-ಪ್ರಣವ
ರಾಮಾಯಣ ಕಾಲಕ್ಕೆ ಅಯೋಧ್ಯೆ ಇಕ್ಷ್ವಾಕು ವಂಶದ ಧರ್ಮಭೀರು ರಾಜರಾಳಿದ ಮಹಾ ಸಾಮ್ರಾಜ್ಯವಾಗಿ ವರ್ಣಿಸಲ್ಪಟ್ಟಿದೆ. ರಾಮಾಯಣಾನಂತರವಂತೂ ಅಯೋಧ್ಯೆ ಸಂಪೂರ್ಣ ರಾಮಮಯವಾಗಿ ಕಥನ-ಕಾವ್ಯಗಳಲ್ಲಿ ವಿಜೃಂಭಿಸಿತು. ನಾಗರಿಕತೆಯ ಕಿರಣಗಳು ಭಾರತವಿಡೀ ಹಬ್ಬಿತ್ತು. ಭಾರತದ ರಾಜಧಾನಿಯಾಗಿ ಮೆರೆಯಿತು.
ದೇವರೇ ಜನ್ಮ ತಾಳಿದ ಅಯೋಧ್ಯೆ ಎಲ್ಲ ಧಾರ್ಮಿಕ ಕ್ಷೇತ್ರಗಳಿಗಿಂತ ಮುಕ್ತಿಧಾಮದ ಕ್ಷೇತ್ರ ಎಂಬ ವರ್ಣನೆಗಳಿವೆ. ಋಷಿಮುನಿಗಳಂತೂ ಅನ್ವಂತಿಕಾರಿ (ಉಜ್ಜಯಿನಿ) ಎಲ್ಲ ಗುಣಗಳೊಂದಿಗೆ ಪಾದ, ಕಾಂಚಿಪುರಿ ಕೃಷ್ಣನ ಸೊಂಟ, ದ್ವಾರಕಾಪುರಿ ಹೊಕ್ಕಳು ಮತ್ತು ಮಾಯಾಪುರಿ (ಹರಿದ್ವಾರ) ಹೃದಯ, ಕುತ್ತಿಗೆಯ ಭಾಗ ಮಥುರಾ ಮತ್ತು ಕಾಶಿಯೇ ಮೂಗು. ಅಯೋಧ್ಯಾಪುರಿ ದೇವರ ತಲೆ ಎಂದು ಹೇಳಿದ್ದಾರೆ.
ಅನಾದಿ ಅವಿನಾಶಿ ಅಯೋಧ್ಯಾ ಪುರಿ
ದೇವಾನಾಂಪೂರ್ಯೋಧ್ಯಾ ಎಂಬ ಮಂತ್ರ ವೇದದಲ್ಲಿ ಉಲ್ಲೇಖಿತವಿದೆ. ಅಯೋಧ್ಯಾ, ಮಥುರಾ, ಮಾಯಾ, ಕಾಶಿ, ಕಾಂಚಿ, ಅವಂತಿಕಾ, ಪುರಿ, ದ್ವಾರಾವತಿಚೈವ ಸಪ್ತೈತ ಮೋಕ್ಷ ದಾಯಿಕಾ ಎಂದು ಮೋಕ್ಷದಾಯಕ ನಗರಗಳನ್ನು ವರ್ಣಿಸಲಾಗಿದೆ. ಒಮ್ಮೆ ಶಿವ ಮತ್ತು ಪಾರ್ವತಿ ಕೈಲಾಸ ಪರ್ವತದಲ್ಲಿ ಕುಳಿತಿದ್ದಾಗ, ಪತಿ ಖುಷಿಯಿಂದಿರುವುದನ್ನು ಗಮನಿಸಿದ ಪಾರ್ವತಿಯು ಅಯೋಧ್ಯೆಯ ಪ್ರಾಮುಖ್ಯ ಹಾಗೂ ಇತಿಹಾಸದ ಬಗ್ಗೆ ಅರಿಯುವ ಇಂಗಿತ ವ್ಯಕ್ತಪಡಿಸಿದಳಂತೆ. ಆತ ಶಿವ ಪತ್ನಿಗೆ ಅಯೋಧ್ಯೆಯನ್ನು ವರ್ಣಿಸುತ್ತಾ, ನದಿಗಳಲ್ಲೇ ಅತ್ಯಂತ ಶ್ರೇಷ್ಠವಾದ ಸರಯೂ ನದಿ ದಡದಲ್ಲಿ ಅಯೋಧ್ಯಾ ಪುರಿ ಸ್ಥಾಪಿತವಾಗಿದೆ. ಅಯೋಧ್ಯೆಯ ವೈಭವವನ್ನು ವರ್ಣಿಸಲು ಶಾರದೆಗೂ ಸಾಧ್ಯವಿಲ್ಲವೇನೊ. ಬ್ರಹ್ಮ ಬುದ್ದಿವಂತಿಕೆಯಿಂದ, ವಿಷ್ಣುವು ತನ್ನ ಚಕ್ರದಿಂದ ಮತ್ತು ತಾನು ತ್ರಿಶೂಲದಿಂದ ಯಾವಾಗಲೂ ಅಯೋಧ್ಯೆಯನ್ನು ರಕ್ಷಿಸುತ್ತಿದ್ದೇವೆ. ಅಯೋಧ್ಯೆ ಎಂಬ ಹೆಸರಲ್ಲೇ ಬ್ರಹ್ಮ, ವಿಷ್ಣು ಮತ್ತು ಶಿವ ವಾಸವಾಗಿದ್ದಾರೆ ಎನ್ನುತ್ತಾನೆ.
