ಸುರತ್ಕಲ್ : ಬೆಂಗಳೂರಿನ ವೀರಲೋಕ ಪ್ರಕಾಶನ ಗೋವಿಂದದಾಸ ಕಾಲೇಜು ಸುರತ್ಕಲ್ ಮತ್ತು ಉಡುಪಿ ಲೇಖಕಿಯರ ಮತ್ತು ವಾಚಕಿಯರ ಸಂಘ ಇವರ ಸಹಯೋಗದಲ್ಲಿ ಫೆಬ್ರವರಿ 3 ಮತ್ತು 4 ರಂದು ಗೋವಿಂದದಾಸ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ದೇಸಿ ಕಥಾಕಮ್ಮಟ ನಡೆಯಲಿದೆ.
ಜಿಲ್ಲೆಯ ಯುವ ಕಥೆಗಾರರನ್ನು ಪ್ರೋತ್ಸಾಯಿಸುವ ಉದ್ದೇಶದಿಂದ ಈ ಕಮ್ಮಟವನ್ನು ಆಯೋಜಿಸಲಾಗಿದೆ. ಭಾಗವಹಿಸುವವರಿಗೆ ಊಟದ ವ್ಯವಸ್ಥೆ ಮಾಡಲಾಗುವುದು. ಪ್ರಮಾಣ ಪತ್ರವನ್ನು ನೀಡಲಾಗುವುದು. ಕಮ್ಮಟದಲ್ಲಿ ಭಾಗವಹಿಸಲು 40 ಮಂದಿಗೆ ಮಾತ್ರ ಅವಕಾಶವಿದ್ದು, ಮೊದಲು ನೋಂದಾಯಿಸಿದ 40 ಜನರಿಗೆ ಅವಕಾಶ ನೀಡಲಾಗುವುದು. ಕಥಾ ಕಮ್ಮಟದಲ್ಲಿ ನಾಡಿನ ಹಿರಿಯ ಬರಹಗಾರರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
ಸೃಜನಶೀಲ ಸೃಷ್ಟಿ, ಕನ್ನಡ ಕಥಾ ಪರಂಪರೆ, ಕಥಾ ವಸ್ತು ಮತ್ತು ತಂತ್ರ, ಕಥಾ ರಚನೆಯ ಕೌಶಲ್ಯ ಈ ಬಗ್ಗೆ ಉಪನ್ಯಾಸ, ಚರ್ಚೆ ಮತ್ತು ಪ್ರಾಯೋಗಿಕ ತರಬೇತಿ ನೀಡಲಾಗುವುದು. ಆಸಕ್ತರು ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ ಮತ್ತು ಆಸಕ್ತೀಯ ಕ್ಷೇತ್ರದ ಕುರಿತಾದ ವಿವರಗಳನ್ನು ಈ ಕೆಳಗಿನ ಯಾವುದಾದರೊಂದು ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮಾಡಬಹುದು ಹಾಗೂ ಹೆಚ್ಚಿನ ವಿವರಗಳಿಗೆ ಡಾ. ನಿಕೇತನ, ಅಧ್ಯಕ್ಷರು, ಲೇಖಕಿಯರು ಮತ್ತು ವಾಚಕರ ಸಂಘ, ಉಡುಪಿ – 9164165883, ಡಾ. ಸಂತೋಷ್ ಆಳ್ವ, ಕನ್ನಡ ವಿಭಾಗ, ಗೋವಿಂದ ದಾಸ ಕಾಲೇಜು, ಸುರತ್ಕಲ್ – 8762076167 ಸಂಪರ್ಕಿಸಬೇಕಾಗಿ ಕೋರಲಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