ಜ.14-15: ಗೋವಿಂದದಾಸ ಕಾಲೇಜಿನಲ್ಲಿ 'ನೀನಾಸಂ ತಿರುಗಾಟ ನಾಟಕೋತ್ಸವ -2024'

Upayuktha
0


ಸುರತ್ಕಲ್‍ : ಗೋವಿಂದ ದಾಸ ಕಾಲೇಜು, ಸುರತ್ಕಲ್‍ನ ಯಕ್ಷಗಾನ ಮತ್ತು ಲಲಿತಕಲಾ ಅಧ್ಯಯನ ಕೇಂದ್ರದ ವತಿಯಿಂದ ಪ್ರೊ. ಯಚ್.ಜಿ.ಕೆ. ರಾವ್ ದತ್ತಿನಿಧಿ, ವಿದ್ಯಾದಾಯಿನೀ ಹಳೆವಿದ್ಯಾರ್ಥಿ ಸಂಘ, ಆಂತರಿಕ ಗುಣಮಟ್ಟ ಖಾತರಿ ಕೋಶ, ಗೋವಿಂದ ದಾಸ ಕಾಲೇಜು, ಬಿ.ಎ.ಎಸ್.ಎಫ್, ಬಾಳ, ಸುರತ್ಕಲ್ 1982ರ ವಿಜ್ಞಾನ ತಂಡದ ದತ್ತಿನಿಧಿ, ಗೋವಿಂದ ದಾಸ ಕಾಲೇಜು, ಸುರತ್ಕಲ್, ರಕ್ಷಕ ಶಿಕ್ಷಕ ಸಂಘ ಗೋವಿಂದ ದಾಸ ಕಾಲೇಜು, ಗೋವಿಂದ ದಾಸ ಕಾಲೇಜು ಅಲ್ಯುಮ್ನಿ ಅಸೋಸಿಯೇಶನ್‍ಗಳ ಸಹಭಾಗಿತ್ವದಲ್ಲಿ ನೀನಾಸಂ ತಿರುಗಾಟ ನಾಟಕೋತ್ಸವ -2024 ಜನವರಿ 14 ಮತ್ತು  15ರಂದು ಗೋವಿಂದ ದಾಸ ಕಾಲೇಜಿನ ರಂಗ ಮಂದಿರದಲ್ಲಿ ನಡೆಯಲಿದೆ.




ಜನವರಿ 14, 2024ರಂದು ಚಂದ್ರಶೇಖರ ಕಂಬಾರರ ರಚನೆಯ, ಕೆ.ಜಿ. ಕೃಷ್ಣಮೂರ್ತಿ ನಿರ್ದೇಶನದ ಹುಲಿಯ ನೆರಳು ನಾಟಕ ಮತ್ತು ಜನವರಿ 15, 2024ರಂದು ಲೂಯಿ ನ ಕೋಶಿ ರಚನೆಯ, ನಟರಾಜ ಹೊನ್ನವಳ್ಳಿಯವರು ಕನ್ನಡಕ್ಕೆ ಭಾಷಾಂತರಿಸಿದ, ಶ್ವೇತಾರಾಣಿ ಎಚ್. ಕೆ. ನಿರ್ದೇಶನದ ಆ ಲಯ ಈ ಲಯ ನಾಟಕವು ಪ್ರದರ್ಶನಗೊಳ್ಳಲಿದೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 



إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top