ನಿಟ್ಟೆಯಲ್ಲಿ ಹಳೆವಿದ್ಯಾರ್ಥಿಗಳ ಗ್ಲೋಬಲ್ ಅಲುಮ್ನಿ ರಿಯೂನಿಯನ್ ಕಾರ್ಯಕ್ರಮ

Upayuktha
0



ನಿಟ್ಟೆ: ನಿಟ್ಟೆಯ ಎನ್ಎಂಎಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ 1994ರ ಬ್ಯಾಚ್ನ ಸಿಲ್ವರ್ ರಿಯೂನಿಯನ್ ಹಾಗೂ ಹಳೆವಿದ್ಯಾರ್ಥಿ ಸಂಘವಾದ ವೆನಾಮಿತಾ ಆಯೋಜಿಸಿದ್ದ ಗ್ಲೋಬಲ್ ಅಲುಮ್ನಿ ರಿಯೂನಿಯನ್ ಕಾರ್ಯಕ್ರಮವು ಡಿಸೆಂಬರ್ 30, 2023 ರಂದು ನಡೆಯಿತು.




ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ನಿಟ್ಟೆಯ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಡಾ.ಗೋಪಾಲ್ ಮುಗೆರಾಯ ಭಾಗವಹಿಸಿದ್ದರು. ಸಂಸ್ಥೆಯ ನಿರಂತರ ಯಶಸ್ಸಿನಲ್ಲಿ ಹಳೆಯ ವಿದ್ಯಾರ್ಥಿಗಳ ಪ್ರಮುಖ ಪಾತ್ರವನ್ನು ಡಾ. ಮುಗೆರಾಯ ಪ್ರಸ್ತಾಪಿಸಿದ್ದಲ್ಲದೆ ಸಾಂಸ್ಥಿಕ ಬೆಳವಣಿಗೆಗೆ ನೆಟ್ ವರ್ಕಿಂಗ್ ನ ಮಹತ್ವವನ್ನು ತಿಳಿಸಿದರು.




ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್ಎಂಎಎಂಐಟಿಯ ಪ್ರಾಂಶುಪಾಲರಾದ ಡಾ.ನಿರಂಜನ್ ಎನ್.ಚಿಪ್ಲುಂಕರ್ ವಹಿಸಿದ್ದರು. ಅವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಸಂಸ್ಥೆಯು ಬೆಳೆದುಬಂದ ಹಾದಿಯ ಬಗೆಗೆ ಘಿತಿ ಹಂಚಿಕೊಂಡರು ಮತ್ತು ಮುಂಬರುವ ಕಾರ್ಯಕ್ರಮಗಳ ಬಗ್ಗೆ ಒಂದು ನೋಟವನ್ನು ನೀಡಿದರು.





ಕಾರ್ಯಕ್ರಮದ ಪ್ರಮುಖ ಅಂಶವೆಂದರೆ 1994 ರ ಬ್ಯಾಚ್ ನ ಮುನಿಯಾಲ್ ಉದಯ್ ಕುಮಾರ್ ಶೆಟ್ಟಿ ಅವರು ಹಂಚಿಕೊಂಡ ಅವರ ವಿದ್ಯಾರ್ಥಿ ಜೀವನದ ನೆನಪು. ಅವರು ಎನ್ಎಂಎಎಂಐಟಿಯಲ್ಲಿ ತಮ್ಮ ಸಮಯದ ಅಮೂಲ್ಯ ನೆನಪುಗಳು ಮತ್ತು ಅನುಭವಗಳನ್ನು ಹಂಚಿಕೊಂಡರು, ಅವರ ಯಶಸ್ವಿ ವೃತ್ತಿಜೀವನವನ್ನು ರೂಪಿಸುವಲ್ಲಿ ಸಂಸ್ಥೆಯ ಆಳವಾದ ಪ್ರಭಾವವನ್ನು ವಿವರಿಸಿದರು.





ವೆನಾಮಿತಾದ ಅಧ್ಯಕ್ಷೆ ಡಾ.ಪ್ರಭಾ ನಿರಂಜನ್ ಸ್ವಾಗತಿಸಿ ಸಂಘವು ನಡೆಸುತ್ತಿರುವ ವಿವಿಧ ಚಟುವಟಿಕೆಗಳ ಅವಲೋಕನವನ್ನು ನೀಡಿದರು. ವೆನಾಮಿತಾದ ಉಪಾಧ್ಯಕ್ಷ ಶ್ರೀ ಮಂಜುಕಿರಣ್ ವಂದನಾರ್ಪಣೆಗೈದರು. ಕಾರ್ಯಕ್ರಮವನ್ನು ಡಾ.ಅನುಷಾ ಮತ್ತು ನಚಿಕೇತ ನಾಯಕ್ ನಿರೂಪಿಸಿದರು.





ಕಲಾಂಜಲಿ ಕ್ಲಬ್ ನ ವಿದ್ಯಾರ್ಥಿಗಳು ಆಕರ್ಷಕ ಸ್ವಾಗತ ನೃತ್ಯದೊಂದಿಗೆ ಪ್ರೇಕ್ಷಕರನ್ನು ಮೋಡಿ ಮಾಡಿದರು. ಸ್ಟಿರಿಯೊ ಕ್ಲಬ್ ಸದಸ್ಯರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು, ಸಭಿಕರನ್ನು ರಂಜಿಸಿದರು ಮತ್ತು ಹಬ್ಬದ ವಾತಾವರಣಕ್ಕೆ ಕೊಡುಗೆ ನೀಡಿದರು.





ಸಿಲ್ವರ್ ರಿಯೂನಿಯನ್ ಮತ್ತು ಗ್ಲೋಬಲ್ ಅಲುಮ್ನಿ ರಿಯೂನಿಯನ್ ಪ್ರೀತಿಯ ನೆನಪುಗಳನ್ನು ಪುನರುಜ್ಜೀವನಗೊಳಿಸುವುದಲ್ಲದೆ, ಹಳೆಯ ವಿದ್ಯಾರ್ಥಿಗಳ ನಡುವಿನ ಬಂಧವನ್ನು ಬಲಪಡಿಸಿತು. ಇದು ನಿಟ್ಟೆಯ ಎನ್ಎಂಎಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ ಎಂದು ನಿಟ್ಟೆ ತಾಂತ್ರಿಕ ಕಾಲೇಜಿನ ಪತ್ರಿಕಾ ಪ್ರಕಟಣೆಯು ತಿಳಿಸಿದೆ.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top