ಜಗತ್ತಿನಲ್ಲಿ ನಮ್ಮದು ಕಾಲಿಗೆ ಚಕ್ರ ಕಟ್ಟಿ ಓಡುವ ವೇಗದ ಬದುಕು. ಹಿಂದೆ-ಮುಂದೆ ನೋಡುವಂತಿಲ್ಲ. ಒಳ್ಳೆದು ಕೆಟ್ಟದು ಯೋಚಿಸುವಂತಿಲ್ಲ. ಇಲ್ಲ ಅನ್ನೋದಕ್ಕಿಂತ ಅದಕ್ಕೆ ಟೈಮೇ ಇಲ್ಲ ಅನ್ನಬಹುದೇನೋ. ಸ್ಪರ್ಧೆಯಲ್ಲೇ ತುಂಬಿಹೋಗಿರುವ ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ಎದುರಾಳಿಗಳೇ...ನಮ್ಮವರನ್ನೂ ಸೇರಿಸಿ...
ಜಗತ್ತು ಅದೆಷ್ಟು ವಿಚಿತ್ರ ಅಲ್ವಾ....ನಮ್ಮಲ್ಲಿ ಹಣ, ಅಂತಸ್ತು, ಆಭರಣ, ಆಸ್ತಿ, ಅಧಿಕಾರ ಎಲ್ಲವೂ ಇದ್ದಾಗ ಭಾವನೆಯಲ್ಲೇ ನಮ್ಮನ್ನು ಕರಗಿಸಿ ನಮ್ಮವರಾಗುತ್ತಾರೆ. ಏನಿಲ್ಲದಿದ್ದಾಗ ಅವರನ್ನು ಅವಲಂಬಿಸದೇ ಇದ್ರೂ ಕೂಡಾ ನನ್ ಕುತ್ತಿಗೆಗೆ ಯಾಕೆ ಜೋತು ಬಿತ್ತು ಸಾಯ್ತೀಯಾ ಅಂತ ಪ್ರಶ್ನೆ ಮಾಡ್ತಾರೆ. ಅಚ್ಚರಿ ಆದ್ರೂ ಕಟು ಸತ್ಯ ಕಣ್ರೀ....ಸಂಬಂಧಗಳೇ ಹಾಗೆ ಎಲ್ಲವೂ ಇದ್ದಾಗ ನಮ್ಮನ್ನು ಅತ್ಯಂತ ಹತ್ತಿರದವರಂತೆ ಟ್ರೀಟ್ ಮಾಡ್ತಾರೆ, ಇತರರಿಗೂ ಪರಿಚಯಿಸ್ತಾರೆ. ಏನೂ ಇಲ್ಲದೆ ಸೋತು ಹೋದಾಗ ಉಪಕಾರ ಬಿಡಿ ಸಾಂತ್ವನ ಹೇಳೋಕೂ ಯಾರೂ ಬರಲ್ಲ. ನಿಮಗೂ ಇಂತಹ ಅನುಭವ ಆಗಿರಬಹುದು. ನೀನು ಯಾವುದಾದರೂ ದೊಡ್ಡ ಹುದ್ದೆಗೆ, ಉತ್ತಮ ವೇತನದ ವೃತ್ತಿಗೆ ಕಾಲಿಡುತ್ತಿದ್ದಿ ಅಂತಂದ್ರೆ ನಿನ್ನ ಸ್ವಂತ ಸಂಬಂಧಿಗಳೇ ಶಾಪ ಹಾಕ್ತಾರೆ. ಒಳ್ಳೆತನಕ್ಕೆ ಗೌರವ ಕೊಟ್ಟು ಒಳ್ಳೆಯದಾಗಲು ಬಯಸೋ ಮನಸ್ಸು ನಮ್ ಸುತ್ತ ಇರೋ ವ್ಯಕ್ತಿಗಳಲ್ಲೇ ಇಲ್ಲ ಅಂತಂದ್ರೆ ಸಮಾಜದಿಂದ ನಾವು ಹೇಗೆ ಅಪೇಕ್ಷಿಸೋದು ಸಾಧ್ಯ ಹೇಳಿ.
ಆದರೆ ಒಂದಂತೂ ಸತ್ಯ. ಜೀವನದಲ್ಲಿ ಯಾರು ಅತ್ಯಂತ ನೋವು, ಕಷ್ಟ, ಸವಾಲು, ಅವಮಾನಗಳನ್ನು ಎದುರಿಸಿ ಒಂಟಿಯಾಗಿ ಬೆಳೆದಿರ್ತಾರೋ ಅವರು ಒಂಟಿಯಾಗಿಯೇ ನಿಂತು ಬದುಕಿನ ದಡ ಸೇರ್ತಾರೆ. ಸಾಧನೆ ಮಾಡುತ್ತಾರೆ. ಆದರೆ ಈ ಎಲ್ಲದರ ನಡುವೆ ಒಂದಂತೂ ನೆನಪಿರಲಿ....ನಮ್ಮಲ್ಲಿ ಏನೂ ಇಲ್ಲದಾಗ ನಮ್ಮವರೂ ಯಾರೂ ಇರೋದಿಲ್ಲ.....
- ಅರ್ಪಿತಾ ಕುಂದರ್
ಮಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


