ಸಾಹಿತ್ಯದ ಬೆಳವಣಿಗೆಗೆ ಮಾತೃಭಾಷೆ ಜೊತೆಯಲ್ಲಿ ಸಹೋದರ ಭಾಷೆಯ ಒಡನಾಟ ಬೇಕು: ರೇಮಂಡ್ ಡಿಕೂನಾ

Upayuktha
0


ಮಣಿಪಾಲ: ಯಾವುದೇ ಸಾಹಿತ್ಯದ ರಚನೆ ಮಾತೃ ಭಾಷೆಯ ಸರಿಯಾದ ಋಣ ಸಂದಾಯದ ಅವಕಾಶವಾಗಿದೆ. ನಮ್ಮ ಸುತ್ತಲಿನ ಸಹೋದರ ಭಾಷೆಯಲ್ಲಿ ಸಾಹಿತ್ಯದ ಓದುವ ಹವ್ಯಾಸ ಬಹಳಷ್ಟು ಲಾಭದಾಯಕ ಎಂದು ಹಿರಿಯ ಸಾಹಿತಿ ರೇಮಂಡ್ ಡಿಕೂನಾ ತಾಕೊಡೆ ನುಡಿದರು.


ಅವರು ಪಿಂಗಾರ ಸಾಹಿತ್ಯ ಬಳಗದಿಂದ ಮಣಿಪಾಲದ ದಶರಥನಗರದಲ್ಲಿ ಆಂಟನಿ ಲೂವಿಸ್ ಅವರ ಅಂಗಳದಲ್ಲಿ ಜ. 27 ರಂದು 20ನೆಯ ವರುಷದ ಬಹುಭಾಷಾ ಕವಿಗೋಷ್ಟಿಯ ಅಧ್ಯಕ್ಷರಾಗಿ ಮಾತನಾಡುತ್ತಿದ್ದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾ ಸುರೇಶ ನೆಗಳಗುಳಿ ಮಾತನಾಡಿ, ಸಾಹಿತಿ ಆಗಲು ಆಶಯ, ಆಕ್ರೋಶ, ಅಶಾಭಾವಗಳು ಬೇಕು ಮತ್ತು ಓದುವ ಹವ್ಯಾಸ ಬೆಳೆಸಬೇಕು ಎಂದು ಹೇಳಿದರು.


ಕನ್ನಡ, ಕೊಂಕಣಿ, ತುಳು, ತೆಲುಗು, ಹಿಂದಿ ಪಂಚಭಾಷಾ‌ ಕವಿಗೋಷ್ಟಿಗೆ ಹಿರಿಯ ಕೊಂಕಣಿ ಸಾಹಿತಿ ಡಾ ನಾಗೇಶ್ ಕುಮಾರ್ ಚಾಲನೆ ನೀಡಿ ಕವಿತೆ ಹಾಡಿದರು. ಪನ್ವಾರ್ ಕೊಂಕಣಿ ಮಾನಸಿಕ ಸಂಪಾದಕರಾದ ಜ್ಞಾನದೇವ್ ಮಲ್ಯ ಕವಿಗಳಿಗೆ ಪುಸ್ತಕ ಗೌರವ ನೀಡಿದರು. ಅನಿತಾ ಸಿಕ್ವೇರಾ ವಂದಿಸಿದರು.ಡಾಕ್ಟರೇಟ್‌ ಪ್ಲಾವಿಯಾ ಕ್ಯಾಸ್ಟಲಿನೊ ನಿರೂಪಿಸಿದರು.


ಕವಿಗಳಾದ ವಿನೋದ ಪ್ರಕಾಶ್ ಪಡುಬಿದ್ರಿ, ಸುಮಾಕಿರಣ್ ಬಸ್ರೂರು, ಪ್ರೇಮಾ ಆರ್ ಶೆಟ್ಟಿ ಮುಲ್ಕಿ, ಯಶೋಧ ಗಾಣಿಗ ಕುಂದಾಪುರ, ವಸಂತಿ ಅಂಬಪಾಡಿ, ಕೆ ವಾಣಿಶ್ರೀ, ಆಶೋಕ್ ಐತಾಳ್, ದಿಯಾ ಉದಯ್ ಡಿಯು, ನೇಹನ್ ಕ್ರಾಸ್ಟಾ ಉಡುಪಿ, ವ ಉಮೇಶ್ ಕಾರಂತ ಕುಂದಾಪುರ, ಮಂಜುನಾಥ ಗುಂಡ್ಮಿ, ಆಶ್ವಿನಿ ಕೆ, ಮಾತಿನ ರಮೇಶ್ ಕೆಮ್ಮಣ್ಣು, ಪ್ರೇಮ ಬಸನಗೌಡ ಬಿರಾದಾರ, ಅನಿತಾ ಸಿಕ್ವೇರಾ, ಡಾಕ್ಟರೇಟ್‌ ಪ್ಲಾವಿಯಾ ಕ್ಯಾಸ್ಟಲಿನೊ, ಜ್ಞಾನದೇವ್ ಮಲ್ಯ ಮಣಿಪಾಲ, ಡಾ ನಾಗೇಶ್ ಕುಮಾರ್, ರೇಮಂಡ್ ಡಿಕೂನಾ ತಾಕೊಡೆ, ಡಾ ಸುರೇಶ ನೆಗಳಗುಳಿ, ಮತ್ತು ಆಂಟನಿ ಲೂಯಿಸ್ ತಮ್ಮ ಕವಿತೆಗಳು ಸಾದರಪಡಿಸಿದರು.

ಜ್ಯೋತಿ ಲೂವಿಸ್‌ ಮತ್ತು ಆಲನ್ ಸಿಕ್ವೇರಾ ಸಹಕರಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   



Post a Comment

0 Comments
Post a Comment (0)
To Top