ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಜನವರಿ 26 ಶುಕ್ರವಾರ ಸಂಜೆ ಕೆಂಗೇರಿ ಉಪನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಯುವ ಗಾಯಕಿ ಕು|| ಮನಸ್ವಿ ಕಶ್ಯಪ್ ಗಾಯನ ಸೇವೆ ನಡೆಸಿಕೊಟ್ಟರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಹರಿದಾಸರು ಹಾಗೂ ಯತಿಗಳನ್ನು ಸ್ಮರಿಸುವ "ಗುರುಮಧ್ವರಾಯರಿಗೆ ನಮೋ ನಮೋ" ಎಂಬ ಕೃತಿಯೊಂದಿಗೆ ಆರಂಭಿಸಿ, "ವೃಂದಾವನ ನೋಡಿರೋ" ಮತ್ತು "ತೇರಾನೇರಿ ಮೆರೆದು ಬರುವ" ಎಂಬ ಎರಡು ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಮೇಲಿನ ಕೃತಿಗಳನ್ನು ಪ್ರಸ್ತುತಪಡಿಸಿ ನಂತರ ಮನೋಭಿಮಾನಿ ಶ್ರೀ ರುದ್ರದೇವರನ್ನು ಕುರಿತ "ಎಂಥಾ ಚೆಲುವಗೆ ಮಗಳನು ಕೊಟ್ಟನು", ಶ್ರೀ ವಾಯುದೇವರನ್ನು ಕುರಿತ "ಘಟಿಕಾಚಲದಿ ನಿಂತ", ತದನಂತರ "ಭಾಗ್ಯದ ಲಕ್ಷ್ಮಿ ಬಾರಮ್ಮ" ಎಂದು ಶ್ರೀ ಲಕ್ಷ್ಮೀದೇವಿಯನ್ನು ಕರೆಯುತ್ತಾ, ಭಗವಂತನ ಕುರಿತಾದ "ವೇಣುನಾದ ಬಾರೋ ವೆಂಕಟರಮಣನೆ ಬಾರೋ", "ರಂಗ ಬಂದ ಬೃಂದಾವನದಲಿ ನಿಂದ", "ಎಂಥವನೆಂಥವನೆ", "ರಾಮ ಭಜನೆ ಮಾಡೋ" ಮುಂತಾದ ಇನ್ನೂ ಹಲವಾರು ಹಾಡುಗಳು ಹಾಡಿ, ಅಂದಿನ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು.
ಇವರ ಗಾಯನಕ್ಕೆ ವಿ|| ಅಮಿತ್ ಶರ್ಮಾ ಕೀ-ಬೋಡ್೯ ವಾದನದಲ್ಲಿ ಹಾಗೂ ವಿ|| ಸರ್ವೋತ್ತಮ ತಬಲಾ ವಾದನದಲ್ಲಿ ಸಾಥ್ ನೀಡಿದರು. ಕಾರ್ಯಕ್ರಮದಲ್ಲಿ ಅನೇಕ ದಾಸಸಾಹಿತ್ಯಾಭಿಮಾನಿಗಳು, ಶ್ರೀ ಮಠದ ಗೌರವ ಅಧ್ಯಕ್ಷರಾದ ಡಾ|| ಸುಧೀಂದ್ರ ಕುಮಾರ್, ಮಠದ ಸಿಬ್ಬಂದಿಗಳು, ಭಾಗವಹಿಸಿದ್ದರು. TTD HDPP ಸಂಚಾಲಕರಾದ ಡಾ|| ಪಿ. ಭುಜಂಗರಾವ್ ವಂದನಾರ್ಪಣೆ ಮಾಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


