
ಮೈಸೂರು: ಶ್ರೀ ಜಗಜ್ಯೋತಿ ಬಸವೇಶ್ವರ ಕಲಾಬಳಗದಿಂದ ಜ .21 ರಂದು ಭಾನುವಾರ ಬೆ.11ಕ್ಕೆ ಮೈಸೂರಿನ ಪುರಭವನದಲ್ಲಿ ಮಂಡ್ಯದ ಶ್ರೀ ವಜ್ರೇಶ್ವರಿ ಡ್ರಾಮಾ ಸೀನರಿಯ ರಂಗಸಜ್ಜಿಕೆಯಲ್ಲಿ ಲೋಕೇಶ್ ಕೂರ್ಗಳ್ಳಿ ನಿರ್ದೇಶನದಲ್ಲಿ ಶ್ರೀ ಕೃಷ್ಣ ರಾಯಭಾರ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.
ಕಾರ್ಯಕ್ರಮವನ್ನು ನಾಟಕ ರಚನಕಾರ ಗಣೇಶ್ ಉದ್ಘಾಟಿಸಲಿದ್ದು ರಂಗರತ್ನಾಕರ ಸಂಘದ ಕಾರ್ಯದರ್ಶಿ ಹೆಚ್.ಎಸ್. ಗೋವಿಂದಗೌಡರು ಅಧ್ಯಕ್ಷತೆ ವಹಿಸುವರು. ಹಲವು ಗಣ್ಯರು, ಕಲಾವಿದರು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಲಿದ್ದು ನಾಟಕ ರಚನಕಾರರು ಎಸ್.ಎಸ್.ಪುಟ್ಟೇಗೌಡರು ಶ್ರೀ ಕೃಷ್ಣನ ಪಾತ್ರ, ವೈ.ಎಸ್.ಶಿವಕುಮಾರ್ ದುರ್ಯೋಧನ ಪಾತ್ರ ನಿರ್ವಹಿಸುವರು.
ಹಾಸನದ ರಾಣಿ ಚರಾಶ್ರೀ ಅರ್ಜುನ, ಪುಟ್ಟಬಸಮ್ಮ-ಭೀಷ್ಮ. ಜಯಮ್ಮ ರಮೇಶ್ ದ್ರೋಣನ ಪಾತ್ರದಲ್ಲಿ ನಟಿಸುವರು. ನಾಟಕ ನಿರ್ದೇಶಕರು ವಿ.ಕಿರಗಸೂರು ರಾಜಪ್ಪ-ಸೂತ್ರದಾರಿ. ರೋಹಿತ್ ಕೆ.ಆರ್.ಪೇಟೆ-ಸಾತ್ಯಕಿ. ಭೀಮ- ಕಿಕ್ಕೇರಿ ರವಿಕುಮಾರ್ ಸಿ.ಎಸ್. ಅಭಿಮನ್ಯು- ಮೈಸೂರು ಸತೀಶ್ ಬಿ. ದುಶ್ಯಾಸನ-ರೇವಣ್ಣ, ಗೊರೂರು, ಧೃತರಾಷ್ಟ್ರ-ಹಾಸನದ ವಿನೇಶ್, ವಿಧುರ- ಹುಣಸೂರು ಮಲ್ಲೇಗೌಡರು, ಕರ್ಣ-ಬಳೇ ಅತ್ತಿಗುಪ್ಪೆ ಹಾಲಿನ ಶಿವಕುಮಾರ್. ಶಕುನಿ-ಮಂಡ್ಯ ಕೆಂಚೇಗೌಡರು, ಸೈಂಧವನಾಗಿ ಜಗದೀಶ್ ನಟಿಸುವರು. ನಾಟಕದ ಸ್ತ್ರೀ ಪಾತ್ರ, ನೃತ್ಯ ಬೆಂಗಳೂರಿನ ಶೋಭಾರೈ. ಮೈಸೂರಿನ ದೀಪಿಕಾ, ಮಂಡ್ಯದ ಶೋಭಾ ನಿಭಾಯಿಸುವರು. ಬೆ.10ಕ್ಕೆ ಹಾಸನದ ಬೆನಕ ಕಲಾಸೌರಭ ಮಹಿಳಾ ಸಂಘದವರು ಯೋಗ ನೃತ್ಯ ಜಾನಪದ ನೃತ್ಯ ಪ್ರದರ್ಶನ ನಿರೂಪಣೆ ಗೊರೂರು ಅನಂತರಾಜು ನಡೆಸಿಕೊಡುವರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

