ಕುಂಬಳೆ: ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯ ಹಳ್ಳಕೋಡ್ಲು ಘಟಕದ ಶೋಭಕೃತ್ ಸಂವತ್ಸರದ ಗುರುವಂದನೆ- ದೀಪಕಾಣಿಕೆ, ಬೆಳೆ ಸಮರ್ಪಣಾ ಕಾರ್ಯಕ್ರಮವು ಭಾನುವಾರ (ಜ.28) ಹಳ್ಳಕೋಡ್ಲು ಘಟಕ ಗುರಿಕ್ಕಾರರಾದ ಇ.ಯಚ್. ಗಣಪತಿ ಭಟ್ ಇವರ ನಿವಾಸದಲ್ಲಿ ಜರಗಿತು.
ದೀಪ ಪ್ರಜ್ವಲನೆ, ಶಂಖನಾದ ಗುರುವಂದನೆಯೊಂದಿಗೆ ಆರಂಭವಾದ ಸಭೆಯ ಅಧ್ಯಕ್ಷತೆಯನ್ನು ಇ.ಯಚ್. ಗಣಪತಿ ಭಟ್ ವಹಿಸಿ ದೀಪಕಾಣಿಕೆ, ಬೆಳೆ ಸಮರ್ಪಣೆಗೆ ಮಾರ್ಗದರ್ಶನ ನೀಡಿದರು.
ಇತ್ತೀಚೆಗೆ ಶ್ರೀರಾಮ ಸಾಯೂಜ್ಯ ಹೊಂದಿದ ಗುಂಪೆ ವಲಯ ಅಧ್ಯಕ್ಷರು, ಶ್ರಾವಣಕೆರೆ ಘಟಕದ ಗುರಿಕ್ಕಾರರೂ ಆದ ಬಿ.ಯಲ್. ಶಂಭು ಹೆಬ್ಬಾರ್ ಶ್ರಾವಣಕೆರೆ ಇವರ ಆತ್ಮ ಸದ್ಗತಿಗಾಗಿ ಶ್ರೀರಾಮ ತಾರಕ ಮಂತ್ರ ಜಪಿಸಲಾಯಿತು.
ಶ್ರೀಶ್ರಿರಾಘವೇಶ್ವರಭಾರತೀ ಮಹಾಸ್ವಾಮಿಗಳು ಮುಳ್ಳೇರಿಯ ಮಂಡಲಾಧ್ಯಕ್ಷರಾದ ಮಾಡಾವು ಕೃಷ್ಣಮೂರ್ತಿಯವರ ಮನೆಗೆ ಚಿತ್ತೈಸಿ ಸ್ವರ್ಣ ಭಿಕ್ಷೆ ಸ್ವೀಕರಿಸುವ ವಿಚಾರವನ್ನು ತಿಳಿಸಿ ಆಮಂತ್ರಣ ಪತ್ರಿಕೆ ನೀಡಲಾಯಿತು.
ಫೆಬ್ರವರಿ 9-10 ರಂದು ಕಾಟುಕುಕ್ಕೆ ಶ್ರೀಸುಬ್ರಾಯ ದೇವಸ್ಥಾನದಲ್ಲಿನ ಭಿಕ್ಷಾಸೇವೆಯ ಮಾಹಿತಿ ಮತ್ತು ಖ್ಯಾಪನಾ ಮಂತ್ರಾಕ್ಷತೆ ಹಾಗೂ ಫೆಬ್ರವರಿ 11 ರಂದು ಜರಗುವ ಮಾಣಿ ಮಠದ ವಾರ್ಷಿಕೋತ್ಸವ ಆಮಂತ್ರಣ ಪತ್ರಿಕೆಯನ್ನು ವಿತರಿಸಲಾಯಿತು.
ರಾಮತಾರಕ ಮಂತ್ರ ಶಂಖನಾದದೊಂದಿಗೆ ಸಭೆ ಸಂಪನ್ನವಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


