ಶಶಾಂಕ ಕುಳಮರ್ವ ಅವರಿಗೆ ಸುರತ್ಕಲ್‌ ಎನ್‌ಐಟಿಕೆಯಿಂದ ಪಿ.ಎಚ್.ಡಿ

Upayuktha
0


ಬೆಳ್ತಂಗಡಿ: ಶಶಾಂಕ ಕುಳಮರ್ವ ಅವರು ಮಂಡಿಸಿದ "ಎ ಸ್ಟಡಿ ಆನ್ ಅಸೈಕ್ಲಿಕ್ ಎಡ್ಜ್ ಕಲರಿಂಗ್ ಆಂಡ್ ಡಾಮಿನೇಷನ್ ನಂಬರ್ ಆಫ್ ಎ ಗ್ರಾಫ್" ಎಂಬ ಮಹಾಪ್ರಬಂಧಕ್ಕೆ ಸುರತ್ಕಲ್ ಎನ್.ಐ.ಟಿ.ಕೆ. (ನಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಯು ಪಿ.ಎಚ್.ಡಿ. ಪದವಿಯನ್ನು ನೀಡಿದೆ.


ಈ ಮೊದಲು ಶಶಾಂಕ ಕುಳಮರ್ವ ಅವರು ಚೆನ್ನೈಯ ಐ.ಐ.ಟಿ. (ಇಂಡಿಯನ್ ಇನಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಮದ್ರಾಸ್‌ನಿಂದ ಗಣಿತದಲ್ಲಿ ಎಮ್.ಎಸ್ಸಿ. ಪದವಿಯನ್ನು ಪಡೆದಿದ್ದಾರೆ. ಇದೀಗ ಎನ್.ಐ.ಟಿ.ಕೆ. ಯಿಂದ ಡಾ. ಸುರೇಶ್ ಎಂ. ಹೆಗಡೆ ಹಾಗೂ ಡಾ. ಮನು ಬಸವರಾಜು ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ. ಪದವಿಯನ್ನು ಪಡೆದಿದ್ದಾರೆ. ಪ್ರಸ್ತುತ ಬೆಂಗಳೂರಿನ ಐ.ಐ.ಎಸ್.ಸಿ. (ಇಂಡಿಯನ್ ಇನಸ್ಟಿಟ್ಯೂಟ್ ಆಫ್ ಸೈನ್ಸ್) ನ ಕಂಪ್ಯೂಟರ್ ಸೈನ್ಸ್ ಆಂಡ್ ಆಟೋಮೇಷನ್ ವಿಭಾಗದಲ್ಲಿ ಪೋಸ್ಟ್-ಡಾಕ್ಟೋರಲ್ ರಿಸರ್ಚ್ ಅಸೋಸಿಯೇಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.


ಇವರು ನಿವೃತ್ತ ಪ್ರಾಂಶುಪಾಲರಾದ ಪ್ರೊ ಗಣಪತಿ ಭಟ್ ಕುಳಮರ್ವ ಮತ್ತು ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕಿ ವಸಂತಿ ಕುಳಮರ್ವ ಅವರ ಪುತ್ರ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top