ಪುರಾಣಗಳಲ್ಲೂ ಅಯೋಧ್ಯೆಯನ್ನು ಆರಾಧ್ಯ ಭಾವದಿಂದ ವಿವರಿಸಲಾಗಿದೆ. ದೇವ ವೈಕುಂಠನಾಥನಿಗೆ ಸೇರಿದ್ದ ಅಯೋಧ್ಯೆಯನ್ನು ಮಹಾರಾಜ ಮನುವು ಮಹಾದೇವ ಆತನಿಂದ ಪಡೆದು, ಸೃಷ್ಟಿ ಕ್ರಿಯೆಗೆ ಮೂಲವನ್ನಾಗಿಸಿದನು. ಅಯೋಧ್ಯೆಯನ್ನು ಭೂಮಿಯಲ್ಲಿ ಸ್ಥಾಪಿಸಿದ ನಂತರವೇ ಮನು ವಿಶ್ವದ ಸೃಷ್ಟಿ ಆರಂಭಿಸಿದ. ನಂತರ ಆತ ಇದನ್ನು ಇಕ್ಷ್ವಾಕುವಿಗೆ ನೀಡಿದನು. ದೇವರೇ ಜನ್ಮ ತಾಳಿದ ಅಯೋಧ್ಯೆ ಎಲ್ಲ ಧಾರ್ಮಿಕ ಕ್ಷೇತ್ರಗಳಿಗಿಂತ ಮುಕ್ತಿಧಾಮದ ಕ್ಷೇತ್ರ ಎಂಬ ವರ್ಣನೆಗಳಿವೆ. ಋಷಿಮುನಿಗಳಂತೂ ಅನ್ವಂತಿಕಾರಿ (ಉಜ್ಜಯಿನಿ) ಎಲ್ಲ ಗುಣಗಳೊಂದಿಗೆ ಪಾದ, ಕಾಂಚಿಪುರಿ ಕೃಷ್ಣನ ಸೊಂಟ, ದ್ವಾರಕಾಪುರಿ ಹೊಕ್ಕಳು ಮತ್ತು ಮಾಯಾಪುರಿ (ಹರಿದ್ವಾರ) ಹೃದಯ, ಕುತ್ತಿಗೆಯ ಭಾಗ ಮಥುರಾ ಮತ್ತು ಕಾಶಿಯೇ ಮೂಗು.
ಅಯೋಧ್ಯಾಪುರಿ ದೇವರ ತಲೆ ಎಂದು ಹೇಳಿದ್ದಾರೆ. ವಸಿಷ್ಟ ಸಂಹಿತೆಯಂತೂ ಅಯೋಧ್ಯೆಯನ್ನು ಹೀಗೆ ವರ್ಣಿಸುತ್ತದೆ:
ಅಯೋಧ್ಯಾ ಪುರಿಯು ಎಲ್ಲರಿಂದ ಆಶೀರ್ವದಿಸಲ್ಪಟ್ಟು, ದೇವ ಆನಂದಕಂದನ ಎದುರು ಚಿನ್ಮಯ ಆನಂದಿಯಾಗಿದೆ. ಇದನ್ನು ಎಂಟು ಹೆಸರುಗಳಿಂದ ಕರೆಯುತ್ತಾರೆ. ಹಿರಣ್ಯ, ಚಿನ್ಮಯ, ಜಯ, ಅಯೋಧ್ಯಾ, ನಂದಿನಿ, ಸತ್ಯರಜಿತ ಮತ್ತು ಅಪರಾಜಿತ ಎಂಬುದೇ ಆ ಎಂಟು ಹೆಸರುಗಳು.
ಈ ದೇಶದಲ್ಲಿ ಹುಟ್ಟಿದವರು ಅಗ್ರಜನ್ಮ ಎಂದು ಎಂದು ಕರೆಯಲ್ಪಡುತ್ತಾರೆ. ಅವನ ವ್ಯಕ್ತಿತ್ವದಿಂದ ಈ ಭೂಮಿಯ ಮಾನವರು ಶಿಕ್ಷಣ ಪಡೆಯುತ್ತಾರೆ. ಮಾನವ ಸೃಷ್ಟಿ ಮೊದಲು ಇಲ್ಲೇ ಆಗಿದ್ದು ಎಂದಿದೆ ಅಥರ್ವವೇದದಲ್ಲಿ ಅಯೋಧ್ಯೆ.
ಈ ಅಯೋಧ್ಯೆಯು ವೈಕುಂಠದ ಮೂಲ ಸ್ಥಾನವಾಗಿದೆ. ಯಾವುದರಿಂದ ವಿಶ್ವದ ಸೃಷ್ಟಿಯಾಯಿತೋ ಅದಕ್ಕಿಂತ ಇದು ಉತ್ತಮವಾಗಿದೆ. ರಜೋಗುಣದ ಮೂರು ಗುಣಗಳಾದ ಸತ್, ರಜ್, ತಮಗಳಿಂದ ಇದು ಮುಕ್ತವಾಗಿದೆ ಎಂದು ಅದನ್ನು ದೈವತ್ವಕ್ಕೇರಿಸಿದೆ. ರಾಮಾಯಣ ಕಾಲಕ್ಕೆ ಅಯೋಧ್ಯೆ ಇಕ್ಷ್ವಾಕು ವಂಶದ ಧರ್ಮಭೀರು ರಾಜರಾಳಿದ ಮಹಾ ಸಾಮ್ರಾಜ್ಯವಾಗಿ ವರ್ಣಿಸಲ್ಪಟ್ಟಿದೆ. ರಾಮಾಯಣಾನಂತರವಂತೂ ಅಯೋಧ್ಯೆ ಸಂಪೂರ್ಣ ರಾಮಮಯವಾಗಿ ಕಥನ-ಕಾವ್ಯಗಳಲ್ಲಿ ವಿಜೃಂಭಿಸಿತು. ನಾಗರಿಕತೆಯ ಕಿರಣಗಳು ಭಾರತವಿಡೀ ಹಬ್ಬಿತ್ತು.
