ಮಕರ ಸಂಕ್ರಾಂತಿ ಸುಖ ದುಃಖಗಳ ಸಂಕೇತ

Upayuktha
0



ಕರ ಸಂಕ್ರಾಂತಿಯು ಜನವರಿ ತಿಂಗಳಲ್ಲಿ ಆಚರಿಸಲಾಗುವಂತಹ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಇದನ್ನೂ ಮುಖ್ಯವಾಗಿ ಜನವರಿ 14-15ರಂದು ಆಚರಿಸಲಾಗುತ್ತದೆ. ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಸೂರ್ಯ ಮಕರ ರಾಶಿಯನ್ನು ಪ್ರವೇಶಿಸಿದಾಗ‌ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ.ಈ ಹಬ್ಬವನ್ನು ಭಾರತಾದ್ಯಂತ ಆಚರಿಸಲಾಗುತ್ತದೆ.




ಸಂಕ್ರಾಂತಿ ಹಬ್ಬದ ಮಹತ್ವ: ಭಾರತವನ್ನು ಹೊರತು ಪಡಿಸಿ ನೇಪಾಳ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಮಲೇಷಿಯಾದಂತಹ ವಿವಿಧ ದೇಶಗಳಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ.ಹಬ್ಬದ ದಿನ ಜನರು ತಮ್ಮ ಸಂಬಂಧಿಕರ ಮನೆಗೆ ಹೋಗುತ್ತಾರೆ.ಮತ್ತು ಸಿಹಿ ತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.ಮಕರ ಎಂದರೆ ಹತ್ತನೇ ರಾಶಿ ಚಕ್ರ.




ಮಕರ ಸಂಕ್ರಾಂತಿ ಎಂದರೆ ಬದಲಾವಣೆ. ಜ್ಯೋತಿಷ್ಯದ ಪ್ರಕಾರ ಮಕರ ರಾಶಿಯನ್ನು ಆಳುವವನು ಶನೀಶ್ವರ. ಇವನು ಸೂರ್ಯಪುತ್ರ.ಈ ದಿನ ಸೂರ್ಯನು ಮಗನ ಆಡಳಿತಕೊಳ್ಳಪಟ್ಟ ಮನೆಯನ್ನು ಪ್ರವೇಶಿಸುತ್ತಾನೆ.ನಮಗೆ ತಿಳಿದಂತೆ ಸೂರ್ಯ ಮತ್ತು ಶನಿ ಸ್ವತಃ ವಿರುದ್ಧವಾದವರು. ಆದರೆ ಈ ದಿನ ಒಂದಾಗುವುದು ವಿಶೇಷವಾಗಿದೆ. ಈ ಸಂದರ್ಭವು ಜನರಿಗೆ ದ್ವೇಷ ಮತ್ತು ಜಗಳ ಬಿಟ್ಟು ಒಂದಾಗಿ ಎನ್ನುವ ಸಂದೇಶವನ್ನು ನೀಡುತ್ತದೆ.




ಯಾವುದೇ ಹಳೆಯ ಕಹಿ ನೆನಪು ಹಾಗೂ ಅಸಮಾಧಾನ ಬಿಟ್ಟು ಜಗತ್ತಿನ ಸೌಂದರ್ಯ ಆಸ್ವಾದಿಸುವ ಹಾಗೂ ಪ್ರೀತಿಸುವ ಅವಕಾಶಗಳು ಈ ಸಂಕ್ರಾಂತಿಯು ಹೊತ್ತು ತರುತ್ತದೆ. ಸಂಕ್ರಾಂತಿ ವಿಶೇಷ ಎಳ್ಳು ಬೆಲ್ಲ ಇದು ಸುಖ ದುಖಃಗಳ ಸಂಕೇತವಾಗಿದೆ . ಜೀವನದಲ್ಲಿ ಸುಖ ದುಖಃ ಎರಡು ಇದೆ . ಅದನ್ನು ಸ್ವೀಕರಿಸಿ ಎದುರಿಸಬೇಕು ಎಂಬುದು ಸಂಕ್ರಾಂತಿ ವಿಶೇಷವಾಗಿದೆ.




ಮಕರ ಸಂಕ್ರಾಂತಿ ಹಬ್ಬದ ಆಚರಣಾ ಮಾರ್ಗಗಳು: ಈ ಮಂಗಳಕರ ದಿನದಂದು ಜನರು ಪವಿತ್ರ ನದಿಗಳಲ್ಲಿ ಸ್ನಾನ ಮಾಡುವ ಮೂಲಕ ತಮ್ಮ ಪಾಪಗಳನ್ನು ತೊಳೆದುಕೊಳ್ಳುತ್ತಾರೆ.ಮತ್ತು ಸೂರ್ಯ ದೇವರನ್ನು ಪೂಜಿಸುತ್ತಾರೆ.ಅವರ ಆಶೀರ್ವಾದವನ್ನು ಪಡೆಯುತ್ತಾರೆ. ಜನರು ಕೂಡ ಈ ದಿನದಂದು ಅಂದರೆ ಸಂಕ್ರಾಂತಿ ಹಬ್ಬದಂದು ದಾನ ಮಾಡುತ್ತಾರೆ.ದಾನವನ್ನು ಮಾಡುವುದರಿಂದ ಸೂರ್ಯ ದೇವನು ಪ್ರಸನ್ನನಾಗುತ್ತಾನೆ ಮತ್ತು ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.




