ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಚಾರಿತ್ರಿಕ ಸಂವಾದ ಮರು ಮಂಡನೆ

Upayuktha
0

ಮಹಾತ್ಮ ಮತ್ತು ಬಾಬಾಸಾಹೇಬ್ ಮಾತಿಗೆ ಮಾತು ಕೂಡಿಸಿದಾಗ ಯಶಸ್ವಿಗೊಂಡ ಕಾರ್ಯಾಗಾರ 


ಶಿವಮೊಗ್ಗ : ಮಾನಸ ಟ್ರಸ್ಟ್, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಚಿಂತನ-ಸ್ಪಂದನ ವೇದಿಕೆ, ಸಮಾಜಶಾಸ್ತ್ರ ವಿಭಾಗ, ಐ.ಕ್ಯೂ.ಎ.ಸಿ.ಘಟಕದ ವತಿಯಿಂದ "ಮಹಾತ್ಮ ಮತ್ತು ಬಾಬಾಸಾಹೇಬ್ ಮಾತಿಗೆ ಮಾತು ಕೂಡಿಸಿದಾಗ" ಚಾರಿತ್ರಿಕ ಸಂವಾದವೊಂದರ ಮರು ಮಂಡನೆ ಎಂಬ ಕಾರ್ಯಕ್ರಮವನ್ನು ಬಹುಮುಖಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.




ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶಯ ನುಡಿಗಳನ್ನಾಡಿದ ಮಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊಫೆಸರ್ ರಾಜಾರಾಮ್ ತೋಳ್ಪಾಡಿಯವರು ಮಹಾತ್ಮ ಹಾಗೂ ಬಾಬಾ ಸಾಹೇಬ್ ರವರ ನಡುವೆ ನಡೆದ ಸಂವಾದವು ಗಾಂಧೀಜಿಯವರು ಅಂಬೇಡ್ಕರ್ ರವರನ್ನು ಒಳಗೊಳ್ಳುವ ಸಂವಾದವಾಗಿತ್ತು ಎಂದರು. ಈ ಸಂವಾದವು ಸರಿ-ತಪ್ಪು ಎಂಬ ಸೀಮೆಯನ್ನು ಮೀರಿದ ಸಂವಾದ. ಎರಡು ವಿಭಿನ್ನ ಪ್ರಾತಿನಿಧ್ಯಗಳು ಮುಖಾಮುಖಿಯಾದ ಈ ಸಂವಾದವು ಇಂದಿಗೂ ಹಾಗೂ ಎಂದಿಗೂ ಹಲವು ಆಯಾಮಗಳ ಚಿಂತನೆಗೆ ಸತ್ಯದ ಉಗಮಕ್ಕೆ ಕಾರಣವಾಗಬಹುದಾದ ಸಂವಾದ ಎಂದರು. ಗಾಂಧೀಜಿ ಹಾಗೂ ಅಂಬೇಡ್ಕರ್ ಒಬ್ಬ ಗೆಲುವಿನ ಚಿಂತಕರಲ್ಲ ಅವರಿಬ್ಬರೂ ಮರುಸಂಘಟನೆಯ ಸಂಶೋಧಕರು ಎಂದರು. 




ಈ ಕಾರ್ಯಕ್ರಮದಲ್ಲಿ ಸಂವಾದವನ್ನು ಮರು ಮಂಡಿಸಿ ಪ್ರಸ್ತುತಪಡಿಸಿದ ತುಮಕೂರು ವಿಶ್ವವಿದ್ಯಾಲಯದ ಪ್ರೊಫೆಸರ್ ನಿತ್ಯಾನಂದ ಶೆಟ್ಟಿಯವರು ಹಾಗೂ ಸಂಶೋಧನಾರ್ಥಿ ಶ್ರೀ ಅಮರ್ ರವರು ಸಂವಾದವು ಮುನ್ನಡೆದ ಸ್ವರೂಪವನ್ನು ಪ್ರಸ್ತಾಪಿಸುತ್ತಾ ವಿದ್ಯಾರ್ಥಿಗಳ ಹಲವಾರು ಅನಿಸಿಕೆ ಹಾಗೂ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಿದರು. ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಕಮಲಾ ನೆಹರು ಸ್ಮಾರಕ ಮಹಿಳಾ ಕಾಲೇಜು, ಡಿವಿಎಸ್ ಪದವಿ ಕಾಲೇಜು, ಸಹ್ಯಾದ್ರಿ ಕಲಾ ಕಾಲೇಜು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಸಕ್ತ ವಿದ್ಯಾರ್ಥಿಗಳು ಈ ಕಾರ್ಯಗಾರದಲ್ಲಿ ಭಾಗವಹಿಸಿ ಮುಕ್ತವಾಗಿ ತಮ್ಮ ಪ್ರಶ್ನೆಗಳನ್ನು ಹಾಗೂ ಅಭಿಪ್ರಾಯಗಳನ್ನು ಹಂಚಿಕೊಂಡು ಕಾರ್ಯಕ್ರಮವನ್ನು ಸಾರ್ಥಕಗೊಳಿಸಿದರು. 




ಕೊನೆಯಲ್ಲಿ ಎಂಸಿಸಿಎಸ್ ನ ನಿರ್ದೇಶಕರಾದ ಡಾ.ರಾಜೇಂದ್ರ ಚೆನ್ನಿಯವರು ಅಧ್ಯಕ್ಷೀಯ ನುಡಿಗಳನ್ನಾಡುತ್ತಾ ಸಂಪೂರ್ಣ ಕಾರ್ಯಕ್ರಮದ ಸಾರಾಂಶ ಹಾಗೂ ಫಲಶ್ರುತಿಗಳನ್ನು ಸಭೆಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಮಾನಸ ಟ್ರಸ್ಟ್ ನ ನಿರ್ದೇಶಕರಾದ ಡಾ.ರಜನಿ.ಎ.ಪೈ, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಸುಕೀರ್ತಿ ಹಾಗೂ 60 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top