ಭಾರತದ ರಾಜಧಾನಿಯಾಗಿ ಮೆರೆಯಿತು. ಇತಿಹಾಸಕಾರ ಮಾರ್ಷ್‍ಮನ್ ಬರೆಯುತ್ತಾರೆ, ಅಯೋಧ್ಯೆಯ ರಾಜ ಸಗರ ಎಂಬುವವನು ಪರಾಕ್ರಮಿ. ಸಮುದ್ರಕ್ಕೆ ಸಾಗರ ಎಂದು ಹೆಸರು ಬಂದಿದ್ದೇ ಆತನಿಂದ. ತನ್ನ ರಾಣಿ ಶೈವ್ಯಾ ಮತ್ತು ಮಗ ರೋಹಿತನ ಜತೆ ತನ್ನನ್ನೇ ತಾನು ಮಾರಿಕೊಂಡ ಸತ್ಯವಾದಿ ರಾಜಾ ಹರಿಶ್ಚಂದ್ರ ಜನಿಸಿದ ಭೂಮಿ ಅಯೋಧ್ಯೆ. ಜಗನ್ಮಾತೆ ಗಂಗೆಯನ್ನು ಭೂಮಿಗೆ ಬರುವಂತೆ ಮಾಡಿದ ರಾಜ ಭಗೀರಥ ಸಹ ಅಯೋಧ್ಯೆಯ ರಾಜನಾಗಿದ್ದವನು. ಅಯೋಧ್ಯೆ ಸಾಮ್ರಾಜ್ಯದ ರಾಜನಾಗಿದ್ದ ದಧೀಚಿ ದೇವತೆಗಳ ರಾಜ ಇಂದ್ರನಿಗೆ ಅಸ್ತ್ರವನ್ನು ತಯಾರಿಸುವುದಕ್ಕೆ ತನ್ನ ಮೂಳೆಯನ್ನೇ ದಾನಮಾಡಿದ್ದ. ಕ್ಯಾಪ್ಟನ್ ಟ್ರೈವರ್ ಹೇಳುತ್ತಾನೆ, ಮೂರು ಸಾವಿರ ವರ್ಷಗಳ ಹಿಂದೆಯೂ ಅದ್ಭುತ ಸಾಮ್ರಾಜ್ಯಗಳಿದ್ದವು. ಅವೆಲ್ಲದರ ಹೊರತಾಗಿ ನಮಗೆ ಕಾಣುವುದು ರಾಮ. ಅಯೋಧ್ಯೆಯನ್ನು ರಾಜಧಾನಿಯನ್ನಾಗಿಸಿಕೊಂಡು ಅಳ್ವಿಕೆ ಮಾಡಿದ ಆ ರಾಮಾಯಣದ ನಾಯಕ. ಮೇಜರ್ ಗ್ರಾಹಿ ಪೌಲ್ ಅವರು ತಮ್ಮ ಪುಸ್ತಕದಲ್ಲಿ ಬರೆಯುತ್ತಾರೆ, ನಮ್ಮ ಪೂರ್ವಜರು ಅರಣ್ಯಗಳಲ್ಲಿ ಎಲೆ ಕಟ್ಟಿಕೊಂಡು ಓಡಾಡುತ್ತಿದ್ದ ಸಮಯದಲ್ಲಿ, ಆರ್ಯಾವರ್ತದ ಮನುಷ್ಯ ಅತ್ಯಂತ ಹೆಚ್ಚು ಶಿಕ್ಷಣ ಪಡೆದವನಾಗಿದ್ದ. ಇತಿಹಾಸಕಾರ ತಾರ್ತನ್, ನೈಲ್ ನದಿಯ ಕಣಿವೆಯಲ್ಲಿ ಪಿರಮಿಡ್‍ಗಳಿಗೆ ನಾಗರಿಕತೆ ಸಿಗದಿದ್ದ ಸಂದರ್ಭದಲ್ಲಿ, ಗ್ರೀಸ್ ಮತ್ತು ರೋಮ್ ಯೂರೋಪ್ ನಾಗರಿಕತೆಯ ಕೇಂದ್ರ ಮತ್ತು ಬಹುಮುಖ್ಯ ಅಂಗ ಎಂದು ಹೇಳುವ ಸಂದರ್ಭದಲ್ಲಾಗಲೇ, ಭಾರತವು ಅತ್ಯಂತ ಸುಶಿಕ್ಷಿತ ಮತ್ತು ಸಂಪದ್ಭರಿತ ರಾಷ್ಟ್ರವಾಗಿತ್ತು. ಆಗ ಅದರ ರಾಜಧಾನಿ ಅಯೋಧ್ಯೆ ಆಗಿತ್ತು. ಪ್ರೆಮಿಯರ್ ಎಂಬುವನು 1917ರ ಏಪ್ರಿಲ್ 12ರಂದು ಅಮೆರಿಕನ್ ಲಂಚಿಯಾನ್ ಕ್ಲಬ್‍ನಲ್ಲಿ ಉಪನ್ಯಾಸ ನೀಡುತ್ತ, ಬ್ರಿಟಿಷ್ ವಿಸ್ಕೌಂಟ್ ಪಾಲ್ಯಾರ್ಂಸ್ಟ್ರಾನ್ ಕಾಲದಲ್ಲಿ ಎಲ್ಲರ ರಾಜರೂ ಸಂಸ್ಕಾರಹೀನರಾಗಿದ್ದಾಗ ಭಾರತ ನಾಗರಿಕತೆಯ ಶಿಖರವನ್ನೇರಿತ್ತು ಮತ್ತು ಅದರ ರಾಜಧಾನಿ ಅಯೋಧ್ಯೆ ಆಗಿತ್ತು ಎನ್ನುತ್ತಾನೆ. ಯೂರೋಪಿನ ವಿದ್ವಾಂಸ ಪ್ರೊ. ಕಲ್ಬುಕ್, ನಾಗರಿಕತೆ ಮತ್ತು ಜ್ಞಾನದ ಬೆಳಕು ಮೊದಲು ಈ ರಾಷ್ಟ್ರದಿಂದಲೇ ಹುಟ್ಟಿ ಅಲ್ಲಿಂದ ರೋಮ್ ಮತ್ತು ಯೂರೋಪಿನಾದ್ಯಂತ ಹಬ್ಬಿತ್ತು ಎಂದು ಬಣ್ಣಿಸಿದ.
