ಮಾತೇ ಮುತ್ತು ಮಾತೇ ಮೃತ್ಯು

Upayuktha
0



ಮಾಜ ಮತ್ತು ಸಂಬಂಧಿಕ  ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಹೆಣ್ಣನ್ನು ಬಿಂಬಿಸುವ ದೃಷ್ಟಿಕೋನದಲ್ಲಿ ಎಂದರೆ ತಪ್ಪಲ್ಲ. ಸಮಾಜ ಹೆಣ್ಣಿನ ಬಗ್ಗೆ ಮಾತಾಡಿದರೆ ನಾವು ಏನು ಅಂತ ನಮಗೆ ಗೊತ್ತು ಎಂದು ಮಾತು ಬಾರದಂತಿರಬಹುದು, ಆದರೆ ನಮ್ಮವರೇ ನಮ್ಮ ಬಗ್ಗೆ ಇಲ್ಲ ಸಲ್ಲದ ಆಪಾದನೆ ಹೊರಿಸಿ ಮಾತುಗಳನ್ನಾಡಿದರೆ ಆ ಹೆಣ್ಣಿನ ನೋವು ಯಾವ ಶತ್ರುವಿಗೂ ಬೇಡ. 



ಹೆಣ್ಣಿನ ಬಗ್ಗೆ ಮಾತನಾಡುವಾಗ ಹತ್ತು ಬಾರಿ ಯೋಚಿಸಬೇಕು. ಯಾಕೆಂದರೆ ನಮ್ಮ ಮನೆಯ ಮಗಳಂತೆ ಪ್ರತಿಯೊಂದು ಹೆಣ್ಣಿಗೂ ಮನಸ್ಸಿದೆ. ಸಮಾಜ ಹೇಗೆ ಅಂದ್ರೆ,  ನಾವು ಹೇಗಿದ್ರು ಮಾತನಾಡುತ್ತದೆ. ಆದರೆ ಆ ಮಾತು ಇನ್ನೊಬ್ಬರನ್ನು ನೋಯಿಸದಂತಿರಲಿ,  ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎಂಬ ಗಾದೆ ಮಾತಿದೆ. 



ಮಾತು ಆಡಿದವರಿಗೆ ಮರೆಯಬಹುದು ಆದರೆ ಕೇಳಿಸಿಕೊಂಡವರಿಗಲ್ಲ, ಹೆಣ್ಣಿನ ಭಾವನೆ ಅರ್ಥ ಮಾಡಿಕೊಂಡು ಬದುಕಿದರೆ ಅಷ್ಟೇ ಸಾಕು. ಮಾತೇ ಮುತ್ತು ಮಾತೇ ಮೃತ್ಯು. ಒಂದು ಮಾತು ಒಂದು ಹೆಣ್ಣಿನ ಜೀವನ ನಾಶ ಮಾಡುತ್ತೆ ಅಂದರೆ ಮಾತು ಬಾರದಂತೆ ಇರುವುದು ಒಳ್ಳೆಯದು ಅಲ್ಲವೇ ನಾನು ಕಂಡ ಅನುಭವಗಳಿಂದ ಈ ಟಿಪ್ಪಣಿ ಬರೆದಿರುವೆ. ಹೆಣ್ಣು ತನ್ನ ಮಿತಿ ಮೀರಿ ನಡೆದುಕೊಂಡಾಗ ಹೇಳಿ ಆದರೆ ತಪ್ಪೇ ಮಾಡದೇ ದೂಷನೇ ಮಾಡಬೇಡಿ ಅವಳ ಜೀವನದೊಂದಿಗೆ ಜಂಗಮ ವಾಣಿಯಲ್ಲಿನ ಆಟದಂತೆ ಆಡಬೇಡಿ ಹೆಣ್ಣು ಸಹನಾ ಮೂರ್ತಿ ಎಂದು ಹೇಳುತ್ತಾರೆ ಆದರೆ ಅವಳು ಸಹನೆ ಕಳೆದುಕೊಳ್ಳುವ ಸ್ಥಿತಿ ತರಬೇಡಿ. 

 



-ಹರ್ಷಿತಾ ವಿ. ಪಿ 

ವಿವೇಕಾನಂದರ ಸ್ವಾಯತ್ತ ಮಹಾವಿದ್ಯಾಲಯ 

ನೆಹರು ನಗರ ಪುತ್ತೂರು



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   






Post a Comment

0 Comments
Post a Comment (0)
To Top