ಆರೋಗ್ಯದ ದೃಷ್ಟಿಯಿಂದ ದಕ್ಷಿಣ ಗೋಳಾರ್ಧದಿಂದ ಉತ್ತರ ಗೋಳಾರ್ಧಕ್ಕೆ ಪ್ರವೇಶ ಮಾಡುವುದನ್ನು ಮಂಗಳಕರ ಎಂದು ಪರಿಗಣಿಸಲಾಗುತ್ತದೆ.ಇದರೊಂದಿಗೆ; ದಿನಗಳ ಸಮಯ ಬದಲಾಗಲು ಪ್ರಾರಂಭಿಸುತ್ತದೆ. ಸಂಕ್ರಾಂತಿ ಹಬ್ಬವು ಸಂತೋಷ ಮತ್ತು ಉಲ್ಲಾ ಸವನ್ನು ಸಹ ತರುತ್ತದೆ. ಮಧ್ಯಾಹ್ನದ ವೇಳೆಗೆ ಹೊಸ ಬೆಳೆಯ ಅಕ್ಕಿಯಿಂದ ಖಿಚಡಿ (ಪೊಂಗಲ್) ತಯಾರಿಸುತ್ತಾರೆ.ಇದರ ಜೊತೆಗೆ ಎಳ್ಳು , ಬೆಲ್ಲ ಇತ್ಯಾದಿಗಳಿಂದ ಮಾಡಿದ ಪದಾರ್ಥಗಳನ್ನು ಮತ್ತು ಸಿಹಿ ತಿಂಡಿಗಳನ್ನು ತಿಂದು ಆಚರಿಸಲಾಗುತ್ತದೆ.




ಎಳ್ಳು ಬೆಲ್ಲವನ್ನು ಮನೆಯ ಬಂಧು ಮಿತ್ರರಿಗೆ ಕೊಡುವುದು ಹಬ್ಬದ ವಿಶೇಷತೆಯಾಗಿದೆ."ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು" ಎಂಬುದು ಹಬ್ಬದ ಸಂದರ್ಭದಲ್ಲಿ ಕೇಳಿ ಬರುವ ಘೋಷ ವಾಕ್ಯವಾಗಿದೆ. ನಮ್ಮ ಮನೆಯಲ್ಲಿ ಹಬ್ಬದ ಹಿಂದಿನ ದಿನ ಬದನೆಕಾಯಿ ಹಾಗೂ ಆಲೂಗಡ್ಡೆ ಪಲ್ಯ, ಬೇಯಿಸಿದ ಅವರೆಕಾಳು, ಬೇಳೆ ಸಾಂಬಾರ್ ಮತ್ತು ರಸಂ ನಂತರ ಅನ್ನವನ್ನು ಮಾಡಿ ಇತ್ಯಾದಿ ಪದಾರ್ಥಗಳನ್ನು ಸೇರಿಸಿ ದೇವರಿಗೆ ನೈವೇದ್ಯ ಇಡಲಾಗುತ್ತದೆ.




ಮರುದಿನ ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಹೊಸ ವಸ್ತ್ರ ಧರಿಸಿ ಮನೆಯ ಮುಂದಿನ ಅಂಗಳದಲ್ಲಿ ರಂಗೋಲಿ ಬಿಡಿಸಿ, ಬಾಗಿಲಿನಲ್ಲಿ ಮಾವಿನ ತೋರಣವನ್ನು ಕಟ್ಟಿ ದೇವರಿಗೆ ಪೂಜೆ ಸಲ್ಲಿಸಿ ನಂತರ ಸೂರ್ಯ ದೇವರಿಗೆ ನಮಸ್ಕಾರ ಮಾಡಿ ಮನೆಯ ಹೊರಗಡೆ ಹೊಲೆಯನ್ನು ಇಟ್ಟಿಗೆಯಿಂದ ಮಾಡಿ ಸೂರ್ಯ ದೇವರಿಗೆ ಕಾಣುವ ಹಾಗೆ ಪೊಂಗಲ್  ಮಾಡಲಾಗುತ್ತದೆ.ನಂತರ ವಿವಿಧ ಹಣ್ಣು ಹಂಪಲು ಗಳಿಂದ ಪಂಚಾಮೃತ ಮಾಡಿ ದೇವರಿಗೆ ಅರ್ಪಿಸಿ ನಂತರ ಪೂಜೆ ಮಾಡಿ ಅಕ್ಕಿ ಪಕ್ಕದ ಮನೆಯವರಿಗೆ ಪ್ರಸಾದವನ್ನು ಕೊಟ್ಟು ಆನಂತರ ನಾವು ಸೇವಿಸುತ್ತೇವೆ. ಇದು ನಮ್ಮ ಮನೆಯಲ್ಲಿ ಮಾಡುವ ಸಂಕ್ರಾಂತಿ ಹಬ್ಬದ ವಿಶೇಷತೆಯಾಗಿದೆ.


- ಅಕ್ಷತ ಎಲ್

ವಿವೇಕಾನಂದರ ಸ್ವಾಯತ್ತ ಮಹಾವಿದ್ಯಾಲಯ 

ನೆಹರು ನಗರ ಪುತ್ತೂರು



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top