ಸಿರಿವಂತೆ ಅಯೋಧ್ಯೆ
ಒಂದು ಕಾಲದಲ್ಲಿ ವಿಶ್ವದಲ್ಲಿ ಚಲಾವಣೆಯಲ್ಲಿದ್ದ ಎಲ್ಲ ಬೆಲೆಬಾಳುವ ಲೋಹದ ನಾಣ್ಯಗಳೆಲ್ಲವೂ ಭಾರತದಲ್ಲೇ ಉತ್ಪಾದನೆಯಾದವು ಎಂಬ ದಾಖಲೆಗಳಿವೆ. ವಿಶೇಷವೆಂದರೆ ವಿಶ್ವದಲ್ಲೇ ಮೊದಲ ನಾಣ್ಯ ಮುದ್ರಿಸುವ ಸ್ಥಳ ಇದ್ದಿದ್ದು ಈ ಅಯೋಧ್ಯೆಯಲ್ಲಿ! ಆ ಸಮಯದಲ್ಲಿ ಅಯೋಧ್ಯೆಯ ರಾಜನಾಗಿದ್ದವನು ಮಹಾರಾಜ ಪ್ರಥು. ಪ್ರಪಂಚದ ಮೊದಲ ಚಿನ್ನದ ನಾಣ್ಯ ನಿಷ್ಠ ಅಯೋಧ್ಯೆಯ ನಾಣ್ಯ ಮುದ್ರಣಾಲಯದಲ್ಲೇ ತಯಾರಾಗುತ್ತಿತ್ತು. ಆ ನಾಣ್ಯದ ವಿನ್ಯಾಸ, ರಚನೆ ಎಷ್ಟು ಉತ್ಕೃಷ್ಟವಾಗಿತ್ತೆಂದರೆ ಮಹಿಳೆಯರು ಅದನ್ನು ಪೋಣಿಸಿ ಸರವನ್ನಾಗಿ ಧರಿಸುತ್ತಿದ್ದರು! ನಿಷ್ಕ ಸುವರ್ಣ ಅಲ್ಲದೆ, ಧರಣ, ಕರ್ಪಾಯಕ, ಕಾಕಿಣಿ, ಪ್ರಾದ್, ಮಸಕ್, ಶತನಾಮ್ ಮುಂತಾದ ನಾಣ್ಯಗಳು ಅಯೋಧ್ಯೆಯಲ್ಲಿ ತಯಾರಾಗುತ್ತಿತ್ತು ಎಂದು ಉಪನಿಷತ್ತು, ಋಗ್ವೇದ, ಚಾಣಕ್ಯನ ಅರ್ಥಶಾಸ್ತ್ರ, ಬೌದ್ಧ ಗ್ರಂಥಗಳಲ್ಲಿ ಉಲ್ಲೇಖವಿದೆ. ಈ ನಾಣ್ಯಗಳಲ್ಲಿ ಮೇರು ಪರ್ವತ, ಸೂರ್ಯ, ಆದಿತ್ಯ ವಿಕ್ರಮ ಎಂಬ ಬರಹ, ತ್ರಿಶೂಲ, ಲಕ್ಷ್ಮೀ, ಬುದ್ಧ, ನಾಗ, ಶಿವಲಿಂಗ, ರಾಜಕುಮಾರ, ಯಜ್ಞಕುಂಡ, ಆನೆ, ಹದ್ದಿನ ಚಿತ್ರದ ಜತೆಗೆ ಚಂದ್ರಗುಪ್ತ ಎಂಬ ಹೆಸರುಗಳು ಇದ್ದಿದ್ದು ಪತ್ತೆಯಾಗಿದೆ. ಎಲ್ಲ ನಾಣ್ಯಗಳ ಮೇಲೆ ಪ್ರಾಕೃತ, ಖರೋಷ್ಟಿ, ಬ್ರಾಹ್ಮಿ ಮತ್ತು ಸಂಸ್ಕೃತ ಭಾಷೆಗಳಿವೆ.
