ಮಂಗಳೂರು: ರೋಹನ್ ಕಾರ್ಪೊರೇಷನ್ ಇಂದು (ಜ.20) ಮಂಗಳೂರಿನ ಸ್ಫೂರ್ತಿದಾಯಕ ಕಂಟೆಂಟ್ ರಚನಕಾರರನ್ನು ರೋಹನ್ ಕ್ರಿಯೇಟರ್ಸ್ ಮೀಟ್ 2024ರ ಸಲುವಾಗಿ ಒಂದೇ ಸೂರಿನಡಿ ಒಗ್ಗೂಡಿಸಿತು. ಎಜೆ ಗ್ರ್ಯಾಂಡ್ ಹೋಟೆಲ್‍ನಲ್ಲಿ 50ಕ್ಕೂ ಹೆಚ್ಚು ಉತ್ಸಾಹದಿಂದ ಕೂಡಿದ ಕಂಟೆಂಟ್ ರಚನಕಾರರು, ಬ್ಲಾಗರ್‌ಗಳು, ಛಾಯಾಗ್ರಾಹಕರು, ವಿಡಿಯೋಗ್ರಾಹಕರು, ಸಂಗೀತಕಾರರು ಮತ್ತು ಇತರರು ನೆಟ್‍ವರ್ಕ್, ಪರಿಣತಿ ಮತ್ತು ಸೃಜನಶೀಲತೆಯನ್ನು ಉಜ್ಜಿವಿಸಲು ಒಂದೇ ಸೂರಿನಡಿ ಸೇರಿದ್ದರು.
ಶರಣ್ ಚಿಲಿಂಬಿ, ಪ್ರಜ್ವಲ್ ಶೆಟ್ಟಿ, ಮೋಕ್ಷಿತ್ ಪೂಜಾರಿ, ಸಾಹಿಲ್ ರೈ, ಹೇರಾ ಪಿಂಟೊ, ಮಂಗಳೂರು ಮೇರಿ ಜಾನ್, ಸೌಜನ್ಯಾ ಹೆಗ್ಡೆ ಮತ್ತು ಸಾಮಾಜಿಕ ಮಾಧ್ಯಮದ ವಲಯದಲ್ಲಿನ ಇತರ ಹಲವಾರು ಪ್ರಮುಖ ವ್ಯಕ್ತಿಗಳ ಭಾಗವಹಿಸುವಿಕೆಯು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಮೌಲ್ಯವನ್ನು ನೀಡಿತು.
ಇಂದಿನ ಕ್ರಿಯೇಟಿವ್ ಕಂಟೆಂಟ್ ತಯಾರಕರು ಧಾರಣೆಗಳನ್ನು ರೂಪಿಸುವ ಮತ್ತು ಮಂಗಳೂರನ್ನು ಒಂದು ಯಶಸ್ವಿ ಬ್ರ್ಯಾಂಡ್ ಎಂದು ಉತ್ತೇಜಿಸುವಲ್ಲಿ ಗಮನಾರ್ಹವಾದ ಕೊಡುಗೆ ನೀಡುವ ಸಾಮಥ್ರ್ಯವನ್ನು ಹೊಂದಿದ್ದಾರೆ. ಮಂಗಳೂರು ಪ್ರದೇಶದ ದೃಷ್ಟಿಕೋನದೊಂದಿಗೆ ಹೊಂದಿಕೊಳ್ಳುವ ಯಾವುದೇ ಭರವಸೆಯ ಕಲ್ಪನೆಗಳಿಗೆ ರೋಹನ್ ಕಾರ್ಪೊರೇಷನ್ ಸಹಕರಿಸಲು ಮತ್ತು ಬೆಂಬಲಿಸಲು ಉತ್ಸುಕವಾಗಿದೆ ಎಂದು ರೋಹನ್ ಕಾರ್ಪೋರೇಷನ್‍ನ ವ್ಯವಸ್ಥಾಪಕ ನಿರ್ದೇಶಕರಾದ ರೋಹನ್ ಮೊಂತೇರೊ ಹೇಳಿದರು.
ಚರ್ಚೆಗಳು, ಆಕರ್ಷಕ ಚಟುವಟಿಕೆಗಳು ಮತ್ತು ಮೌಲ್ಯಯುತ ನೆಟ್‍ವರ್ಕಿಂಗ್ ಅವಕಾಶಗಳ ಈ ಕಾರ್ಯಕ್ರಮವು ರಚನಕಾರರು ಮತ್ತು ಭಾಗವಹಿಸುವವರ ಮೆಚ್ಚುಗೆ ಪಡೆಯಿತು. ರೋಹನ್ ಕ್ರಿಯೇಟರ್ಸ್ ಮೀಟ್ 2024 - ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಮತ್ತು ಕಾರ್ಪೊರೇಟ್ ಘಟಕಗಳ ನಡುವಿನ ಸಹಕಾರಕ್ಕೆ ಅವಕಾಶವನ್ನು ಒದಗಿಸಿತು ಹಾಗೂ ಮಂಗಳೂರನ್ನು ವಿಶಿಷ್ಟವಾದ ಬ್ರ್ಯಾಂಡ್ ಎಂದು ಉತ್ತೇಜಿಸುವ ಸೃಜನಶೀಲ ವಾತಾವರಣವನ್ನು ಬೆಳೆಸಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