ಕಾರ್ಕಳ: ಕೌಡೂರು ಶ್ರೀನಿವಾಸ ಹೆಗ್ಡೆ ಆರೋಗ್ಯ ಕೇಂದ್ರ, ಬೈಲೂರು, ಮಂಗಳೂರಿನ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ಲಯನ್ಸ ಕ್ಲಬ್, ನೀರೆ ಬೈಲೂರು ಮತ್ತು ಅಂಧರ ಸೇವಾ ಸಂಘ, ದಕ್ಷಿಣ ಕನ್ನಡ ಇವರ ಜಂಟಿ ಆಶ್ರಯದಲ್ಲಿ ಜ.21 ರಂದು ಭಾನುವಾರ ಕಣ್ಣಿನ ತಪಾಸಣೆ, ಕಿವಿ, ಮೂಗು, ಗಂಟಲು, ಮಧುಮೇಹ, ರಕ್ತದೊತ್ತಡ, ಚರ್ಮರೋಗ ಹಾಗೂ ಸಾಮಾನ್ಯ ಕಾಯಿಲೆಗಳ ಉಚಿತ ವೈದ್ಯಕೀಯ ಶಿಬಿರವನ್ನು ಕೌಡೂರು ಶ್ರೀನಿವಾಸ ಹೆಗ್ಡೆ ಆರೋಗ್ಯ ಕೇಂದ್ರ, ಬೈಲೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ ಹೆಗ್ಡೆಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಎಸ್. ಮೂಡಿತ್ತಾಯ, ನಿಟ್ಟೆ ವಿಶ್ವವಿದ್ಯಾಲಯದ ಸಾಂಸ್ಥಿಕ ಹೊಣೆಗಾರಿಕ ವಿಭಾಗದ ಉಪಾಧ್ಯಕ್ಷ ಡಾ. ಸತಿೀಶ ಕುಮಾರ ಭಂಡಾರಿ, ಕ್ಯಾ. ಪ್ರಸನ್ನ ಹೆಗ್ಡೆ, ಸಿದ್ದು ಅಡ್ಯಂತಾಯ, ನೀರೆ ಬೈಲೂರಿನ ಲಯನ್ಸ ಕ್ಲಬ್ ಅಧ್ಯಕ್ಷ ಲ. ಸುಜಯ್ ಜತ್ತನ್ನ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಅಂಧರ ಸೇವಾ ಸಂಘದ ಕಾರ್ಯದರ್ಶಿ ರವೀಂದ್ರ ರಾವ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ ಹೆಗ್ಡೆಯವರು ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯದ ಅರಿವು ಬಹಳಷ್ಟು ಅವಶ್ಯ ಮತ್ತು ಅದರ ಸೌಲಭ್ಯ ಜನರಿಗೆ ಸಿಗುವಂತೆ ಮಾಡವುದು ಅತಿ ಪ್ರಾಮುಖ್ಯವೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ದಾನಿಗಳಾದ ಶ್ರೀಮತಿ. ಗೀತಾ ಹೆಗ್ಡೆ ಮತ್ತು ಡಾ. ಕೃಷ್ಣ ಕುಮಾರ ಹೆಗ್ಡೆಯವರನ್ನು ಸನ್ಮಾನಿಸಲಾಯಿತು. ಇವರೊಂದಿಗೆ ಏಳು ದಶಕಗಳು ಮೀರಿದ ವೈದ್ಯಕ್ಷೀಯ ಸೇವೆಯನ್ನು ಗ್ರಾಮೀಣ ಭಾಗದಲ್ಲಿ ನೀಡಿದ ಡಾ. ದಿನೇಶ್ಚಂದ್ರ ಹೆಗ್ಡೆಯವರನ್ನು ಸನ್ಮಾನಿಸಲಾಯಿತು.
ಕೌಡೂರು ಶ್ರೀನಿವಾಸ ಹೆಗ್ಡೆ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಮತ್ತು ಆಡಳಿತಾಧಿಕಾರಿ ಡಾ. ದಿನೇಶ್ಚಂದ್ರ ಹೆಗ್ಡೆಯವರು ಎಲ್ಲರನ್ನೂ ಸ್ವಾಗತಿಸಿ ಆರೋಗ್ಯ ಕೇಂದ್ರ ಸಾಗಿ ಬಂದ ಹಾದಿಯನ್ನು ಸಂಕ್ಷಿಪ್ತವಾಗಿ ಪ್ರಸ್ತಾವನೆಯಲ್ಲಿ ತಿಳಿಸಿದರು. ವೇದಿಕೆಯಲ್ಲಿದ್ದ ಅತಿಥಿಗಳು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರೀನಾ ಡಿಸೋಜಾ ವಂದಿಸಿದರು ಮತ್ತು ಡಾ. ಸಹನಾ ಮಾಬೆನ್ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