ಅಯೋಧ್ಯೆ ಕುರಿತು ವೇದದಲ್ಲಿ ಉಲ್ಲೇಖವಿದೆ. ಅಯೋಧ್ಯೆ ಎಂಬ ಹೆಸರಲ್ಲೇ ಬ್ರಹ್ಮ, ವಿಷ್ಣು ಮತ್ತು ಶಿವ ವಾಸವಾಗಿದ್ದಾರೆ ಎಂದು ಶಿವನೇ ಹೇಳಿದ ಎಂದು ಪುರಾಣದಿಂದ ತಿಳಿದುಬರುತ್ತದೆ. ಅಯೋಧ್ಯೆಯನ್ನು ಭೂಮಿಯಲ್ಲಿ ಸ್ಥಾಪಿಸಿದ ನಂತರವೇ ಮನು ವಿಶ್ವದ ಸೃಷ್ಟಿ ಆರಂಭಿಸಿದ. ಅಯೋಧ್ಯಾ ಪುರಿಯು ಎಲ್ಲರಿಂದ ಆಶೀರ್ವದಿಸಲ್ಪಟ್ಟು, ದೇವ ಆನಂದಕಂದನ ಎದುರು ಚಿನ್ನಯ ಆನಂದಿಯಾಗಿದೆ ಎಂದು ವಶಿಷ್ಠ ಸಂಹಿತೆ ವರ್ಣಿಸುತ್ತದೆ. ಪ್ರೆಮಿಯರ್ ಎಂಬುವನು 1917ರ ಏಪ್ರಿಲ್ 12ರಂದು ಅಮೆರಿಕನ್ ಲಂಚಿಯಾನ್ ಕ್ಲಬ್‍ನಲ್ಲಿ ಉಪನ್ಯಾಸ ನೀಡುತ್ತ, ಬ್ರಿಟಿμï ವಿಸ್ಕೌಂಟ್ ಪಾಲ್ಯಾರ್ಂಸ್ಟ್ರಾನ್ ಕಾಲದಲ್ಲಿ ಎಲ್ಲರ ರಾಜರೂ ಸಂಸ್ಕಾರ ಹೀನರಾಗಿದ್ದಾಗ ಭಾರತ ನಾಗರಿಕತೆಯ ಶಿಖರವನ್ನೇರಿತ್ತು ಮತ್ತು ಅದರ ರಾಜಧಾನಿ ಅಯೋಧ್ಯೆ ಆಗಿತ್ತು ಎನ್ನುತ್ತಾನೆ.
ಅಯೋಧ್ಯೆಯಲ್ಲಿ ಬೌದ್ಧ ಕುರುಹು
ಇತಿಹಾಸಕಾರ ಜಾರ್ಜ್ ಸ್ಟಾರ್ಜನ್ ಚಾಲ್ಡಿಯನ್ನರು, ಬೇಬಿಲೋನಿಯನ್ನರು ಮತ್ತು ಕಾಲ್ವಿನ್ನರು ತಮ್ಮ ಧರ್ಮವನ್ನು ಹಾಗೂ ನಾಗರಿಕತೆಯನ್ನು ಒಪ್ಪಿಕೊಂಡದ್ದು ಭಾರತದಲ್ಲಿ ಇನ್ನು ಬೌದ್ಧ ಮತ ನೈಲ್ ನದಿಯನ್ನು ಮುಟ್ಟಿತ್ತು ಎಂದು ಬರೆಯುತ್ತಾನೆ. ಅಂತಹ ಬೌದ್ಧ ಮತದ ಸ್ಥಾಪಕ ಗೌತಮ ಬುದ್ಧನು ಅಯೋಧ್ಯೆಯ ರಾಜ ಶುದ್ಧೋದನನ ಮಗನಾಗಿದ್ದ ಎಂಬುದು ಗಮನಾರ್ಹ. ಹೀಗೆ ಅಯೋಧ್ಯೆ ಸನಾತನ ಪರಂಪರೆಯಲ್ಲಿ ಅಯೋಧ್ಯೆ ಮಹಾ ಸಾಮ್ರಾಜ್ಯದ ರಾಜಧಾನಿಯಾಗಿ, ಪವಿತ್ರ ತೀರ್ಥಕ್ಷೇತ್ರವಾಗಿ, ಆರಾಧನಾ ತಾಣವಾಗಿ, ಮೌಲ್ಯಗಳ ತವರೂರಾಗಿ ದಾಖಲಾಗಿದೆ. ವೇದಕಾಲದಿಂದ ತೊಡಗಿ ಯುಗಯುಗಗಳು ಕಳೆದರೂ ಅಯೋಧ್ಯೆಯ ಖ್ಯಾತಿ ನಾಶವಾಗದೇ ಇರುವುದು ಅದರ ಅವಿನಾಶಿ ಗುಣಕ್ಕೆ ಸಾಕ್ಷಿ. ಶೈವ, ವೈಷ್ಣವ, ಬೌದ್ಧ, ಜೈನ ಆಸ್ತಿಕರಿಗೆಲ್ಲರಿಗೂ ಅಯೋಧ್ಯೆ ಶ್ರದ್ಧಾಕೇಂದ್ರವಾಗಿರುವುದು ಅಲ್ಲಿನ ಪರಂಪರೆಯ ಗಟ್ಟಿತನವನ್ನು ತಿಳಿಸುತ್ತದೆ. ಭಾರತೀಯ ಪರಂಪರೆಯಲ್ಲಿ ಕಾಶಿ ಎಷ್ಟು ಪ್ರಜ್ವಲಿಸಿದೆಯೋ ಅಯೋಧ್ಯೆಯೂ ಅಷ್ಟೇ ಪ್ರಜ್ವಲಿಸಿದೆ. ಅಯೋಧ್ಯೆಯತ್ತ ಕಾಶ್ಮೀರವೂ, ಕನ್ಯಾಕುಮಾರಿಯೂ ದಿಟ್ಟಿಸಿ ನೋಡಿದೆ. ಅಯೋಧ್ಯೆಯ ರಾಮ ಜಗದ್ವಾಪಿಯಾಗಿದ್ದಾನೆ. ಕಾಲಕಾಲಕ್ಕೆ ಅಯೋಧ್ಯೆ ತಾನು ಅವಿನಾಶಿ ಎಂಬುದನ್ನು ಲೋಕಕ್ಕೆ ತೋರಿಸಿಕೊಡುತ್ತಲೇ ಇದೆ.
