪ್ರಕ್ರಿಯೆ ಉತ್ತಮಗೊಳ್ಳಲು ಭಾಷೆ ಬಹಳ ಅಗತ್ಯವಾಗಿದೆ. ಮಗುವಿನ ಭಾಷಾ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಬಹಳ ಅಮೂಲ್ಯವಾದದ್ದು ಎಂದು ಹಾಸನದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕರಾದ ವಿಜಯಲಕ್ಷ್ಮಿ .ಹೆಚ್. ಕೆ ರವರು ಹೇಳಿದರು.



ಸರಿಸುಮಾರು ಎರಡು ವರ್ಷಗಳಿಂದ ಪ್ರತಿ ಶನಿವಾರ ವಿದ್ಯಾ ಪ್ರವೇಶ ಮತ್ತು ನಲಿಕಲಿ ಜಿಲ್ಲಾ ತಂಡವು ಆಯೋಜಿಸಿ ಡಯಟ್ ವತಿಯಿಂದ ನಡೆಸಲಾಗುತ್ತಿರುವ ಆನ್ಲೈನ್ ವಿಶೇಷ ಮಾಹಿತಿ ಹಂಚಿಕೆ ಕಾರ್ಯಕ್ರಮದಲ್ಲಿ ಸಂಚಾಲಕರಾಗಿ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಅವರು ಮಗು ಚಿಕ್ಕ ಚಿಕ್ಕ ಪದಗಳನ್ನು ಕಲಿಯುವ ಮೂಲಕ ವಾಕ್ಯ ಜೋಡಣಾ ಕೌಶಲವನ್ನು ಹೊಂದಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಇಂಗ್ಲಿಷ್ ಆನ್ಲೈನ್ ಕ್ಲಾಸ್ ಗಳು ಉತ್ತಮವಾಗಿ ಮೂಡಿಬರುತ್ತವೆ. ಸಂಪನ್ಮೂಲ ವ್ಯಕ್ತಿಗಳು ಶ್ರಮವಹಿಸಿ, ಶ್ರದ್ಧೆ , ನಿಷ್ಠೆ , ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿರುವುದೇ ಈ ಆನ್ಲೈನ್ ಕ್ಲಾಸ್ ಗಳ ಯಶಸ್ವಿಗೆ ಕಾರಣವಾಗಿದೆ. ಶಿಕ್ಷಕರು ತರಗತಿಯಲ್ಲಿ ಕಲಿಸುವ ಭಾಷೆಯನ್ನು ಮಗು ತನ್ನ ದಿನನಿತ್ಯ ಜೀವನದಲ್ಲಿ ಅನ್ವಯಿಸಿಕೊಂಡು ಪರಿಶುದ್ಧವಾದ ವಾಕ್ಯಗಳೊಂದಿಗೆ ಮಾತನಾಡುವುದನ್ನು ಕಲಿಯಬೇಕು. ಮಗು ಶುದ್ಧವಾದ ಭಾಷೆಯನ್ನು ಮಾತನಾಡುವುದು ತಪ್ಪಿಲ್ಲದಂತೆ ಬರೆಯುವುದರಲ್ಲಿ ಶಿಕ್ಷಕರ ಪರಿಶ್ರಮ ಬಹಳಷ್ಟು ಇದೆ ಎಂದು ಹೇಳಿದರು.





ಜಿಜಿಜೆಸಿ ಪ್ರಧಾನ ಪ್ರೌಢಶಾಲೆಯ ಸಹ ಶಿಕ್ಷಕರಾದ ಕೆ.ಎನ್. ಚಿದಾನಂದ ರವರು ಸಂಪನ್ಮೂಲ ವ್ಯಕ್ತಿಯಾಗಿ ಆನ್ ಲೈನ್ ಕ್ಲಾಸ್ ನ್ನು ನಿರ್ವಹಣೆ ಮಾಡುತ್ತ ಶಿಕ್ಷಕರನ್ನು ಕುರಿತು  ಭಾಷೆ ಒಂದು ಸಂವಹನ ಮಾಧ್ಯಮವಾಗಿದ್ದು ಭಾಷೆಯ ಮೂಲಕವೇ ವ್ಯಕ್ತಿತ್ವವನ್ನು ಮಗು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಇಂಗ್ಲಿಷ್ ಕೂಡಾ ಒಂದು ಭಾಷೆಯಾಗಿದ್ದು ಅದನ್ನು ಕಲಿಯಲು ಮೂಲ ಮತ್ತು ಅತ್ಯಗತ್ಯ ಪದಗಳನ್ನು ಶಿಕ್ಷಕರು ಅನುಕೂಲಿಸಬೇಕು. ಇಂದಿನ ತರಗತಿಯಲ್ಲಿ ಪ್ರಶ್ನಾರ್ಥಕ ಪದಗಳ ಬಳಕೆ ಮತ್ತು ಸಹಾಯಕ ಕ್ರಿಯಾಪದಗಳ ಅರ್ಥ ಮತ್ತು ಅವುಗಳ ಬಳಕೆಯನ್ನು ಉದಾಹರಣೆಗಳೊಂದಿಗೆ ಅನುಕೂಲಿಸಲಾಯಿತು. ಪರಿಶುದ್ಧ ಭಾಷೆಯನ್ನು ಮಗು ಕಲಿಯಲು ಇಂಗ್ಲಿಷ್ ನ ಈ ಅಧ್ಯಾಯಗಳು ಬಹಳ ಪ್ರಮುಖವಾಗಿದೆ ಎಂದರು.





ಕಾರ್ಯಕ್ರಮದ ನಿರೂಪಣೆಯನ್ನು ಜಿ.ಹೆಚ್.ಪಿ.ಎಸ್, ಜಿ.ಶಂಕರನಹಳ್ಳಿ ಅರಸಿಕೆರೆ ತಾಲ್ಲೂಕಿನ ಶಿಕ್ಷಕರಾದ ಕೆ.ಎಸ್ ಮಧುಮತಿ ನಿರ್ವಹಿಸಿದರು. ಜಿ.ಹೆಚ್.ಪಿ.ಎಸ್, ಸುಂಡಹಳ್ಳಿ, ಚನ್ನರಾಯಪಟ್ಟಣ ತಾಲ್ಲೂಕಿನ ಶಿಕ್ಷಕರಾದ ಮಧು ರವರು ಎಲ್ಲರನ್ನು ಸ್ವಾಗತಿಸಿದರು. ಜಿ.ಎಲ್.ಪಿ.ಎಸ್, ಕಣಜನಹಳ್ಳಿ ಹಾಸನ ತಾಲ್ಲೂಕಿನ ಶಿಕ್ಷಕರಾದ ಲೋಕೇಶ್ ರವರು ತಾಂತ್ರಿಕವಾಗಿ ಆಯೋಜನೆ ಮಾಡಿದರು ಹಾಗೂ ಶಿಕ್ಷಕರಾದ ವಿಷ್ಣುವರ್ಧನ್ ಪ್ರಾರ್ಥಿಸಿದರು. ರಾಜ್ಯದ ವಿವಿಧ ತಾಲ್ಲೂಕುಗಳು ಹಾಗೂ ಜಿಲ್ಲೆಗಳಿಂದ ಶಿಕ್ಷಕರು ಆನ್ ಲೈನ್ ಟೆಲಿಗ್ರಾಂ ಗ್ರೂಪ್ ನಲ್ಲಿ ಭಾಗವಹಿಸಿದ್ದರು.





ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top