ಅಡ್ಯನಡ್ಕ: ಅಡ್ಯನಡ್ಕ ಎಜುಕೇಶನಲ್ ಸೊಸೈಟಿ (ರಿ)ಯಿಂದ ನಡೆಸಲ್ಪಡುವ ಜನತಾ ವಿದ್ಯಾಸಂಸ್ಥೆಗಳು ಫೆ. 17ರಂದು ನಡೆಸಲು ತೀರ್ಮಾನಿಸಿದ ತಾಯಂದಿರ ಮಹಾ ಸಮಾವೇಶ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶನಿವಾರ (ಜ.20) ಜನತಾ ಪದವಿ ಪೂರ್ವ ಕಾಲೇಜಿನಲ್ಲಿ ಬಿಡುಗಡೆ ಮಾಡಲಾಯಿತು.
ಮಕ್ಕಳ ಬೆಳವಣಿಗೆಯಲ್ಲಿ ತಾಯಂದಿರ ಸಹಯೋಗ ಎಂಬ ವಿಷಯದಲ್ಲಿ ವಿಚಾರ ಸಂಕಿರಣ, ವಿವಿಧ ಗೋಷ್ಠಿಗಳು ಅಂದು ನಡೆಯಲಿವೆ.
ಆಮಂತ್ರಣ ಪತ್ರಿಕೆಯನ್ನು ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷ ಗೋವಿಂದ ಪ್ರಕಾಶ್ ಸಾಯ ಬಿಡುಗಡೆಗೊಳಿಸಿದರು. ಸಂಚಾಲಕರಾದ ಡಾ. ಅಶ್ವಿನಿ ಕೃಷ್ಣಮೂರ್ತಿ, ಆಡಳಿತಾಧಿಕಾರಿ ರಮೇಶ್ ಎಂ ಬಾಯಾರು, ಆಡಳಿತ ಮಂಡಳಿಯ ಸದಸ್ಯರುಗಳಾದ ಗೋವಿಂದರಾಯ ಶೆಣೈ, ಸಚ್ಚಿದಾನಂದ ಶಾಸ್ತ್ರಿ, ಚವರ್ಕಾಡು ಕೇಶವ ಭಟ್, ಸದಾಶಿವ ಹೊಳ್ಳ, ಅಬ್ದುಲ್ ಕರೀಂ, ಜನಾರ್ದನ ಭಟ್ ಅಮೈ, ಪ್ರಸನ್ನ ಕುಮಾರ್ ಮುಳಿಯಾಲ, ಜನತಾ ವಿದ್ಯಾಸಂಸ್ಥೆಗಳ ಮುಖ್ಯಸ್ಥರುಗಳಾದ ಶ್ರೀನಿವಾಸ್ ಡಿ, ಟಿ.ಆರ್. ನಾಯ್ಕ್, ಶ್ರೀಮತಿ ಹರಿಣಾಕ್ಷಿ ಎ., ಪ್ರಶಾಂತ್ ಮುಳಿಯ ಮತ್ತು ಜನತಾ ವಿದ್ಯಾಸಂಸ್ಥೆಗಳ ಬೋಧಕ ಹಾಗೂ ಬೋಧಕೇತರರೆಲ್ಲರೂ ಹಾಜರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