ರಾಮಮಂದಿರ ಹಿಂದುಗಳಿಗೆ ಮಹತ್ವದ್ದೇಕೆ?
ಹಿಂದೂ ಪುರಾಣಗಳ ಪ್ರಕಾರ ವಿಷ್ಣುವಿನ ಒಂಬತ್ತು ಅವತಾರಗಳಲ್ಲಿ ರಾಮನದ್ದು ಏಳನೇ ಅವತಾರ. ಅಧರ್ಮದ ವಿರುದ್ಧ ಧರ್ಮದ ಉತ್ಥಾನಕ್ಕಾಗಿ ಅವತಾರವೆತ್ತಿದ ಭಗವಂತ ರಾಮನ ರೂಪದಲ್ಲಿ ಸಂಪೂರ್ಣ ಮಾನವ ದೇಹವನ್ನು ಧರಿಸಿದ ಅಪೂರ್ವ ಪ್ರಸಂಗ ರಾಮನದ್ದು. ತ್ರೇತಾಯುಗದಲ್ಲಿ ಮಹಾಮೌಲ್ಯವೊಂದನ್ನು ಹುಟ್ಟುಹಾಕಿದ ರಾಮನ ಬದುಕು ಮುಂದಿನ ಯುಗಗಳಿಗೂ ಆದರ್ಶವಾಗಿ, ರಾಮಾಯಣ ಇಂದಿಗೂ ಬತ್ತಲಾರದ ಒರತೆಯಾಗಿ ಹರಿಯುತ್ತ ಬರುತ್ತಿದೆ. ತನ್ನ ಜೀವನದ ನಡೆಯುದ್ದಕ್ಕೂ ಮೌಲ್ಯಗಳನ್ನು ಪಸರಿಸುತ್ತ ಬಂದ ರಾಮನ ಜೀವನವನ್ನು ಪ್ರತಿ ಹಿಂದೂ ಗೌರವಪೂರ್ವಕವಾಗಿ ಆರಾಧಿಸುತ್ತಾನೆ. ಯುಗಯುಗಗಳು ಕಳೆದರೂ ರಾಮಾಯಣ ಮತ್ತು ರಾಮನ ಬದುಕು ಪೂಜಾರ್ಹವಾಗುತ್ತಾ ಬಂದಿವೆ. ಕೃಷ್ಣ ಬಾಳಿ ಬದುಕಿದ ಮಹಾಭಾರತದಲ್ಲೂ ರಾಮಾಯಣ ಮತ್ತು ರಾಮನ ಬದುಕಿನ ಆರಾಧನೆಯ ಉಲ್ಲೇಖವಿದೆ. ರಾಮನ ಸ್ಮರಣೆ ಮಾತ್ರದಿಂದಲೇ ಪುಣ್ಯ ಪ್ರಾಪ್ತವಾಗುವುದು ಎಂಬ ನಂಬಿಕೆ ಹಿಂದುಗಳಲ್ಲಿದೆ. ರಾಮನಿಂದ ರಾಮಾಯಣ ಎಂಬ ಮಹಾಕಾವ್ಯ ಪೂಜಾರ್ಹವಾದಂತೆ, ರಾಮನ ಪತ್ನಿ ಸೀತಾ ಮಾತೆಯೂ, ರಾಮನ ಸೋದರ ಲಕ್ಷ್ಮಣನಿಗೂ ಮಹಾಪುರುಷನ ಪಟ್ಟ ಲಭ್ಯವಾದಂತೆ, ರಾಮ ಬಂಟ ಹನುಮಂತನನ್ನೂ ದೈವತ್ವಕ್ಕೇರಿಸಿದ ಶಕ್ತಿ ರಾಮನಾಮದ್ದೆನ್ನುವ ಪರಂಪರೆಯನ್ನು ಭಾರತೀಯ ಸಮಾಜ ಅನಾದಿಯಿಂದಲೂ ನಂಬಿಕೊಂಡು ಬಂದಿದೆ. ರಾಮಾಯಣ ಎಂಬುದೇ ರಾಮನ ಆಯನ (ಪ್ರಯಾಣ)ವಾದ ಕಾರಣ ರಾಮ ಕುರುಹುಗಳು ದೇಶದ ಉದ್ದಗಲಕ್ಕೂ ಹರಡಿವೆ. ರಾಮ ಇಲ್ಲಿ ನಡೆದಿದ್ದ. ತಂಗಿದ್ದ, ಅರ್ಚಿಸಿದ್ದ ಎಂಬ ನಂಬಿಕೆಗಳು, ಸೀತೆ ಮುಡಿದ ಹೂವು, ಲಕ್ಷ್ಮಣ ಬಿಟ್ಟ ಬಾಣ, ಕುಳಿತ ಕಲ್ಲು... ಇತ್ಯಾದಿ ಸಂಕೇತಗಳನ್ನು ಯುಗ ಯುಗಗಳ ನಂತರ ಜನರು ಪೂಜಾ ಕ್ಷೇತ್ರವೆಂದೇ ಪರಿಗಣಿಸುತ್ತಾರೆ. ಗಡಿಗಳನ್ನು ಮೀರಿದ, ಭಾμÉಗಳಿಗೆ ಅತೀತನಾಗಿ ಬೆಳೆದ ವ್ಯಕ್ತಿತ್ವ ರಾಮನದ್ದು. ಹಾಗಾಗಿ ರಾಮ ಜನಿಸಿದ ಮಣ್ಣೆಂದರೆ ಹಿಂದುಗಳಿಗೆ ಸ್ವಾಭಿಮಾನದ ಸಂಕೇತವೂ ಹೌದು, ಆರಾಧನೆಯ ಭೂಮಿಯೂ ಹೌದು.
