ಹಾಸನ: ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ, ಹಾಸನ ಮತ್ತು ಕರ್ನಾಟಕ ರಾಜ್ಯ ಬರಹಗಾರರ ಸಂಘ ರಾಜ್ಯ ಘಟಕ, ಹೂವಿನಡಗಲಿ ಸಂಯುಕ್ತ ಆಶ್ರಯದಲ್ಲಿ ಜ. 11 ಗುರುವಾರ ಸಂಜೆ 5.00ಗಂಟೆಗೆ ರಾಜ್ಯಮಟ್ಟದ ಸಂಕ್ರಾಂತಿ ಸಂಭ್ರಮ ಆನ್ಲೈನ್ ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಮಧು ನಾಯಕ್ ಲಂಬಾಣಿ, ರಾಜಾಧ್ಯಕ್ಷರು ವಹಿಸಿದ್ದರು. ಗೊರೂರು ಅನಂತರಾಜು, ಸಾಹಿತಿಗಳು ಹಾಗೂ ಜಿಲ್ಲಾಧ್ಯಕ್ಷರು ಕ.ರಾ.ಬ.ಸಂಘ, ಹಾಸನ ಜಿಲ್ಲಾ ಘಟಕ, ಚು.ಸಾ.ಪ ಚನ್ನರಾಯಪಟ್ಟಣ ಅಧ್ಯಕ್ಷರಾದ ಶಂಕರಾಚಾರ್, ಶುಭ ಮಂಗಳ, ಜಿಲ್ಲಾಧ್ಯಕ್ಷರು ಪ್ರ .ಸಾ.ಸಾ.ಅ.ಪ್ರ. ಹಾಸನ. ಸಿ. ಸುವರ್ಣ ಕೆ.ಟಿ.ಶಿವಪ್ರಸಾದ್. ಮಾಳೇಟಿರ ಸೀತಮ್ಮ ವಿವೇಕ್, ಚಿದಾನಂದ ಕೆ ಎನ್ ಸಾಹಿತಿಗಳು ಕೊಳಚಪ್ಪೆ ಗೋವಿಂದ ಭಟ್, ದೇವರಾಜ್ ಎಚ್ ಪಿ. ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರ, ಸಾ, ಸಾ, ಅ, ಪ್ರ,.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಹಿರಿಯ ಸಾಹಿತಿ ಸಾವಿತ್ರಿ ಬಿ ಗೌಡ. ಹಾಸನ. ಕಾಂತ್ ರಾಜು. ವಿಶ್ವಾಸ್ ಡಿ ಗೌಡ. ಹೇಮಂತ ಕುಮಾರ್. ಬಿ. ಚು ಸ ಪ ಬೇಲೂರು ಅಧ್ಯಕ್ಷರು. ಮಾಲತಿ ಮೇಲುಕೋಟೆ ಇವರು ಗೌರವ ಉಪಸ್ಥಿತಿಯಲ್ಲಿದ್ದರು. ಹೆಚ್.ಎಸ್. ಪ್ರತಿಮಾ ಹಾಸನ್ ಅವರ ನಿರೂಪಣೆ ನಾಗರತ್ನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸಂಕ್ರಾಂತಿ ಹಬ್ಬ ಕುರಿತಾಗಿ ವಾಚಿಸಿದ ಕವಿ ಕವಯಿತ್ರಿಯರಲ್ಲಿ ಪ್ರಥಮ ಬಹುಮಾನ ಬಸಮ್ಮ ಸಜ್ಜನ ಕಲಬುರ್ಗಿ ಡಾ. ಸುರೇಶ ನೆಗಳಗುಳಿ ಮಂಗಳೂರು, ಇವರು ಕ್ರಮವಾಗಿ ದ್ವಿತೀಯ ಬಹುಮಾನವನ್ನು ಶಾಹೀನಬಾನು ಎಂ ಬಳ್ಳಾರಿ ಧಾರವಾಡ. ತೃತೀಯ ಬಹುಮಾನ ಮಾರುತಿ. ರಾ. ಆಲೂರ ( ಸಂಶಿ ) ಧಾರವಾಡ ಜಿಲ್ಲೆ ದೇವರಾಜ್ ಬಸವನ ಹಳ್ಳಿ ಭಾಗವಹಿಸಿ ಬಹುಮಾನಿತರಾದರು.
ತೀರ್ಪುಗಾರರಾಗಿ ಹಾ ಮ ಸತೀಶ್ ಕವನ ರಚಿಸುವ ವಿಧಾನವನ್ನು, ತೀರ್ಪು ನೀಡಲು ಅಳವಡಿಸಿಕೊಂಡ ನಿಯಮ ಮತ್ತು ಮಕರ ಸಂಕ್ರಾಂತಿ ಕುರಿತು ಮಾತನಾಡಿದರು. 28 ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಸಿ ಸುವರ್ಣ, ಮಾಳೇಟಿರ ಸೀತಮ್ಮ ವಿವೇಕ್ ಅವರು ದೇಶದ ವಿವಿಧ ರಾಜ್ಯಗಳಲ್ಲಿ ಮಕರ ಸಂಕ್ರಾಂತಿ ಆಚರಿಸುವ ಕುರಿತಾಗಿ ಮಾತನಾಡಿದರು.
ಕ.ರಾ.ಬ.ಸಂ ರಾಜ್ಯಾಧ್ಯಕ್ಷರಾದ ಮಧುನಾಯ್ಕ್ ಅವರು ಕಾರ್ಯಕ್ರಮ ಪ್ರತಿ ಕ್ಷಣಗಳನ್ನು, ಪ್ರತಿಯೊಬ್ಬರ ವಸ್ತು ವಿಚಾರ ಸೆರೆ ಹಿಡಿದು ಮಾರ್ಗದರ್ಶನ ನೀಡಿ ಅಧ್ಯಕ್ಷಿಯ ಭಾಷಣದಲ್ಲಿ ವಾಚಿಸಿದ ಕವಿತೆಗಳನ್ನು ವಿಮರ್ಶಿಸಿದರು. ಗೊರೂರು ಅನಂತರಾಜು ಕಾರ್ಯಕ್ರಮ ಯಶಸ್ಸಿಗೆ ಕಾರಣಕರ್ತರಿಗೆ ಅಭಿನಂದಿಸಿದರು. ಸ್ವಾಗತ ದಿನೇಶ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಮಾಡಿದರು.. ನಾಡಿನ ಹಿರಿಯ ಸಿನಿಮಾ ಪತ್ರಕರ್ತರು ಲೇಖಕರು ಗಣೇಶ್ ಕಾಸರಗೋಡು ಅವರು ಹಾಸನಕ್ಕೆ ಆಗಮಿಸಿದ್ದು ಕಾರ್ಯಕ್ರಮದಲ್ಲಿ ತಮ್ಮ ವೃತ್ತಿ ಅನುಭವವನ್ನು ಹಂಚಿಕೊಂಡರು. ಇದೇ ಸಂದರ್ಭ ಗಣೇಶ್ ಕಾಸರಗೋಡು ದಂಪತಿಗಳು ಸನ್ಮಾನಿಸಿ ಗೌರವಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