ಹೊಸವರ್ಷದ ಹೊಸ್ತಿಲಲ್ಲಿ ನವ ಸಂಕಲ್ಪ ನಮ್ಮದಾಗಲಿ

Upayuktha
0


ಕಾಲ ಸರಿದಂತೆ ವರುಷಗಳು ಅದೇಷ್ಟೂ ಬೇಗ ಸರಿದು ಹೋಗುತ್ತದೆ,ಮತ್ತೆ ಈ ವರುಷ ಬದಲಾಗಿ  ಹಳೆ ನೆನಪುಗಳೊಂದಿಗೆ ಹೊಸ ಕನಸಿನ ಪಯಣ ಆರಂಭಿಸಲು ಹೊಸವರುಷ ಮತ್ತೆ ಕಾಲಿಡುತ್ತಿದೆ. ಹೀಗೆ ಕಳೆದ ವರುಷದ ಪುಟಗಳಲ್ಲಿ ನಮ್ಮ ನೋವು ನಲಿವಿನ ನೆನಪುಗಳು ಭದ್ರವಾಗಿ ಉಳಿಯುವುದಷ್ಟೇ ವಾಸ್ತವವಾಗಿರುತ್ತದೆ. ಕಾಲದ ವಿಪರೀತ ವೇಗವು ಕ್ಷಣಿಕವೆನಿಸುತಿರುವಂತೆ ಈ ವರುಷದ  ಕೊನೆಯ ಪುಟಕ್ಕೇ ವಿರಾಮ ನೀಡಿ ಪುಟವನ್ನು ತಿರುಚಿದಾಗ  ಮತ್ತೆ ಹೊಸ ಕನಸುಗಳ ಬರವಣಿಗೆಯ ಹೊಸ ಪುಸ್ತಕವನ್ನು ತೆರೆಯಲೇ ಬೇಕು ಅಲ್ಲವೇ.


ಸಮಯ ಅದೆಷ್ಟು ಬೇಗ ಕಳೆದು ಹೋಯಿತು ಅನ್ನುವಷ್ಟರಲ್ಲಿ ಒಂದು ವರ್ಷ ಹೇಗೆ ಕಳೆದು ಹೋಯಿತು ಎಂಬ ಅಂದಾಜು ಅರಿವಿಗೆ ಸಿಗದಷ್ಟು ಸಮಯವು  ಓಡುತ್ತಿದೆ.ಬದಲಾವಣೆ ಜಗದ ನಿಯಮ ಅನ್ನುವ ರೀತಿಯಲ್ಲಿ ಬದಲಾಗುವ ಪ್ರತಿಯೊಂದು ಹಂತಗಳಲ್ಲಿ ನಾವು ಏನಾದರೂ ಬದಲಾವಣೆ ಕಾಣ ಬೇಕು, ಏನನ್ನಾದರೂ ಮಾಡಬೇಕು ಎಂಬ  ಬಲವಾದ ಕನಸು ನಮ್ಮಲ್ಲಿ ಹೊರ ಹೊಮ್ಮಲೇ ಬೇಕು. ಈ ಒಂದು ವರುಷದಲ್ಲಿ ನಮ್ಮ ಕನಸುಗಳ ಹಾದಿಯಲ್ಲಿ ಯಾವ ರೀತಿಯಲ್ಲಿ ಬದಲಾವಣೆ ತಂದಿದೆ, ಮುಂದಿನ ಹಂತ ಹೇಗೆ ಸಾಗಬೇಕು ಎಂಬುದರ ಅರಿವು ಸ್ಪಷ್ಟವಾಗಿದ್ದರೆ ಯಶಸ್ಸು ನಮ್ಮದಾಗುವುದು ಖಂಡಿತ.


ವರುಷ ಕಳೆದಂತೆ ಹೊಸ ರೂಪಗಳೊಂದಿಗೆ ಕ್ಯಾಲೆಂಡರ್ಗಳು ಬದಲಾಗಿ ಬಿಡುತ್ತದೆ ಆದರೆ ನಮ್ಮ ಕನಸು ಗುರಿಗಳಲ್ಲ.ಆಡಂಭರದ ಆಚರಣೆಗಳು, ವಿಭಿನ್ನ ರೀತಿಯಲ್ಲಿ ಹೊಸ ವರು ಷವನ್ನು ಸ್ವಾಗತಿಸುವ ರೀತಿಯ ಅಬ್ಬರವಾದರೆ, ಭವಿಷ್ಯದ ಕನಸುಗಳ ನಿರ್ಮಾಣ ವು ಹೊಸ ವರುಷದ ತಿರುವು ಎಂದು ಭಾವಿಸಿ ಮುನ್ನಡೆದಾಗ ಹೊಸದು ಎಂಬ ಪದವು ಅರ್ಥ ಪಡೆದಂತೆಯೇ ಸರಿ ಅನಿಸುವುದು.