ಮೋಕ್ಷದಾಯಕ ದೇವಭೂಮಿ -ಅಯೋಧ್ಯೆ!
ಈ ಹೆಸರಿಗೇ ಒಂದು ಶಕ್ತಿ ಇದೆ. ಅತ್ಯಂತ ಆಪ್ಯಾಯಮಾನವಾದ ಹೆಸರು ಇದು. ಈ ಶಬ್ದದ ಹಿಂದೆ ಒಂದು ತಪಸ್ಸಿದೆ. ಒಂದು ಸಾಧನೆ ಇದೆ. ಆತ್ಮವಿಶ್ವಾಸ, ಸಾಹಸ ಮಹತ್ವಾಕಾಂಕ್ಷೆ, ಜಿಜ್ಞಾಸು ಪ್ರವೃತ್ತಿ ತುಂಬಿ ತುಳುಕುತ್ತಿದೆ ಈ ಶಬ್ದದ ಒಡಲಲ್ಲಿ. ಒಬ್ಬ ಮನುಷ್ಯನ ಮನಸ್ಸು, ಮಾತು, ಕೃತಿಗಳು ಒಂದಾದಾಗ ಅದರ ಪ್ರಭಾವ ಸುತ್ತಲಿನ ಜನಗಳ ಮೇಲೆ, ಅದನ್ನು ಮೀರಿ ಸುತ್ತಲಿನ ಪ್ರದೇಶದ ಮೇಲೆ ಹೇಗೆ ಆಗಬಹುದು ಮತ್ತು ಅದರ ಪ್ರಭಾವ ಯುಗ-ಯುಗಗಳವರೆಗೆ ಹೇಗೆ ಉಳಿಯಬಲ್ಲದು ಎಂಬುದಕ್ಕೆ ರಾಮನ ಜೀವನವೇ ಸಾಕ್ಷಿ. ರಾಮನ ಜೀವನದ ಪ್ರಭಾವ ಕೇವಲ ಜನಗಳ ಮೇಲೆ ಮಾತ್ರವಲ್ಲ, ಪಶು ಪಕ್ಷಿಗಳ ಮೇಲೆ, ಗಿಡಗಂಟಿಗಳ ಮೇಲೆ ಹೇಗೆ ಆಗುತ್ತದೆ ಎಂಬುದಕ್ಕೆ ಅಯೋಧ್ಯೆಯ ಬದುಕೇ ಸಾಕ್ಷಿ.
ಆದರ್ಶ ಬದುಕಿಗೆ ಒಂದು ಉಜ್ವಲ ಉದಾಹರಣೆ ರಾಮನ ಬದುಕು. ಅಯೋಧ್ಯೆಯ ಗಲ್ಲಿಗಳಲ್ಲಿ ಸುತ್ತಿದಾಗ, ಅಲ್ಲಿನ ಜನರೊಂದಿಗೆ ಹರಟಿದಾಗ, ಊರನ್ನೆಲ್ಲ ಬರಿಗಾಲಲ್ಲಿ ನಡೆದು ಅನುಭವಿಸಿದಾಗ, ಪವಿತ್ರ ಸರಯೂ ನದಿಯಲ್ಲಿ ಮಿಂದು ಎದ್ದಾಗ ಅಯೋಧ್ಯೆಯ ಮಹತ್ವ, ಮಹಿಮೆ ತಿಳಿಯಲು ಸಾಧ್ಯ. ಅಯೋಧ್ಯೆಯಲ್ಲಿ ಒಂದು ಮಿಂಚಿದೆ. ಜನಮಾನಸದಲ್ಲಿ ಒಂದು ಸಾಹಸ ಇದೆ. ಏನನ್ನೋ ದೊಡ್ಡದಾದ ಒಂದನ್ನು ಸಾಧಿಸುವ ಛಲವಿದೆ. ಮಹತ್ವಾಕಾಂಕ್ಷೆ ಇದೆ. ಜಿಜ್ಞಾಸುಗಳು ಇವರು. ಅಪಾಯವನ್ನು ಎದುರಿಸುವಲ್ಲಿ ಆನಂದವನ್ನು ಕಾಣುವವರು. ನಿರಂತರ ಜೀವನೋತ್ಸಾಹವನ್ನು ಉಳಿಸಿಕೊಂಡಿರುವವರು. ಆಳಕ್ಕಿಳಿದು ಹುಡುಕಿದಾಗ ಅಯೋಧ್ಯೆಯಲ್ಲಿ ಕಂಡುಬರುವ ವಿಶೇಷತೆ ಇದು. ಕೇವಲ ಭಾವುಕ ಯಾತ್ರಿಕರಾದರೆ ಅಥವಾ ಕೇವಲ ದರ್ಶಿಸುವ ಪ್ರವಾಸಿಗಳಾದರೆ ಇದು ಕಾಣಸಿಗದು. ಭಾವನೆ ಮತ್ತು ಚಿಕಿತ್ಸಕ ದೃಷ್ಟಿಯ ಸಂಯೋಗದಿಂದ ಮೂಡಿಬರುವ ಹೊಸ ದೃಷ್ಟಿಗೆ ಗೋಚರಿಸುವ ಸಂಗತಿ ಇದು.