 ಹೊಸ ವರುಷವು ಕನಸಿನ ಅಡಿಪಾಯವಾಗಿ  ಮಾಡಬೇಕಾದ ಕರ್ತವ್ಯ ಗಳ ಗಂಟೆ ನಮ್ಮನ್ನು ಬಡಿದು ಎಚ್ಚರಿಸುವ ರೀತಿಯಿದ್ದು ಹೊಸ ವರುಷದ ವೇಳಾಪಟ್ಟಿ ತಯಾರಿ ನಮ್ಮದಾಗಿರಬೇಕು. ಹೊಸ ವರುಷ ಆರಂಭವಾದಗ ನಾವು ನಮ್ಮ ಕನಸುಗಳೊಂದಿಗೆ ಸ್ವಾಗತಿಸಬೇಕು ವಿನಃ ಆಧುನಿಕ ಆಡಂಭರದ ಜೊತೆಯಲ್ಲ . ವರ್ಷದಂತೆ ಕನಸುಗಳು ಎಂದು ಬದಲಾಗಬಾರದು  ನಮ್ಮ ಕಾರ್ಯಗಳೇನು, ಗುರಿಯ ಹಾದಿ, ಪ್ರಯತ್ನಗಳು ಎತ್ತ ಸಾಗುತ್ತಿದೆ ಇವೆಲ್ಲ ವಿಮರ್ಶೆ ಗಳು ನಮ್ಮದಾಗಬೇಕು.ನಮ್ಮ ಆಲೋಚನೆಗಳಿಗೆ ಹೊಸದೊಂದು ರೂಪ ನೀಡಲು ಹೊಸ ವರುಷ ಒಂದು ನೆಪವಷ್ಟೇ.ಈ ನೆಪದಲ್ಲದರು ದಿನಚರಿಗಳು ಬದಲಾಗಿ ಒಂದು ಏನನ್ನಾದರೂ ಈ ವರುಷದಲ್ಲಿ ಸಾಧಿಸಬೇಕು ಎಂಬ ಛಲ ನಮ್ಮಲ್ಲಿದ್ದು ಪ್ರತಿಯೊಂದು ದಿನವನ್ನು ಹೊಸ ದಿನವೆಂದು ಭಾವಿಸಿ ಕನಸಿನ ಬೆನ್ನಟ್ಟಬೇಕು.


 ಪ್ರತಿ ಪಯಣವು ಸಂತೋಷದ ಒಂದು ಭಾಗವಾಗಿ ಅನುಭವಿಸಿ ಪ್ರತಿ ಅನುಭವಗಳಿಂದ ಕಲಿಯುತಿರಬೇಕು. ದಿನದ ಪ್ರಾರಂಭವು ಒಂದೊಳ್ಳೆ ದಿನವೆಂದು ಪ್ರಾರಂಭಿಸಿ ಆ ದಿನದಲ್ಲಿ ಏನು ಮಾಡಿದೀವಿ ಎಂದು ಕೊಂಚ ಸಮಯವಿಟ್ಟು ಯೋಚಿಸುವ ತಾಳ್ಮೆ ಇವೆಲ್ಲವೂ ನಮ್ಮ ಬದುಕಲ್ಲಿ ಅಳವಡಿಕೆಯಾದಗ ನಮ್ಮ ಬದುಕಿನಲ್ಲಿ ಕನಸುಗಳು ಬಹಳ ಮಹತ್ವಪೂರ್ಣವಾಗಿ ಅಮೂಲ್ಯವೆನಿಸುವುದು. ಕಳೆದು ಹೋದ ವರುಷದ ನೋವು ನಲಿವುಗಳು ನೆನಪಿನ ಜೋಲಿಗೆಯಲ್ಲಿ ಭದ್ರವಾಗಿರುತ್ತದ್ದು,ಒಂದು ಹೊಸ ಅದ್ಯಾಯ ಸೃಷ್ಟಿಸಲು ಈ ವರುಷವೊಂದು ಅವಕಾಶ ನೀಡುತಿದೆ ಎಂದು ಭಾವಿಸಿ ಒಂದೊಳ್ಳೆ ಸಂಕಲ್ಪದೊಂದಿಗೆ ಗುರಿಯತ್ತ ಮುನ್ನಡೆಯಬೇಕು ಮತ್ತು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಈ ವರುಷವೂ   ಅಡಿಪಾಯವಾಗಲಿ ಎಂಬ ಅತೀ ದೊಡ್ಡ ಸಂಕಲ್ಪ ನಮ್ಮದಾಗಬೇಕು.



ವಿಜಯಲಕ್ಷ್ಮಿ. ಬಿ

ಕೆಯ್ಯೂರು

ವಿವೇಕಾನಂದ ಕಾಲೇಜು ಪುತ್ತೂರು



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top