ಮನುಸ್ಥಾಪಿತ ನಗರ
ಮನುವಿನಿಂದ ಸ್ಥಾಪಿತವಾದ ಪವಿತ್ರ ನಗರ. ಸರಯೂ ನದಿಯ ದಡದಲ್ಲಿ 144 ಕಿ.ಮೀ. ಉದ್ದ (12 ಯೋಜನ) 36 ಕಿ.ಮೀ. ಅಗಲ (3 ಯೋಜನ) ವಾಗಿದ್ದ ಮಹಾನಗರ. ಅನೇಕ ಶತಮಾನಗಳ ಕಾಲ ಸೂರ್ಯವಂಶಿ ರಾಜರ ರಾಜಧಾನಿಯಾಗಿತ್ತು ಅಯೋಧ್ಯೆ. ಮಂದಿರಗಳೇ ತುಂಬಿರುವ ನಗರ. ಮದುವೆ ಮಂಟಪಗಳು ಮಂದಿರಗಳೇ, ಜೈನರ ತೀರ್ಥಕ್ಷೇತ್ರವೂ ಹೌದು. 24 ತೀರ್ಥಂಕರರ ಪೈಕಿ ಐದು ಜನ ಇಲ್ಲಿಯೇ ಜನಿಸಿದ್ದು, ಮನುಷ್ಯ ವಿಕಾಸದ ಅತ್ಯುಚ್ಚ ಸ್ಥಿತಿ ‘ತೀರ್ಥಂಕರ ಅವಸ್ಥೆ. ಮೊದಲನೆಯವ ವೃಷಭನಾಥ. ಎರಡನೆಯವ ಅಜಿತನಾಥ. ನಾಲ್ಕನೆಯವ ಅಭಿನಂದನನಾಥ, ಐದನೆಯವ ತೀಥರ್ಂಕರ ಸುಮತಿನಾಥ. ಹದಿನಾಲ್ಕನೆಯ ಅನಂತನಾಥ ಹುಟ್ಟಿದ್ದು ಅಯೋಧ್ಯೆಯಲ್ಲಿ. ವಿಶೇಷವೆಂದರೆ ಈ ಐದೂ ಜನ ರಾಮನ ಇಕ್ಷ್ವಾಕು ವಂಶಕ್ಕೆ ಸೇರಿದವರು. ಇಂಥ ಮಹಿಮರ ಪಾದಧೂಳಿಯಿಂದ ಪುನೀತವಾದ ಕ್ಷೇತ್ರ ಅಯೋಧ್ಯೆ. ಹೀಗಾಗಿ ಈ ಭೂಮಿಯಲ್ಲಿ ಒಂದು ಶಕ್ತಿ ಇದೆ. ಒಂದು ಸಂವೇದನೆ ಇದೆ. ಭಕ್ತಿಯ ಭಾವ ಕಣಕಣದಲ್ಲಿ ತುಂಬಿದೆ.
ಕೋಸಲದ ರಾಜಧಾನಿ
ಕೋಸಲದ ರಾಜಧಾನಿಯಾಗಿದ್ದ ಕ್ಷೇತ್ರ. ಭೂಮಂಡಲ ಕಂಡ ಅನೇಕ ಪ್ರಸಿದ್ಧ ಪ್ರತಾಪೀ ಕ್ಷತ್ರಿಯರ ರಾಜಧಾನಿಯಾಗಿ ಕ್ಷಾತ್ರ ತೇಜಸ್ಸಿನಿಂದ ಕಂಗೊಳಿಸಿದ ಭೂಮಿ. ಈಗಿನ ಜನಮಾನಸದಲ್ಲಿ ಕಾಣುವ ಅಷ್ಟಿಷ್ಟು ಕ್ಷಾತ್ರತೇಜಕ್ಕೆ ಇದೂ ಕಾರಣವಿರಬಹುದು. ಏಳನೆಯ ಶತಮಾನದಲ್ಲಿ ಅಯೋಧ್ಯೆಗೆ ಬಂದಿದ್ದ ಚೀನಿ ಯಾತ್ರಿಕ ಹ್ಯೂಯನ್‍ತ್ಸ್ಯಾಂಗ್ ಬರೆದಿರುವಂತೆ 20 ಬೌದ್ಧ ಸ್ತೂಪಗಳು 3000 ಭಿಕ್ಷುಗಳು ಆಗ ಇಲ್ಲಿ ಇರುತ್ತಿದ್ದರು ಎಂದು ತಿಳಿದು ಬರುತ್ತದೆ. ಬೌದ್ಧರಿಗೂ ಇದು ತೀರ್ಥವೇ ಆಗಿದೆ. ಅಯೋಧ್ಯೆ ‘ಹರಿ ಧಾಮ'ವೂ ಹೌದು. ಏಳು ರೂಪಗಳಲ್ಲಿ ಹರಿಯು ಅಯೋಧ್ಯೆಯಲ್ಲಿ ಪ್ರಕಟವಾಗಿದ್ದಾನೆ. ಗುಪ್ತ ಹರಿ, ವಿಷ್ಣು ಹರಿ, ಚಕ್ರ ಹರಿ, ಪುಣ್ಯ ಹರಿ, ಚಂದ್ರ ಹರಿ, ಧರ್ಮ ಹರಿ ಮತ್ತು ಬಿಲ್ವ ಹರಿಯ ರೂಪದಲ್ಲಿ ಹರಿ ಪ್ರಕಟವಾಗಿರುವ ಕುರುಹುಗಳ ಉಲ್ಲೇಖ ಸಿಗುತ್ತದೆ.
-ಪ್ರಣವ ( 90356 18076)
ಲೇಖನದ ಎರಡನೇ ಭಾಗ ನಾಳೆಗೆ ಮುಂದುವರಿಯುವುದು...
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